For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್: 4ನೇ ಏಕದಿನಕ್ಕೆ ಭಾರತದ ಸಂಭಾವ್ಯ XI ಆಟಗಾರರು

India’s predicted XI for 4th ODI – Three changes expected in Mohali

ಮೊಹಾಲಿ, ಮಾರ್ಚ್ 9: ರಾಂಚಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 32 ರನ್ ಸೋಲನುಭವಿಸಿದ ಬಳಿಕ ಭಾರತ, ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ಪಂದ್ಯವನ್ನು ಗೆದ್ದುಕೊಳ್ಳುವ ಯೋಜನೆಯಲ್ಲಿದೆ.

ಮೂರನೇ ಪಂದ್ಯದಲ್ಲಿ ಸೋತಿದ್ದರಿಂದ ಇತ್ತಂಡಗಳ ನಡುವಣ ಐದು ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 1-2ರಿಂದ ಉಳಿಸಿಕೊಂಡಿದೆ. ಭಾರತಕ್ಕೆ ಸರಣಿ ಗೆಲ್ಲಲು ಇನ್ನೊಂದೇ ಗೆಲುವು ಬಾಕಿಯಿರುವುದರಿಂದ ನಾಲ್ಕನೇ ಪಂದ್ಯ ಗೆದ್ದು ಸರಣಿ ಜಯದ ಹಾದಿ ಸುಲಭವಾಗಿಸುವತ್ತ ಟೀಮ್ ಇಂಡಿಯಾ ಕಣ್ಣಿಟ್ಟಿದೆ.

ಆರಂಭಿಕ ಮೂರೂ ಪಂದ್ಯಗಳನ್ನು ಪರಿಗಣಿಸಿದರೆ ಮೊಹಾಲಿ ಪಂದ್ಯಕ್ಕೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. 4ನೇ ಪಂದ್ಯಕ್ಕೆ ಭಾರತದ ಆಡುವ XI ಸಂಭಾವ್ಯ ತಂಡ ಹೀಗಿರಲಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡದ ಉಪ ನಾಯಕ ಫಾರ್ಮ್ ತೋರಿಕೊಳ್ಳುವಲ್ಲಿ ಸಂಪೂರ್ಣ ಎಡವಿದ್ದಾರೆ. ಏಕದಿನ ಸರಣಿಯ ಯಾವ ಪಂದ್ಯದಲ್ಲೂ ರೋಹಿತ್ ಉತ್ತಮ ಆಟ ತೋರಿಸಿಲ್ಲ. ಕಳೆದ ಪಂದ್ಯದಲ್ಲಿ ರೋಹಿತ್ 14 ರನ್‌ಗೆ ಎಲ್‌ಬಿಡಬ್ಲ್ಯೂ ಆಗಿ ನಿರ್ಗಮಿಸಿದ್ದರು.

ಕೆಎಲ್ ರಾಹುಲ್

ಕೆಎಲ್ ರಾಹುಲ್

ಮೂರನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಆಡುವ 11ರಲ್ಲಿ ಸ್ಥಾನ ಪಡೆಯುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಧವನ್ ಅವರೇ ಸ್ಥಾನ ಗಿಟ್ಟಿಸಿಕೊಂಡಿದ್ದರು. ರಾಂಚಿ ಪಂದ್ಯದಲ್ಲೂ ಧವನ್ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರಿಂದ 4ನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ರಾಂಚಿ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮಾತ್ರ ತಂಡದ ಗೆಲುವಿನ ನಿಟ್ಟಿನಲ್ಲಿ ಬ್ಯಾಟಿಂಗ್ ಹೋರಾಟ ನಡೆಸಿದ್ದು. ಉಳಿದ ಬ್ಯಾಟ್ಸ್ಮನ್‌ಗಳ ಸರಿಯಾದ ಬೆಂಬಲ ಇಲ್ಲದ್ದರಿಂದ ಭಾರತ ಗೆಲ್ಲುವ ಪಂದ್ಯವನ್ನು ಸೋತಿತ್ತು. 4ನೇ ಏಕದಿನದಲ್ಲಿ ಕೊಹ್ಲಿ ಮತ್ತದೆ 3ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಅಂಬಾಟಿ ರಾಯುಡು

ಅಂಬಾಟಿ ರಾಯುಡು

ಅಂಬಾಟಿ ರಾಯುಡು ಕೂಡ ರೋಹಿತ್, ಧವನ್ ಅವರಂತೆಯೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ ರಾಯುಡು ತಂಡಕ್ಕೆ ನೀಡಿದ್ದು ಕೇವಲ 2 ರನ್ ಮಾತ್ರ. ಆದರೂ ಮೊಹಾಲಿ ಪಂದ್ಯದಲ್ಲಿ ರಾಯುಡು ತಂಡದಲ್ಲಿ ಇರಲಿದ್ದಾರೆ.

ರಿಷಬ್ ಪಂತ್

ರಿಷಬ್ ಪಂತ್

ಭಾರತದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿರುವ ಪ್ರಕಾರ ಟೀಮ್ ಇಂಡಿಯಾದ ಎಂದಿನ ವಿಕೆಟ್ ಕೀಪರ್ ಎಂಎಸ್ ಧೋನಿ 4, 5ನೇ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಧೋನಿ ಸ್ಥಾನವನ್ನು ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಬ್ ಪಂತ್ ಆವರಿಸಿಕೊಳ್ಳುವುದರಲ್ಲಿದ್ದಾರೆ.

ಕೇದಾರ್ ಜಾಧವ್

ಕೇದಾರ್ ಜಾಧವ್

ಆಲ್ ರೌಂಡರ್ ಕೇದಾರ್ ಜಾಧವ್ ಉಳಿದ ಆಟಗಾರರಿಗೆ ಹೋಲಿಸಿದರೆ ಸಾಧಾರಣ ಪ್ರದರ್ಶನ ನೀಡಿದ್ದಾರೆ. ರಾಂಚಿ ಪಂದ್ಯದಲ್ಲಿ ಜಾಧವ್ 26 ರನ್ ಸೇರಿಸಿದ್ದರು. ವಿಕೆಟ್ ಮಾತ್ರ ದೊರೆತಿರಲಿಲ್ಲ. ಆದರೆ 4ನೇ ಪಂದ್ಯದಲ್ಲಿ ಜಾಧವ್ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವುದರಲ್ಲಿದ್ದಾರೆ.

ವಿಜಯ್ ಶಂಕರ್

ವಿಜಯ್ ಶಂಕರ್

ಆಲ್ ರೌಂಡರ್ ವಿಜಯ್ ಶಂಕರ್ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಹಿಂದಿನ ಪಂದ್ಯದಲ್ಲಿ 32 ರನ್ ಗಳಿಸಿದ್ದ ಶಂಕರ್‌ಗೆ ವಿಕೆಟ್ ಲಭಿಸಿರಲಿಲ್ಲ. ಆದರೆ ಆಡಿದ ಪಂದ್ಯಗಳಲ್ಲಂತೂ ವಿಜಯ್ ಆಟಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

ತಂಡದಲ್ಲಿ ಜಡೇಜಾ ಕೂಡ ಆಲ್ ರೌಂಡರ್ ಸ್ಥಾನದಲ್ಲಿದ್ದಾರೆ. ಆದರೆ ಜಡೇಜಾ ಕೂಡ ಅದ್ಭುತ ಅನ್ನುವಂತ ಪ್ರದರ್ಶನವನ್ನೇನನ್ನೂ ನೀಡುತ್ತಿಲ್ಲ. ಹಿಂದಿನ ಪಂದ್ಯಲ್ಲಿ ಜಡೇಜಾ 24 ರನ್ ಮಾತ್ರ ಸೇರಿಸಿದ್ದರು. ವಿಕೆಟ್ ಲಭಿಸಿರಲಿಲ್ಲ.

ಕುಲದೀಪ್ ಯಾದವ್

ಕುಲದೀಪ್ ಯಾದವ್

ಕುಲದೀಪ್ ಯಾದವ್ ತಂಡದ ಬೌಲಿಂಗ್ ಬಲವಾಗಿ ನಿಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ರಾಂಚಿ ಪಂದ್ಯದಲ್ಲಿ ಕುಲದೀಪ್ 64 ರನ್ನಿಗೆ 3 ವಿಕೆಟ್ ಉರುಳಿಸಿದ್ದರು. 10 ರನ್‌ಗಳ ಕೊಡುಗೆಯೂ ನೀಡಿದ್ದರು. ಯಾದವ್ 9ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವುದರಲ್ಲಿದ್ದಾರೆ.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ದ್ವಿತೀಯ ಪಂದ್ಯದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ತಂಡದಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ಭುವಿ ಕಾಣಿಸಿಕೊಳ್ಳಲಿಲ್ಲ. ದ್ವಿತೀಯ ಪಂದ್ಯವನ್ನು ಆಡಿದ್ದ ಅದೇ ತಂಡ ತೃತೀಯ ಪಂದ್ಯವನ್ನು ಆಡಿತ್ತು. ಆದರೆ 4ನೇ ಪಂದ್ಯದಲ್ಲಿ ಭುವಿ ತಂಡದಲ್ಲಿರಲಿದ್ದಾರೆ.

ಜಸ್‌ಪ್ರೀತ್ ಬೂಮ್ರಾ

ಜಸ್‌ಪ್ರೀತ್ ಬೂಮ್ರಾ

ರಾಂಚಿ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ 10 ಓವರ್‌ ಎಸೆದು 53 ರನ್ ನೀಡಿದ್ದರು. ಆದರೆ ಒಂದೂ ವಿಕೆಟ್ ಪಡೆದಿರಲಿಲ್ಲ. ಹಾಗಂತ ಬೂಮ್ರಾ ಬೌಲಿಂಗ್ ಉತ್ತಮವಾಗಿತ್ತು. ಆದರೆ ಆಸೀಸ್ 3ನೇ ಪಂದ್ಯದಲ್ಲಿ ತೀರಾ ಎಚ್ಚರಿಕೆ ಆಟವನ್ನಾಡಿತ್ತು.

Story first published: Saturday, March 9, 2019, 16:54 [IST]
Other articles published on Mar 9, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+