ವಿಶ್ವಕಪ್: ಭಾರತ ಅಂತಿಮ ತಂಡ ಪ್ರಕಟಿಸುವ ದಿನಾಂಕ, ಸಮಯ-ಮಾಹಿತಿ

ಮುಂಬೈ, ಏಪ್ರಿಲ್ 13: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್‌ಗಾಗಿ ತಂಡವನ್ನು ಭಾರತ ಸೋಮವಾರ (ಏಪ್ರಿಲ್ 15) ಪ್ರಕಟಿಸಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶನಿವಾರ (ಏಪ್ರಿಲ್ 13) ಈ ವಿಚಾರವನ್ನು ಖಾತರಿಪಡಿಸಿದೆ.
ಸೋಮವಾರ ಸುಮಾರು 3 ಗಂಟೆ ವೇಳೆಗೆ ಭಾರತ ವಿಶ್ವಕಪ್ ಅಂತಿಮ ತಂಡ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಮುಂಬೈಯಲ್ಲಿ ನಡೆಯಲಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ತಂಡವನ್ನು ಪ್ರಕಟಿಸಲಾಗುವುದಾಗಿ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಆಯ್ಕೆ ಸಮಿತಿ ನಡೆಸುವ ಸಭೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೊಚ್ ರವಿ ಶಾಸ್ತ್ರಿ ಪಾಲ್ಗೊಳ್ಳಲಿದ್ದಾರೆ. ಇದೇ ಸಮಯದಲ್ಲಿ ಬ್ಯಾಟಿಂಗ್ ಕ್ರಮಾಂಕ 4ಕ್ಕೆ ಸೂಕ್ತ ಆಟಗಾರನ ಆರಿಸುವ ಕುರಿತು ದೀರ್ಘ ಚರ್ಚೆ ನಡೆಯಲಿರುವುದಾಗಿ ಹೇಳಲಾಗಿದೆ. ವಿಶ್ವಕಪ್ ಪಂದ್ಯ ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿದೆ.
Story first published: Saturday, April 13, 2019, 22:36 [IST]
Other articles published on Apr 13, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications