Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಂ. 1 ಪಟ್ಟದಿಂದ ಕೆಳಗಿಳಿದ ಭಾರತಕ್ಕೆ ಭಾರಿ ನಷ್ಟ!

ಕೈಸ್ಟ್ ಚರ್ಚ್, ಫೆ. 23: ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಆಸ್ಟ್ರೇಲಿಯಾ ವಿಶ್ವದ ನಂ.1 ಟೆಸ್ಟ್ ತಂಡವಾಗಿ ಹೊರ ಹೊಮ್ಮಿದೆ. ಈ ಮೂಲಕ ಟೀಂ ಇಂಡಿಯಾ ಕೆಳಕ್ಕೆ ಕುಸಿದಿದ್ದು, ಭಾರಿ ಮೊತ್ತದ ಬಹುಮಾನವನ್ನು ಕಳೆದುಕೊಂಡಿದೆ.

ಕಿವೀಸ್ ವಿರುದ್ಧ ಬುಧವಾರ (ಫೆಬ್ರವರಿ 24) ಗೆಲ್ಲಲು ಬೇಕಿದ್ದ 121ರನ್ ಗಳ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ್ದ ಆಸೀಸ್ ಪಡೆ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 54 ಓವರ್ ಗಳಲ್ಲಿ 201/3 ಸ್ಕೋರ್ ಮಾಡಿ ಗೆಲುವು ದಾಖಲಿಸಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಸ್ಟೀವ್ ಸ್ಮಿತ್ ಪಡೆ 20 ಓವರ್ ಗಳಲ್ಲಿ 70/1 ಸ್ಕೋರ್ ಮಾಡಿತ್ತು.

ಮೊದಲ ಟೆಸ್ಟ್ ಗೆದ್ದಿರುವ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಡ್ರಾ ಮಾಡಿಕೊಂಡಿದ್ದರೂ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುತ್ತಿತ್ತು. ನ್ಯೂಜಿಲೆಂಡ್ ಗೆದ್ದಿದ್ದರೆ ಮಾತ್ರ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿ ಮುಂದುವರೆಯಲು ಸಾಧ್ಯವಿತ್ತು.

India set to lose No. 1 Test rank and $500,000 prize money

ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ 109 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಭಾರತ 110 ಅಂಕ ಪಡೆದಿತ್ತು. ಕಿವೀಸ್ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ 112 ಅಂಕ ಕಲೆ ಹಾಕಿದ ಆಸೀಸ್ ತಂಡ ಅಗ್ರಪಟ್ಟಕ್ಕೇರಿದೆ.

ಬಹುಮಾನ ಮೊತ್ತ ಟಾಪ್ 4 ಟೆಸ್ಟ್ ತಂಡಗಳು (ಕಟ್ ಆಫ್ ದಿನಾಂಕ ಏಪ್ರಿಲ್ 01, 2016)
* ನಂ.1 ಸ್ಥಾನ ಪಡೆಯುವ ತಂಡಕ್ಕೆ $1 million

* ನಂ.2 ಸ್ಥಾನದ ತಂಡಕ್ಕೆ $500,000

* ನಂ.3 ಸ್ಥಾನದ ತಂಡಕ್ಕೆ $200,000
* ನಂ.4 ಸ್ಥಾನದ ತಂಡಕ್ಕೆ $100,000

ಟೆಸ್ಟ್ ಸ್ಥಾನಗಳು ಫೆಬ್ರವರಿ 24, 2016ರಂತೆ
1. ಆಸ್ಟ್ರೇಲಿಯಾ (112 ಅಂಕಗಳು)
2. ಭಾರತ (110)
3. ದಕ್ಷಿಣ ಆಫ್ರಿಕಾ (109)
4. ಪಾಕಿಸ್ತಾನ (106)
5. ಇಂಗ್ಲೆಂಡ್ (102)
6. ನ್ಯೂಜಿಲೆಂಡ್ (99)
7. ಶ್ರೀಲಂಕಾ (89)
8. ವೆಸ್ಟ್ ಇಂಡೀಸ್ (76)
9. ಬಾಂಗ್ಲಾದೇಶ (47)
10. ಜಿಂಬಾಬ್ವೆ (05)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+