ಭಾರತೀಯ ಪುರುಷ, ಮಹಿಳಾ ತಂಡ ಜೊತೆಯಾಗಿ ಇಂಗ್ಲೆಂಡ್‌ಗೆ ಪ್ರಯಾಣ

ನವದೆಹಲಿ: ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡ ಜೂನ್ 2ರಂದು ಜೊತೆಯಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ. ಎರಡೂ ತಂಡಗಳಿಗೂ ಇಂಗ್ಲೆಂಡ್‌ನಲ್ಲಿ ಸರಣಿಗಳು ನಡೆಯಲಿರುವುದರಿಂದ ಜೊತೆಯಾಗಿ ಪ್ರಯಾಣಿಸುವ ನಿರೀಕ್ಷೆಯಿದೆ.
ಭಾರತೀಯ ಪುರುಷ ಮತ್ತು ಮಹಿಳಾ ತಂಡದ ಆಟಗಾರರು ಮೇ 19ರಂದು ಮುಂಬೈನಲ್ಲಿ ಜೊತೆಯಾಗುವ ಸಾಧ್ಯತೆಯಿದೆ. ಆ ಬಳಿಕ ಎರಡೂ ತಂಡದ ಆಟಗಾರರು ಎರಡು ವಾರಗಳ ಕ್ವಾರಂಟೈನ್ ಪಾಲಿಸಲಿದ್ದಾರೆ. ಕ್ವಾರಂಟೈನ್ ಮುಗಿಯುತ್ತಲೇ ಭಾರತೀಯ ತಂಡಗಳು ಚಾರ್ಟರ್ಡ್ ಫ್ಲೈಟ್ ಮೂಲಕ ಇಂಗ್ಲೆಂಡ್‌ಗೆ ತೆರಳಲಿವೆ.
ಪಶ್ಚಿಮ ಕರಾವಳಿಯಿಂದ ಬೀಸಲಿರುವ ಚಂಡಮಾರುತದಿಂದಾಗಿ ತಂಡಗಳು ಇಂಗ್ಲೆಂಡ್ ತಲುಪುವುದು ತಡವಾಗಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಮುಂಬೈಯಲ್ಲಿ ವಾಸವಿರುವ ಸುಮಾರು 20 ಆಟಗಾರರು ಮೇ 19ರ ಬುಧವಾರದಿಂದಲೇ ಕ್ವಾರಂಟೈನ್ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್‌ಗೆ ಹೋಗಲಿರುವ ಭಾರತೀಯ ಪುರುಷರ ತಂಡ ಜೂನ್ 18-22ರ ವರೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆಡಲಿದೆ. ಆ ಬಳಿಕ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಮಹಿಳಾ ತಂಡ ಇಂಗ್ಲೆಂಡ್ ಎದುರು 1 ಟೆಸ್ಟ್, 3 ಏಕದಿನ ಮತ್ತು 3 ಟಿ20ಐ ಪಂದ್ಯಗಳನ್ನಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications