IND vs NZ Test: ಪುಣೆ ಟೆಸ್ಟ್ ಗೆಲ್ಲಲು ಟೀಮ್ ಇಂಡಿಯಾ ಏನು ಮಾಡಬೇಕು?
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್‌ನ ಪುಣೆಯಲ್ಲಿ ನಡೆಯುತ್ತಿದೆ. ಶುಕ್ರವಾರ ಆಟದ ಮುಕ್ತಾಯದ ವೇಳೆ ಪ್ರವಾಸಿ ಕಿವೀಸ್ ತಂಡದ ಈ ಟೆಸ್ಟ್ ಪಂದ್ಯದಲ್ಲೂ ತನ್ನ ಬಿಗಿ ಹಿಡಿತವನ್ನು ಹೆಚ್ಚಿಸಿಕೊಂಡಿದೆ. ಈ ಪಂದ್ಯವೂ ಸಹ ಟೀಮ್ ಇಂಡಿಯಾ ಕೈಯಿಂದ ಜಾರುತ್ತಿದೆಯಾ ಎಂಬ ಭಾವನೆ ವ್ಯಕ್ತವಾಗಿದೆ. ಹಾಗಿದ್ದರೆ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದಲ್ಲಿ ಟೀಮ್ ಇಂಡಿಯಾ ಏನು ಮಾಡಬೇಕು ಎಂಬ ಬಗ್ಗೆ ವರದಿ ಇಲ್ಲಿದೆ.
ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿ ಎದುರಾಳಿಗಳಿಗೆ ಕಾಟ ನೀಡುವ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಸಪ್ಪಾಗಿದೆ. ಆಟದ ಎಲ್ಲ ವಿಭಾಗದಲ್ಲೂ ಭಾರತ, ನ್ಯೂಜಿಲೆಂಡ್‌ಗಿಂತಲೂ ಸಾಧಾರಣ ಆಟವನ್ನು ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕಂ ಬ್ಯಾಕ್ ಮಾಡುವ ಕನಸು ಕಾಣುತ್ತಿದೆ. ಹೀಗೆ ಮಾಡಿದ್ದೇ ಆದಲ್ಲಿ ನಿಜಕ್ಕೂ ಟಿಮ್ ಇಂಡಿಯಾ ಗೆಲುವು ಸಾಧಿಸಬಹುದು.

ಮೊದಲಾವಧಿಯಲ್ಲಿ ಮಾಡಬೇಕು ಆಲೌಟ್
ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಟೀಮ್ ಇಂಡಿಯಾ ಮೊದಲಾವಧಿಯ ಪಂದ್ಯದಲ್ಲಿ ಎಚ್ಚರಿಕೆಯ ಆಟವನ್ನು ಪ್ರದರ್ಶಿಸಬೇಕು. ಈ ವೇಳೆ ಪರಿಸ್ಥಿತಿಯ ಲಾಭವನ್ನು ಪಡೆದು ಕಿವೀಸ್ ತಂಡವನ್ನು ಕಟ್ಟಿ ಹಾಕಬೇಕು. ಈಗಾಗಲೇ ಬೃಹತ್ ಮೊತ್ತವನ್ನು ಕಲೆ ಹಾಕಿರುವ ನ್ಯೂಜಿಲೆಂಡ್ ರನ್ ವೇಗಕ್ಕೆ ಬ್ರೇಕ್ ಹಾಕಬೇಕು. ಇದಕ್ಕೆ ಟೀಮ್ ಇಂಡಿಯಾ ಬೌಲರ್ಸ್ ಮೊದಲಾವಧಿಯಲ್ಲಿ ವಿಕೆಟ್ ಬೇಟೆ ನಡೆಸಬೇಕಿದೆ. ಅಂದಗ ಮಾತ್ರ ಗೆಲುವಿನ ಆಸೆ ಕಾಣಬಹುದು.
ನೆಲಕಚ್ಚಿ ಬ್ಯಾಟಿಂಗ್
ಎರಡನೇ ಟೆಸ್ಟ್ ಪಂದ್ಯದಲ್ಲಿ ಇನ್ನು ಸಾಕಷ್ಟು ದಿನಗಳು ಬಾಕಿ ಇವೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ನೆಲಕಚ್ಚಿ ಬ್ಯಾಟಿಂಗ್ ಮಾಡಬೇಕು. ಅಂದಾಗ ಮಾತ್ರ ಎದುರಾಳಿ ನೀಡಿದ ಬೃಹತ್ ಮೊತ್ತದ ಸವಾಲಿಗೆ ಉತ್ತರ ನೀಡಬಹುದು.
ಡಿಫೆನ್ಸಿವ್ + ಅಟ್ಯಾಕಿಂಗ್
ಟೀಮ್ ಇಂಡಿಯಾದ ಮೊದಲ ಇನಿಂಗ್ಸ್‌ನಲ್ಲಿ ಕೊಂಚ ಅಟ್ಯಾಕಿಂಗ್ ಆಟಕ್ಕೆ ಮಣೆ ಹಾಕಿತ್ತು. ಈ ವೇಳೆ ಕೊಂಚ ಡಿಫೆನ್ಸಿವ್ ಆಟದ ನೆನಪನ್ನು ಟೀಮ್ ಇಂಡಿಯಾ ಬ್ಯಾಟರ್‌ಗಳು ಮಾಡಿಕೊಳ್ಳಬೇಕಿತ್ತು. ಆದರೆ ಈ ವೇಳೆ ಆಟಗಾರರು ಅಗ್ರೇಸಿವ್ ಆಟಕ್ಕೆ ಮಣೆ ಹಾಕಿ ವಿಕೆಟ್ ಕಳೆದುಕೊಂಡರು. ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ರಕ್ಷಣಾತ್ಮಕ ಆಟಕ್ಕೂ ಮಣೆ ಹಾಕಬೇಕಿದೆ. ಕೆಟ್ಟ ಎಸೆತಗಳಿಗೆ ದಂಡಿಸುತ್ತಾ ಸಾಗಿದರೆ, ರನ್‌ಗಳನ್ನು ಕಲೆ ಹಾಕಬಹುದು.
ಎಚ್ಚರಿಕೆಯ ಆಟ
ಟೀಮ್ ಇಂಡಿಯಾ ಸ್ಪಿನ್ ಬೌಲಿಂಗ್ ಆಡುವಾಗ ಎಡವಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎಚ್ಚರಿಕೆಯ ಆಟಕ್ಕೆ ಮಣೆ ಹಾಕುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಭಾರತ ಗೆಲುವಿನ ಕನಸು ಕಾಣಬಹುದು. ಅಲ್ಲದೆ ಟೀಮ್ ಇಂಡಿಯಾ ಸ್ಪಿನ್ ವಿರುದ್ಧ ತಮ್ಮ ಬತ್ತಳಿಕೆಯಲ್ಲಿನ ಅಸ್ತ್ರವನ್ನು ಬಳಿಸಬೇಕು.
ಸೆಷನ್ ಬೈ ಸೆಷನ್ ಆಟ
ಟೀಮ್ ಇಂಡಿಯಾ ಮೊದಲಾವಧಿಯಲ್ಲಿ ಆಟದಲ್ಲಿ ಕಿವೀಸ್ ತಂಡವನ್ನು ಆಲೌಟ್ ಮಾಡಿದರೂ, ಭಾರತಕ್ಕೆ ಸುಮಾರು 8 ಸೆಷನ್‌ಗಳು ಆಡಲು ಸಿಗುತ್ತವೆ. ಈ ಹಂತದಲ್ಲಿ ಟೀಮ್ ಇಂಡಿಯಾ ಆಟಗಾರರು ಸೆಷನ್ ಬೈ ಸೆಷನ್ ತಂಡದ ಮೇಲೆ ಹಿಡಿತವನ್ನು ಸಾಧಿಸುವ ಅನಿವಾರ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications