Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Manchester Test: ಟೀಮ್ ಇಂಡಿಯಾ ಈ ಸ್ಥಿತಿ ಕಂಡಿದ್ದು 42 ವರ್ಷಗಳಲ್ಲಿ ಇದೇ ಮೊದಲು

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 669 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 311 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಇನಿಂಗ್ಸ್‌ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾ ಬ್ಯಾಟಿಂಗ್‌ಗೆ ಬಂದಾಗ ಪುಟಿದೇಳುವ ಸೂಚನೆ ಇತ್ತು. ಆದರೆ ಮೊದಲ ಓವರ್‌ನಲ್ಲೇ ಇದೆಲ್ಲಾ ಠುಸ್‌ ಪಟಾಕಿ ಆಯಿತು. ಆರಂಭಿಕ ಯಶಸ್ವಿ ಜೈಸ್ವಾಲ್‌ ಹಾಗೂ ಸಾಯಿ ಸುದರ್ಶನ್‌ ಮೊದಲ ಓವರ್‌ನಲ್ಲಿ ಪೆವಿಲಿಯನ್‌ ಸೇರಿದರು.

ಇಂಗ್ಲೆಂಡ್‌ ಸಾಧಿಸಿದ್ದ 311 ರನ್‌ಗಳ ಮುನ್ನಡೆಗೆ, ಟೀಮ್ ಇಂಡಿಯಾ ಎರಡನೇ ಇನಿಂಗ್ಸ್‌ ಆರಂಭಿಸಿತು. ಭಾರತ ತಂಡದ ಪರ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್‌ ಆರಂಭಿಕರಾಗಿ ಕಣಕ್ಕೆ ಇಳಿದರು. ಈ ವೇಳೆ ಟೀಮ್ ಮ್ಯಾನೇಜ್ಮೆಂಟ್‌ ಇವರ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಆದರೆ ಈ ಎಲ್ಲ ನಿರೀಕ್ಷೆಗಳನ್ನು ಯಶಸ್ವಿ ಜೈಸ್ವಾಲ್‌ ಮಣ್ಣಾಗಿಸಿದರು.

India Repeats 42-Year Batting Blunder as Woakes Strikes Early

ಮೊದಲ ಓವರ್‌ನ್ನು ಕ್ರಿಸ್‌ ವೋಕ್ಸ್ ಮಾಡಿದರು. ಇವರು ಎಸೆದ ನಾಲ್ಕನೆ ಎಸೆತ ಸ್ಟಂಪ್‌ ಮೇಲೆ ಬಿದ್ದು, ಆಫ್‌ ಸ್ಟಂಪ್‌ ಆಚೆಗೆ ಹೊರಟಿತ್ತು. ಈ ಎಸೆತವನ್ನು ಪ್ಲೇಡ್‌ ಮಾಡಲು ಹೋದ ಯಶಸ್ವಿ ಜೈಸ್ವಾಲ್‌ ಬ್ಯಾಟ್‌ನ ಎಡ್ಜ್‌ಗೆ ಚೆಂಡು ತಗುಲಿತು. ಪರಿಣಾಮ ಫಸ್ಟ್‌ ಸ್ಲಿಪ್‌ನಲ್ಲಿದ್ದ ಜೋ ರೂಟ್‌ ಅಮೋಘ ಕ್ಯಾಚ್ ಪಡೆದರು. ಇವರು ಔಟ್ ಆಗುತ್ತಿದ್ದಂತೆ ಮೈದಾನಕ್ಕೆ ಸಾಯಿ ಸುದರ್ಶನ್‌ ಬಂದರು. ಇವರಿಗೆ ಕ್ರಿಸ್‌ ವೋಕ್ಸ್‌ ಶಾರ್ಟ್‌ ಆಫ್‌ ಲೆಂತ್‌ ಎಸೆತವನ್ನು ಹಾಕಿದರು. ಸಾಯಿ ಸುದರ್ಶನ್‌ ಬಿಡಬೇಕೋ, ಆಡಬೇಕೋ ಎಂಬ ಗೊಂದಲದಲ್ಲಿ ಇದ್ದರು. ಆಗ ವೋಕ್ಸ್‌ ಎಸೆತ ಸಾಯಿ ಸುದರ್ಶನ್‌ ಅವರ ಬ್ಯಾಟ್‌ಗೆ ತಾಗಿ ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ಹ್ಯಾರಿ ಬ್ರೂಕ್‌ಗೆ ಕ್ಯಾಚ್‌ ನೀಡಿದರು. ಈ ಮೂಲಕ ಸಾಯಿ ಸುದರ್ಶನ್‌ ಗೋಲ್ಡನ್‌ ಡಕ್‌ಗೆ ಬಲಿಯಾದರು.

42 ವರ್ಷಗಳಲ್ಲೇ ಮೊದಲು

ಮೊದಲ ಓವರ್‌ನ ನಾಲ್ಕನೇ ಹಾಗೂ ಐದನೇ ಎಸೆತದಲ್ಲಿ ವಿಕೆಟ್‌ ಪಡೆದ ವೋಕ್ಸ್‌ ಅಬ್ಬಿಸಿದರು. ಈ ಮೂಲಕ ಭಾರತ 42 ವರ್ಷಗಳ ಬಳಿಕ ಖಾತೆ ತೆರೆಯದೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 1983ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆದ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಭಾರತ ತನ್ನ ಮೊದಲ ಎರಡು ವಿಕೆಟ್‌ಗಳನ್ನು ರನ್‌ಗಳಿಸದೇ ಕಳೆದುಕೊಂಡಿತ್ತು. ಈ ಇನಿಂಗ್ಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಮಾಡಿದ ಸುನಿಲ್‌ ಗವಾಸ್ಕರ್‌ 236 ರನ್‌ ಸಿಡಿಸಿದ್ದರು.

ಪಂದ್ಯದ ಚಿತ್ರಣ

ನಾಲ್ಕನೇ ದಿನದಾಟವನ್ನು ಆರಂಭಿಸಿದ ಇಂಗ್ಲೆಂಡ್ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 198 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 141 ರನ್‌ ಸಿಡಿಸಿದರು. ಲಿಯಾಮ್ ಡಾಸನ್ (26), ಬ್ರೇಡಂ ಕಾರ್ಸ್‌ (47) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಭಾರತದ ಪರ ಸ್ಪಿನ್ ಬೌಲರ್‌ ರವೀಂದ್ರ ಜಡೇಜಾ 143 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಉಳಿದಂತೆ ಜಸ್ಪ್ರೀತ್ ಬುಮ್ರಾ ಹಾಗೂ ವಾಷಿಂಗ್ಟನ್‌ ಸುಂದರ್ ತಲಾ ಎರಡು ವಿಕೆಟ್‌ ಪಡೆದರು.

Story first published: Saturday, July 26, 2025, 20:16 [IST]
Other articles published on Jul 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+