ಐಸಿಸಿ ಚಾಂಪಿಯನ್‌ಶಿಪ್ ದಂಡ ಉಳಿಸಿಕೊಂಡ ಭಾರತ

ನವದೆಹಲಿ, ಜನವರಿ 28: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತರೂ ಭಾರತ ತನ್ನ ಐಸಿಸಿ ಚಾಂಪಿಯನ್‌ಶಿಪ್ ದಂಡವನ್ನು ತನ್ನಲ್ಲೆ ಉಳಿಸಿಕೊಂಡಿದೆ.
ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ
ದ.ಆಫ್ರಿಕಾದ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಗೆದ್ದ ಭಾರತ ತನ್ನ ಪಾಯಿಂಟ್ ಗಳಿಕೆ ಹೆಚ್ಚಿಸಿಕೊಂಡ ಕಾರಣ ಐಸಿಸಿ ಟೆಸ್ಟ್ ರ್ಯಾಂಕಿಂಗ್ ಆಧಾರದಲ್ಲಿ ನೀಡಲಾಗುವ ಈ ಚಾಂಪಿಯನ್‌ಶಿಪ್ ದಂಡ ಭಾರತದ ಪಾಲಾಗಿದೆ. ಇದರ ಜೊತೆಗೆ 1 ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನೂ ಭಾರತ ತಂಡ ಗೆದ್ದುಕೊಂಡಿದೆ.
124 ಪಾಯಿಂಟ್‌ಗಳೊಂದಿಗೆ ದ.ಆಫ್ರಿಕಾಕ್ಕೆ ಕಾಲಿಟ್ಟಿದ್ದ ಭಾರತ ಸತತವಾಗಿ ಎರಡು ಟೆಸ್ಟ್ ಸೋತು ಪಾಯಿಂಟ್ ಕಳೆದುಕೊಂಡಿತ್ತು ಆದರೆ ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಮತ್ತೆ ಪಾಯಿಂಟ್ಸ್ ಹೆಚ್ಚಿಸಿಕೊಂಡ ಕಾರಣ ಐಸಿಸಿ ಚಾಂಪಿಯನ್‌ಶಿಪ್ ದಂಡ ತನ್ನಲ್ಲೆ ಉಳಿಸಿಕೊಂಡಿದೆ.
115 ಪಾಯಿಂಟ್ ಹೊಂದಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಆಫ್ರಿಕಾವು ಕೆಲವು ದಿನಗಳಲ್ಲಿ ನಡೆಯುವ ಆಸ್ಟ್ರೇಲಿಯಾ ಮೇಲಿನ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದರೂ ಸಹಿತ ಭಾರತದಷ್ಟು ಪಾಯಿಂಟ್ಸ್ ಸಂಪಾದಿಸಲು ಸಾಧ್ಯವಿಲ್ಲದ ಕಾರಣ ಈ ವರ್ಷದ ಐಸಿಸಿ ಚಾಂಪಿಯನ್‌ಶಿಪ್ ದಂಡ ಭಾರತದ ಬಳಿಯೇ ಉಳಿಯಲಿದೆ. ಎರಡನೇ ಸ್ಥಾನಕ್ಕೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣೆಸಲಿವೆ.
2016ರಲ್ಲಿ ಮೊದಲ ಬಾರಿಗೆ ವಿರಾಟ್ ಕೋಹ್ಲಿ ಈ ದಂಡವನ್ನು ಪಡೆದಿದ್ದರು, ಈಗ ಸತತವಾಗಿ ಎರಡನೇ ಬಾರಿ ದಂಡವನ್ನು ಪಡೆಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications