For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸ 2022ಕ್ಕೆ ಮುಂದೂಡಿಕೆ

Indias ODI tour of New Zealand postponed to 2022

ನವದೆಹಲಿ: ಬಿಡುವಿಲ್ಲದ ವೇಳಾಪಟ್ಟಿ ಮತ್ತು ಕೋವಿಡ್-19 ಭೀತಿಯಿಂದಾಗಿ ಟೀಮ್ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸ 2022ಕ್ಕೆ ಮುಂದೂಡಲ್ಪಟ್ಟಿದೆ. ವಿಶ್ವಕಪ್‌ ಸೂಪರ್ ಲೀಗ್‌ ಭಾಗವಾಗಿ ನ್ಯೂಜಿಲೆಂಡ್‌ಗೆ ಪ್ರವಾಸ ಹೋಗಲಿದ್ದ ಭಾರತ ಅಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಬೇಕಾಗಿತ್ತು. ಈ ಪಂದ್ಯಕ್ಕೂ ಮುನ್ನ ಭಾರತ ಅಲ್ಲಿ 14 ದಿನಗಳ ಕ್ವಾರಂಟೈನ್ ಪಾಲಿಸಬೇಕಾಗಿತ್ತು. ಈ ವರ್ಷ ನಡೆಯಬೇಕಾಗಿದ್ದ ಈ ಪ್ರವಾಸ ಪಂದ್ಯಗಳು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ.

ಟೀಮ್ ಇಂಡಿಯಾದ ನ್ಯೂಜಿಲೆಂಡ್ ಪ್ರವಾಸ ಮುಂದೂಡಲ್ಪಟ್ಟಿರುವ ಸಂಗತಿಯನ್ನು ನ್ಯೂಜಿಲೆಂಡ್ ಕ್ರಿಕೆಟ್‌ನ ವಕ್ತಾರರು ಖಾತರಿಪಡಿಸಿದ್ದಾರೆ. ಭಾರತ ಆಡಲಿದ್ದ ಈ ಮೂರು ಏಕದಿನ ಪಂದ್ಯಗಳು ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್‌ ಬಳಿಕ ನಡೆಯಲಿದೆ. ಇದಕ್ಕೂ ಮುನ್ನ ನವೆಂಬರ್‌ನಲ್ಲಿ ಭಾರತಕ್ಕೆ ಪ್ರವಾಸ ಬರುವ ನ್ಯೂಜಿಲೆಂಡ್ ತಂಡ ಇಲ್ಲಿ ಎರಡು ಟೆಸ್ಟ್, ಮೂರು ಟಿ20ಐ ಪಂದ್ಯಗಳನ್ನು ಆಡಲಿದೆ.

ಬಾಂಗ್ಲಾ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್‌ಗೆ ನ್ಯೂಜಿಲೆಂಡ್ ಆತಿಥ್ಯ
ಮುಂದಿನ ವರ್ಷ ಬೇಸಗೆ ವೇಳೆ ನ್ಯೂಜಿಲೆಂಡ್ ತಂಡ ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಆತಿಥ್ಯ ವಹಿಸಲಿದೆ. ಇದಲ್ಲದೆ ಮಾರ್ಚ್-ಏಪ್ರಿಲ್‌ನಲ್ಲಿ ಮಹಿಳಾ ವಿಶ್ವಕಪ್‌ನ ಏಳು ತಂಡಗಳಿಗೆ ನ್ಯೂಜಿಲೆಂಡ್ ಆತಿಥ್ಯ ವಹಿಸಲಿದೆ. ಅಂದ್ಹಾಗೆ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಆತಿಥ್ಯ ವಹಿಸುವಾಗ ಬಾಂಗ್ಲಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಟೆಸ್ಟ್ ಪಂದ್ಯಗಳನ್ನು ನಡೆಸಲಿದೆ. ಇದು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ. "ಚಳಿಗಾಲದಿಂದಲೂ ಸುದೀರ್ಘ ಪ್ರವಾಸಕ್ಕಾಗಿ ಬಹಳಷ್ಟು ಆಟಗಾರರು ಇಲ್ಲಿಗೆ ಬರುವುದಲ್ಲಿದ್ದಾರೆ. ಅವರಿಗೂ ನಾವು ತವರಿನಲ್ಲಿ ಸಮಯ ಕೊಡಬೇಕಾಗುತ್ತದೆ," ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್ ವೈಟ್ ಹೇಳಿದ್ದಾರೆ.

ಭಾರತ-ನ್ಯೂಜಿಲೆಂಡ್ ಮುಖಾಮುಖಿ ಯಾವಾಗ?
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಡೇಯ ಸಾರಿ ಮುಖಾಮುಖಿಯಾಗಿದ್ದು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ. ಈ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆದಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ಸೋತು ಮುಖಭಂಗ ಅನುಭವಿಸಿತ್ತು. WTC ಫೈನಲ್‌ನಲ್ಲಿ ಸೋತಿರುವ ಭಾರತ ತಂಡ ಮುಯ್ಯಿ ತೀರಿಸಿಕೊಳ್ಳುವುದಕ್ಕಾಗಿ ಕಾಯುತ್ತಿದೆ. ನವೆಂಬರ್‌ನಲ್ಲಿ ಮತ್ತೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತಕ್ಕೆ ಪ್ರವಾಸ ಬರಲಿರುವ ಕೇನ್ ವಿಲಿಯಮ್ಸನ್ ಪಡೆ ಭಾರತದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಹಾಗಂತ ಈ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ, ಆದರೆ ಈ ಟೆಸ್ಟ್ ಸರಣಿ ಟಿ20 ವಿಶ್ವಕಪ್‌ ಬಳಿಕ ನಡೆಯುವ ನಿರೀಕ್ಷೆಯಿದೆ.

ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್‌ 31ರಂದು ಭಾರತ-ಕಿವೀಸ್ ಪಂದ್ಯ
ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ನ ಭಾರತ ಪ್ರವಾಸಕ್ಕೂಮುನ್ನ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಅಕ್ಟೋಬರ್‌ 31ರಂದು ಈ ಪಂದ್ಯ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಗ್ರೂಪ್‌-2ರಲ್ಲಿವೆ. ರೌಂಡ್-1ರಲ್ಲಿರುವ ಗ್ರೂಪ್‌ 'ಎ'ಯಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್‌, ನಮೀಬಿಯಾ ದೇಶಗಳಿವೆ. ಗ್ರೂಪ್‌ 'ಬಿ'ಯಲ್ಲಿ ಬಾಂಗ್ಲಾದೇ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಿನಿಯಾ, ಓಮನ್ ದೇಶಗಳಿವೆ. ಸೂಪರ್ 12ನಲ್ಲಿರುವ ಗ್ರೂಪ್-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಗ್ರೂಪ್‌ 'ಎ'ಯ ವಿನ್ನರ್, ಗ್ರೂಪ್‌ 'ಬಿ'ಯ ರನ್ನರ್ ತಂಡಗಳಿವೆ. ಗ್ರೂಪ್‌-2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾ, ಗ್ರೂಪ್‌ 'ಎ'ಯ ರನ್ನರ್, ಗ್ರೂಪ್‌ 'ಬಿ'ಯ ವಿನ್ನರ್ ತಂಡಗಳಿವೆ. ಅಕ್ಟೋಬರ್‌ 17ರಂದು ಆರಂಭಗೊಳ್ಳುವ ಟಿ20 ವಿಶ್ವಕಪ್‌ ನವೆಂಬರ್ 14ರಂದು ಕೊನೆಗೊಳ್ಳಲಿದೆ.

Story first published: Thursday, September 16, 2021, 18:10 [IST]
Other articles published on Sep 16, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+