For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೂರೇ ತಂಡಗಳು ಮಾಡಿದ ಸಾಧನೆಯನ್ನು ಮಾಡಿದ ಭಾರತ: ಶತಕದ ಗೆಲುವು

ಟೀಮ್ ಇಂಡಿಯಾ ಎಡ್ಜ್‌ಬಸ್ಟನ್‌ನಲ್ಲಿ ಇತಿಹಾಸವನ್ನು ಬರೆದಿದೆ. ಆಂಡರ್ಸನ್‌ ತೆಂಡುಲ್ಕರ್‌ ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಭಾರತ, ಸರಣಿಯಲ್ಲಿ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಯುವ ಆಟಗಾರರು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಆಡಿದ್ದರಿಂದ, ಇಂಗ್ಲೆಂಡ್‌ ಸರಣಿಯಲ್ಲಿ ಗಿಲ್‌ ಪಡೆ ಶುಭಾರಂಭ ಮಾಡಿದೆ. ಈ ಮೂಲಕ ಟೀಮ್ ಇಂಡಿಯಾ ಮತ್ತೊಂದು ದಾಖಲೆಗೆ ತನ್ನ ಹೆಸರನ್ನು ನಮೂದಿಸಿಕೊಂಡಿದೆ. ಈ ಸಾಧನೆಯನ್ನು ವಿಶ್ವ ಕ್ರಿಕೆಟ್‌ನಲ್ಲಿ ಈ ಮೊದಲು ಎರಡೇ ತಂಡಗಳು ಮಾಡಿದ್ದವು.

ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ಟೀಮ್ ಇಂಡಿಯಾ ಈ ಮೊದಲು 8 ಟೆಸ್ಟ್‌ ಪಂದ್ಯಗಳನ್ನು ಆಡಿತ್ತು. ಈ ವೇಳೆ 7 ರಲ್ಲಿ ಸೋಲು, 1ರಲ್ಲಿ ಡ್ರಾ ಸಾಧಿಸಿತ್ತು. ಆದರೆ ಈ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಸಹ ಗೆದ್ದಿರಲಿಲ್ಲ. ಈ ಬರ ಭಾನುವಾರ ಕೊನೆಯಾಗಿದೆ. ಯುವ ಟೀಮ್ ಇಂಡಿಯಾ ಎಡ್ಜ್‌ಬಸ್ಟನ್‌ನಲ್ಲಿ ಇತಿಹಾಸ ನಿರ್ಮಿಸುವ ಮೂಲಕ ದಾಖಲೆ ಬರೆದಿದೆ. ಈ ಮೂಲಕ ಭಾರತ ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆದಿದೆ.

India Registers Historic 100th Test Victory Batting First

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿ 587 ರನ್‌ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿತು. ಈ ವೇಳೆ ತಂಡಕ್ಕೆ ನಾಯಕ ಶುಭಮನ್‌ ಗಿಲ್‌ ಆಧಾರವಾದರು. ಇವರು ಮೊದಲ ಇನಿಂಗ್ಸ್‌ನಲ್ಲಿ 269 ರನ್‌ಗಳ ಅಮೋಘ ಇನಿಂಗ್ಸ್‌ ಕಟ್ಟಿದರು. ಇದಕ್ಕೆ ಪ್ರತಿಯಾಗಿ ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 407 ರನ್‌ಗಳನ್ನು ಸೇರಿಸಿತು. 180 ರನ್‌ಗಳ ಇನಿಂಗ್ಸ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದ ಭಾರತ 6 ವಿಕೆಟ್‌ಗೆ 427 ರನ್‌ ಬಾರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲೂ ಗಿಲ್‌ 161 ರನ್‌ ಬಾರಿಸಿದರು. ಇಂಗ್ಲೆಂಡ್‌ 608 ರನ್‌ಗಳ ಗುರಿಯನ್ನು ಬೆನ್ನಟ್ಟಿ 143 ರನ್‌ಗಳಿ ಆಲೌಟ್ ಆಯಿತು. ಈ ಮೂಲಕ ಭಾರತ ಮೊದಲು ಬ್ಯಾಟ್ ಮಾಡಿ 100ನೇ ಗೆಲುವು ದಾಖಲಿಸಿತು.

ಆಸ್ಟ್ರೇಲಿಯಾಗೆ ಅಗ್ರ ಸ್ಥಾನ

ಮೊದಲು ಬ್ಯಾಟ್ ಮಾಡಿ 100ಕ್ಕೂ ಹೆಚ್ಚು ಗೆಲುವು ದಾಖಲಿಸಿದ ಕೀರ್ತಿ ಆಸ್ಟ್ರೇಲಿಯಾ ತಂಡದ್ದಾಗಿದೆ. ಆಸ್ಟ್ರೇಲಿಯಾ 234 ಗೆಲುವು ದಾಖಲಿಸಿದ್ದು ಅಗ್ರ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ಇದೆ. ಆಂಗ್ಲರು ಮೊದಲ ಬ್ಯಾಟ್ ಮಾಡಿ 216 ಗೆಲುವು ದಾಖಲಿಸಿದ್ದಾರೆ. ಎಡ್ಜ್‌ಬಸ್ಟನ್‌ ಅಂಗಳದಲ್ಲಿ ಗೆಲುವ ದಾಖಲಿಸಿದ ಮೊದಲ ಏಷ್ಯನ್‌ ತಂಡ ಹಿರಿಮೆಗೂ ಯಂಗ್ ಟೀಮ್ ಇಂಡಿಯಾ ಪಾತ್ರವಾಗಿದೆ.

India Registers Historic 100th Test Victory Batting First

ಉಭಯ ತಂಡಗಳ ನಡುವಿನ ಮೂರನೇ ಟೆಸ್ಟ್‌ ಪಂದ್ಯ ಲಾರ್ಡ್ಸ್‌ನಲ್ಲಿ ಗುರುವಾರದಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಗಿಲ್‌ ಪಡೆಯದ್ದಾಗಿದೆ. ಉಭಯ ತಂಡಗಳು ಈಗಾಗಲೇ ತಲಾ ಒಂದೊಂದು ಗೆಲುವು ದಾಖಲಿಸಿದ್ದರಿಂದ ಮೂರನೇ ಪಂದ್ಯ ಕುತೂಹಲ ಹೆಚ್ಚಿಸಿದೆ.

Story first published: Monday, July 7, 2025, 13:25 [IST]
Other articles published on Jul 7, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+