Champions Trophy 2025: ಮಿಡ್ಲ್ ಆರ್ಡರ್‍ನಲ್ಲಿ ಯಾರಿಗೆ ಸಿಗುತ್ತೆ ಚಾನ್ಸ್?
ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಆಗಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸಲು ಭಾರತ ಸೇರಿದಂತೆ ಬೇರೆ ದೇಶಗಳು ಸಹ ಸನ್ನದ್ಧವಾಗಿವೆ. ಈಗಾಗಲೇ ಹಲವು ದೇಶಗಳು ತಮ್ಮ ತಮ್ಮ ತಂಡಗಳು ಈ ಟೂರ್ನಿಗೆ ಪ್ರಕಟಿಸವೆ. ಆದರೆ ಭಾರತ ಇನ್ನು ಸಹ ಈ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿಲ್ಲ. ಜನವರಿ 12ರೊಳಗೆ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಬಿಸಿಸಿಐ ಇಂದು ಮುಂಬೈನಲ್ಲಿ ಸಭೆ ಕರೆದಿದ್ದು ಸಭೆಯ ಬಳಿಕ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ಭಾರತ, ಬಲಿಷ್ಠ ತಂಡವನ್ನು ಕಟ್ಟುವತ್ತ ಚಿತ್ತ ನೆಟ್ಟಿದೆ. ಈ ವೇಳೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗವನ್ನು ಬಲಪಡಿಸಲು ರಣ ತಂತ್ರವನ್ನು ರೂಪಿಸಿಕೊಳ್ಳಲಾಗಿದೆ. ಭಾರತ ತಂಡದಲ್ಲಿ ಟಾಪ್ ಆರ್ಡರ್‍ನಂತೆ ಮಿಡ್ಲ್ ಆರ್ಡರ್‍ನಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಇವರಲ್ಲಿ ಯಾರೂ ಸೆಲೆಕ್ಟ್ ಆಗುತ್ತಾರೆ. ಯಾರು ಆದರೆ ಏನು ಲಾಭ ಎಂಬ ಬಗ್ಗೆ ವರದಿ ಇಲ್ಲಿದೆ.

ವಿರಾಟ್ ಮಾಸ್ಟರ್
ವಿರಾಟ್ ಕೊಹ್ಲಿ ಸದ್ಯ ವಿರಾಟ್ ಕೊಹ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದಾರೆ. ಆದರೆ ವಿರಾಟ್ ಐಸಿಸಿಯ ಟೂರ್ನಿಗಳಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹೀಗಾಗಿ ಇವರನ್ನು ತಂಡದಲ್ಲಿ ಆಯ್ಕೆ ಮಾಡುವುದು ಪಕ್ಕಾ ಆಗಿದೆ. ವಿರಾಟ್ ಕೊಹ್ಲಿ 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿ ಹಾಗೂ 2024ರ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯ. ವಿರಾಟ್ ಕೊಹ್ಲಿ ಈಗಾಗಲೇ ಐಸಿಸಿ ಏಕದಿನ ಮೆಗಾ ಟೂರ್ನಿಗಳಲ್ಲಿ 49 ಪಂದ್ಯಗಳನ್ನು ಆಡಿದ್ದು, 5 ಶತಕ ಹಾಗೂ 17 ಅರ್ಧಶತಕ ಸೇರಿದಂತೆ ಒಟ್ಟು 2324 ರನ್ ಸಿಡಿಸಿದ್ದಾರೆ. ಇವರು ತಂಡದಲ್ಲಿದ್ದರೆ ಎದುರಾಳಿ ಬೌಲರ್‍ಗಳು ಕಂಗಾಲಾಗುತ್ತಾರೆ. ಇವರು ತಮ್ಮ ಜೊತೆಗೆ ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುವ ಆಟಗಾರನಿಗೂ ಬ್ಯಾಟಿಂಗ್ ಮಾಡಲು ಸಹಾಯ ಮಾಡುತ್ತಾರೆ.
ಇಬ್ಬರು ವಿಕೆಟ್ ಕೀಪರ್‍ಗೆ ಅವಕಾಶ?
ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂಥ್ ಇಬ್ಬರೂ ತಂಡದಲ್ಲಿ ಸ್ಥಾನ ಪಡೆಯುವುದು ಪಕ್ಕಾ ಎಂಬಂತಾಗಿದೆ. ಇನ್ನು ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಬ್ಬರೂ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದರು. ಪಂತ್ ಸಿಡ್ನಿಯಲ್ಲಿ ಆಡಿದ ಧಾಟಿ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಇನ್ನು ಟೂರ್ನಿಯುದ್ದಕ್ಕೂ ರಾಹುಲ್ ಆಡಿದ ಧಾಟಿ ಬಿಸಿಸಿಐ ಆಯ್ಕೆ ಸಮಿತಿ ಮನ ಗೆದ್ದಿದೆ. ಇವರಿಬ್ಬರಲ್ಲಿ ಒಬ್ಬರು ಫಿನಿಷರ್ ರೋಲ್‌ಗೆ ಸೆಟ್ ಆಗಬಹುದು. ಇನ್ನು ಮತ್ತೊಬ್ಬ ತಂಡದ ಅವಶ್ಯಕತೆ ತಕ್ಕಂತೆ ಮಿಡ್ಲ್ ಆರ್ಡರ್‍ಗೆ ಆಧಾರವಾಗಬಲ್ಲ.

ಈಗಾಗಲೇ ಭಾರತ ತಂಡದ ಪರ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿರುವ ಯಶಸ್ವಿ ಜೈಸ್ವಾಲ್, ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಕತಾರುರಾಗಿದ್ದಾರೆ. ಆದರೆ ಇವರು ಯಾವ ಸ್ಥಾನದಲ್ಲಿ ಆಡುತ್ತಾರೆ ಎಂಬುದು ಇನ್ನು ಕನ್ಫರ್ಮ್ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications