ಭಾರತ vs ಇಂಗ್ಲೆಂಡ್: ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಅಂತ್ಯವಾಗಿದೆ. ಈಗ ಮೂರು ಪಂದ್ಯಗಳ ಏಕದಿನ ಸರಣಿಗೆ ಎರಡು ತಂಡಗಳು ಕೂಡ ಸಜ್ಜಾಗಿದೆ. ಟಿ20 ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ರೋಚಕ ಕಾದಾಟವನ್ನು ನಡೆಸಿ 3-2 ಅಂತರದಿಂದ ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈಗ ಏಕದಿನ ಸರಣಿಯ ಸರದಿ.
ಮೂರು ಪಂದ್ಯಗಳ ಈ ಏಕದಿನ ಸರಣಿ ಪುಣೆಯಲ್ಲಿ ನಡೆಯಲಿದ್ದು ಎರಡೂ ತಂಡಗಳು ಸಾಕಷ್ಟು ಸಿದ್ಧತೆಯನ್ನು ನಡೆಸುತ್ತಿದೆ. ಏಕದಿನ ಮಾದರಿಯಲ್ಲಿಯೂ ಇಂಗ್ಲೆಂಡ್ ತಂಡ ಮೊದಲ ಶ್ರೇಯಾಂಕವನ್ನು ಹೊಂದಿದ್ದು ಭಾರತ ಎರಡನೇ ಶ್ರೇಯಾಂಕದ ತಂಡವಾಗಿದೆ. ಹೀಗಾಗಿ ಅಗ್ರ ಎರಡು ತಂಡಗಳ ನಡುವಿನ ಕಾದಾಟ ಅಭಿಮಾನಿಗಳಿಗೂ ಸಾಕಷ್ಟು ಕುತೂಹಲವನ್ನುಂಟು ಮಾಡಿದೆ.
ಪುಣೆಯಲ್ಲಿ ಮಂಗಳವಾರದಂದು ನಡೆಯುವ ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಬಳಗ ಹೀಗಿದೆ..

ಆರಂಭಿಕರಾಗಿ ರೋಹಿತ್- ಶಿಖರ್
ಏಕದಿನ ಮಾದರಿಯಲ್ಲಿ ಸುದೀರ್ಘ ಕಾಲದಿಂದ ಆರಂಭಿಕ ಜೋಡಿಯಾಗಿರುವ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲೂ ಮುಂದುವರಿಯುವುದರಲ್ಲಿ ಅನುಮಾನವಿಲ್ಲ. ರೋಹಿತ್ ಶರ್ಮಾ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಅದ್ಭುತವಾಗಿ ರನ್‌ಗಳಿಸುತ್ತಿದ್ದು ಏಕದಿನದಲ್ಲೂ ಇದೇ ಫಾರ್ಮ್ ಮುಂದುವರಿಯುವ ವಿಶ್ವಾಸವಿದೆ. ಇನ್ನೊಂದು ತುದಿಯಲ್ಲಿ ಶಿಖರ್ ಧವನ್ ರೋಹಿತ್‌ಗೆ ಉತ್ತಮ ಸಾಥ್ ನೀಡುವ ವಿಶ್ವಾಸವಿದೆ. ಈ ಜೋಡಿ ಬ್ಯಾಟಿಂಗ್‌ಗೆ ಇಳಿಯುವುದರಿಂದ ಎಡಗೈ ಬಲೈ ಬ್ಯಾಟಿಂಗ್ ಜೋಡಿ ದೊರಕಿದಂತಾಗುತ್ತದೆ.

ಮಧ್ಯಮ ಕ್ರಮಾಂಕ: ಕೊಹ್ಲಿ, ಪಂತ್, ಶ್ರೇಯಸ್ಸು
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ. ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್ ಹೊಂದಿದ್ದರು. ಐದು ಪಂದ್ಯಗಳಲ್ಲಿ ಕೊಹ್ಲಿ ಮೂರು ಬಾರಿ 70ಕ್ಕೂ ಅಧಿಕ ರನ್ ಬಾರಿಸಿ ಮಿಂಚಿದ್ದಾರೆ. ಕೊಹ್ಲಿ ಬಳಿಕ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಮುಂದುವರಿಯುವ ವಿಶ್ವಾಸವಿದೆ. ಕಳೆದ ಕೆಲ ತಿಂಗಳುಗಳಿಂದ ಅದ್ಔಉತವಾದ ಫಾರ್ಮ್‌ನಲ್ಲಿರುವ ಪಂತ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಈ ಫಾರ್ಮ್ ಮುಂದುವರಿಸುವ ವಿಶ್ವಾಸವಿದೆ. ಐದನೇ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಕಣಕ್ಕುಇಳಿಯುವ ಸಾಧ್ಯತೆ ದಟ್ಟವಾಗಿದೆ.

ಆಲ್‌ರೌಂಡರ್‌ಗಳು: ಹಾರ್ದಿಕ್, ಕೃಣಾಲ್, ಶಾರ್ದೂಲ್
ಆಲ್‌ರೌಂಡರ್‌ಗಳಾಗಿದೆ ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವಯುವುದು ಪಕ್ಕಾ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬೌಲಿಂಗ್ ಮೂಲಕವೂ ಹಾರ್ದಿಕ್ ಮಿಂಚುಹರಿಸಿದ್ದು ಭಾರತ ತಂಡಕ್ಕೆ ಆಶಾದಾಯಕ ಬೆಳವಣಿಗೆಯಾಗಿದೆ. ಇನ್ನು ಏಳನೇ ಕ್ರಮಾಂಕದಲ್ಲಿ ಚೊಚ್ಚಲ ಬಾರಿಗೆ ಭಾರತೀಯ ಏಕದಿನ ತಂಡಕ್ಕೆ ಕರೆ ಪಡೆದಿರುವ ಕೃಣಾಲ್ ಪಾಂಡ್ಯ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಬಳಿಕ 8ನೇ ಕ್ರಮಾಂಕದಲ್ಲಿ ವೇಗಿ ಶಾರ್ದೂಲ್ ಠಾಕೂರ್ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು.

ಬೌಲರ್‌ಗಳು: ಭುವಿ, ಚಾಹಲ್, ನಟರಾಜನ್
ಇನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೇಗದ ವಿಭಾಗದ ಜವಾಬ್ಧಾರಿಯನ್ನು ಭುವನೇಶ್ವರ್ ಕುಮಾರ್ ವಹಿಸಿಕೊಳ್ಳುವುದು ಪಕ್ಕಾ. ಭುವನೇಶ್ವರ್ ಕುಮಾರ್ ಟಿ20 ಸರಣಿಯಲ್ಲಿಯೂ ಅದ್ಭುತವಾಗಿ ಬೌಲಿಂಗ್ ದಾಳಿ ಮಾಡಿ ಇಂಗ್ಲೆಂಡ್ ದಾಂಡಿಗರಿಗೆ ಕಂಟಕವಾಗಿದ್ದರು. ಇನ್ನೋರ್ವ ವೇಗಿ ಟಿ ನಟರಾಜನ್ ಕೂಡ ಮುಂದಿನ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಯುಜುವೇಂದ್ರ ಚಾಹಲ್ ಸ್ಪಿನ್ನರ್ ಆಗಿ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವ ಸಂಭವವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications