WTC ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಭಾರತಕ್ಕೆ ಲಭಿಸಿದ ಹಣ ಎಷ್ಟು?
ಲಾರ್ಡ್ಸ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಡೆಯುತ್ತಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸುತ್ತಿವೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರಸಕ್ತ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಶಸ್ತಿ ಮೊತ್ತವನ್ನು ಬಹಿರಂಗಗೊಳಿಸಿದೆ. ಹಾಗಿದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಹೊಂದಿರುವ ಭಾರತಕ್ಕೆ ಎಷ್ಟು ಹಣ ಸಿಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಸತತ ಎರಡು ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅರ್ಹತೆ ಪಡೆದಿದ್ದ ಭಾರತ, ಮೂರನೇ ಬಾರಿ ಫೈನಲ್ ತಲುಪುವಲ್ಲಿ ವಿಫಲವಾಗಿದೆ. ಭಾರತ ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತು. ಇನ್ನು ಟೀಮ್ ಇಂಡಿಯಾ ಎರಡು ಬಾರಿ ಪ್ರಶಸ್ತಿ ಗೆಲ್ಲುವಿನಿಂದ ದೂರ ಸರಿದಿದೆ.

ಭಾರತ ತವರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲನ್ನು ಅನುಭವಿಸ ಬೇಕಾಯಿತು. ಇನ್ನು ದಶಕಗಳ ಬಳಿಕ ಭಾರತ ತವರಿನಲ್ಲಿ ವೈಟ್ ವಾಶ್ ಸೋಲು ಕಂಡಿತು. ಇನ್ನು ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ 1-3 ರಿಂದ ಸೋಲು ಕಂಡಿತು. ಇದರಿಂದ ಭಾರತದ ಗೆಲುವಿನ ಶೇಕಡಾ ವಾರು 50 ಆಗಿದೆ. ಮೂರನೇ ಸ್ಥಾನದಲ್ಲಿ ಅಭಿಯಾನಕ್ಕೆ ಅಂತ್ಯ ಹಾಡಿದ ಭಾರತ ತಂಡಕ್ಕೆ ಐಸಿಸಿ 1.44 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಮೊತ್ತವನ್ನು ನೀಡಲಿದೆ. ಭಾರತದ ರೂಪಾಯಿಗೆ 12.30 ಕೋಟಿ ಆಗುತ್ತದೆ. ಕಳೆದ ಆವೃತ್ತಿಯಲ್ಲಿ ಈ ಬಹುಮಾನ ಮೊತ್ತ 3.84 ಕೋಟಿ ಆಗಿತ್ತು. ಇನ್ನು ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳಿಗೆ ನೀಡಲಾಗುವ ಬಹುಮಾನ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ.
ಬಹುಮಾನ ಮೊತ್ತ ಏರಿಕೆ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಂಡ ಪಡೆಯುವ ಮೊತ್ತದಲ್ಲಿ ಭಾರೀ ಹೆಚ್ಚಳವಾಗಿದೆ. ಕಳೆದ ಆವೃತ್ತಿಯ ಫೈನಲ್‌ನಲ್ಲಿ ವಿಜೇತ ತಂಡ ಸುಮಾರು 1.6 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಲಭಿಸಿತ್ತು. ಆದರೆ ಈ ಬಾರಿ ವಿಜೇತ ತಂಡ 3.6 ಮಿಲಿಯನ್ ಯುಎಸ್ ಡಾಲರ್ (30.76 ಕೋಟಿ ರೂ) ಆಗಿದೆ. ಇನ್ನು ಫೈನಲ್‌ನಲ್ಲಿ ಸೋಲು ಕಾಣುವ ತಂಡ 2.16 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಪಡೆಯಲಿದೆ. ಅಂದರೆ ಸುಮಾರು 18.45 ಕೋಟಿ ರೂ. ಪಡೆಯಲಿದೆ.

ಇನ್ನು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ 1.44 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಪಡೆಯಲಿದೆ. ಇನ್ನು ಐದನೇ ಸ್ಥಾನದಲ್ಲಿರುವ ಇಂಗ್ಲೆಂಡ್ ತಂಡ 960000 ಯುಎಸ್ ಡಾಲರ್ ಹಣವನ್ನು ಪಡೆಯಲಿದೆ. ಆರನೇ, ಏಳನೇ, ಎಂಟನೇ, ಒಂಬತ್ತನೇ ಸ್ಥಾನದಲ್ಲಿ ಕೊನೆಗಳಿಸುವ ತಂಡಗಳು 100,000 ಯುಎಸ್ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications