Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pahalgam Terror Attack: ಪಹಲ್ಗಾಮ್‌ ಉಗ್ರರರ ದಾಳಿ: ಪಾಕ್‌ ಮೇಲೆ ಕ್ರಿಕೆಟ್‌ ಸ್ಟ್ರೈಕ್‌

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಉಗ್ರರರ ದಾಳಿಯಲ್ಲಿ 27ಕ್ಕೂ ಹೆಚ್ಚು ಅಮಾಯಕರು ಸಾವನ್ನಪ್ಪಿದ್ದಾರೆ. ಈ ದಾಳಿಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಉಗ್ರರ ದಾಳಿಯ ಬಳಿಕ ಭಾರತದ ಸರ್ಕಾರದ ಸಚಿವ ಅಮಿತ್‌ ಶಾ ಹಾಗೂ ಉನ್ನತ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ದಾಳಿಯ ನೇರ ಪರಿಣಾಮ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್ ಕ್ರಿಕೆಟ್‌ ಟೂರ್ನಿಯ ಮೇಲೆ ಬಿದ್ದಿದೆ.

ಪಾಕಿಸ್ತಾನ ಸೂಪರ್‌ ಲೀಗ್‌ ಟೂರ್ನಿಯನ್ನು ಇಷ್ಟು ದಿನ ಲೈವ್ ಸ್ಟ್ರೀಮಿಂಗ್ ನಡೆಸುತ್ತಿದ್ದ ದೊಡ್ಡ ಫ್ಲಾಟ್ ಫಾರ್ಮ್‌ಗಳು ತಮ್ಮ ಕರ್ತವ್ಯದಿಂದ ಹಿಂದೆ ಸರಿದಿದ್ದು ಇದರ ನೇರ ಪರಿಣಾಮ, ಪಿಎಸ್‌ಎಲ್‌ ಮೇಲೆ ಬೀಳಲಿದೆ. ಫ್ಯಾನ್‌ಕೋಡ್‌ನಲ್ಲಿ ಪಿಎಸ್‌ಎಲ್‌ ಲೈವ್ ಸ್ಟ್ರೀಮಿಂಗ್ ನಡೆಯುತ್ತಿತ್ತು. ಈಗ ಫ್ಯಾನ್‌ಕೋಡ್ ಪಿಎಸ್‌ಎಲ್‌ನ ನೇರ ಪ್ರಸಾರವನ್ನು ನಿಲ್ಲಿಸಲು ನಿರ್ಧರಿಸಿದೆ.

India s FanCode Dream11 Pull Out of PSL 2025 Following Pahalgam Terror Attack

ಜಮ್ಮು ಕಾಶ್ಮೀರ್‌ದಲ್ಲಿ ನಡೆದ ದಾಳಿಯನ್ನು ಖಂಡೀಸಿರುವ ಭಾರತೀಯ ಕಂಪನಿಗಳು ತಮ್ಮದೇ ಆದ ರೀತಿಯಲ್ಲಿ ಪಾಠ ಕಲಿಸಿವೆ. ಭಾರತದಲ್ಲಿ ಐಪಿಎಲ್‌ನಂತೆ, ಪಾಕ್‌ನಲ್ಲಿ ಪಿಎಸ್‌ಎಲ್‌ ಪಂದ್ಯಗಳು ನಡೆದಿವೆ. ಈ ಟೂರ್ನಿಯ ನೇರ ಪ್ರಸಾರ ಫ್ಯಾನ್‌ ಕೋಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿತ್ತು. ಆದರೆ ಏಪ್ರಿಲ್‌ 24 ರಿಂದ ಇದರ ಪ್ರಸಾರಕ್ಕೆ ಬ್ರೇಕ್‌ ಬೀಳಲಿದೆ. ಇದೇ ಫ್ಲಾಟ್‌ ಫಾರ್ಮ್‌ನಲ್ಲಿ ಲಕ್ಷಾಂತರ ಅಭಿಮಾನಿಗಳು ಪಿಎಸ್‌ಎಲ್‌ ವೀಕ್ಷಿಸುತ್ತಿದ್ದರು. ಭಾರತ ಮೂಲದ ಫ್ಯಾನ್‌ ಕೋಡ್‌ ಕಂಪನಿಯ ನಿರ್ಧಾರದ ಬಳಿಕ ಪಾಕಿಸ್ತಾನ್ ಸೂಪರ್‌ ಲೀಗ್‌ನ ಡಿಜಿಟಲ್‌ ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಲಿದೆ.

ಪಾಕ್‌ ಮೇಲೆ ಕ್ರಿಕೆಟ್‌ ಸ್ಟ್ರೈಕ್‌

ಪಾಕಿಸ್ತಾನದಲ್ಲಿ ಏಪ್ರಿಲ್‌ 11 ರಿಂದ ಪಿಎಸ್‌ಎಲ್‌ ಆರಂಭವಾಗಿದ್ದು, ಮೇ 18ರ ವರೆಗೆ ನಡೆಯಲಿದೆ. ಈ ಟೂರ್ನಿಯನ ಡಿಜಿಟಲ್ ಫ್ಲಾಟ್ ಫಾರ್ಮ್‌ ಹಕ್ಕು ಭಾರತೀಯ ಮೂಲದ ಫ್ಯಾನ್‌ ಕೋಡ್‌ ಕಂಪನಿಗೆ ಸಿಕ್ಕಿತ್ತು. ಆದರೆ ಕಂಪನಿ ದಾಳಿಯ ಬಳಿಕ ನೇರ ಪ್ರಸಾರವನ್ನು ನಿಲ್ಲಿಸುವುದಾಗಿ ಘೋಷಿಸಿವೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಇನ್ನು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಫ್ಯಾನ್‌ಕೋಡ್‌ ತೆಗೆದುಕೊಂಡಿರುವ ನಿರ್ಧಾರ ಭಾರೀ ಪ್ರಶಂಸೆಗೆ ವ್ಯಕ್ತವಾಗಿದೆ.

ಪಿಎಸ್‌ಎಲ್‌ ಮೇಲೆ ನೇರ ಬ್ಯಾನ್‌ ಮಾಡಿದ ಕಂಪನಿ ಫ್ಯಾನ್‌ ಕೋಡ್ ಒಂದೇ ಅಲ್ಲವೇ ಅಲ್ಲ. ಭಾರತೀಯ ಮೂಲದ ಡ್ರೀಮ್‌ ಇಲೆವೆನ್‌ ಸಹ ಇಂತಹದ್ದೇ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಂಸ್ಥೆ ಪಿಎಸ್ಎಲ್ ಪಂದ್ಯಗಳನ್ನು ತನ್ನ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಿಂದ ತೆಗೆದುಹಾಕಿದೆ. ಫ್ಯಾನ್‌ಕೋಡ್ ಲೈವ್ ಸ್ಟ್ರೀಮಿಂಗ್ ನಿಲ್ಲಿಸಿದ್ದರಿಂದ ಪಿಎಸ್‌ಎಲ್‌ ಆದಾಯದ ಮೇಲೆ ಪೆಟ್ಟು ಬೀಳಲಿದೆ.

Story first published: Thursday, April 24, 2025, 20:38 [IST]
Other articles published on Apr 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+