Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸಿಸ್: 2ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 4 ಪ್ರಮುಖ ಬದಲಾವಣೆ

India set to make as many as 4 changes for 2nd Test

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಟೀಮ್ ಇಂಡಿಯಾ ಆಘಾತಕರ ರೀತಿಯಲ್ಲಿ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಬ್ಯಾಟಿಂಗ್ ನಡೆಸಿದರೂ ಭಾರತದ ಬಿಗುವಿನ ಬೌಲಿಂಗ್‌ ದಾಳಿಯಿಂದಾಗಿ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯುಂತಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯಂತ ಕನಿಷ್ಠ ಮೊತ್ತಕ್ಕೆ ಕುಸಿದು ಪಂದ್ಯವನ್ನು ಭಾರತ ಆತಿಥೇಯರಿಗೆ ಒಪ್ಪಿಸಿದೆ.

ಈ ಸೋಲಿನ ಜೊತೆಗೆ ಮುಂದಿನ ಮೂರು ಟೆಸ್ಟ್ ಪಂದ್ಯಗಳು ಭಾರತಕ್ಕೆ ಸಾಕಷ್ಟು ಕಠಿಣವಾಗಿರಲಿದೆ. ನಾಯಕ ವಿರಾಟ್ ಕೊಹ್ಲಿ ಸರಣಿಯ ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೂ ಅಲಭ್ಯರಾಗುತ್ತಿದ್ದು ತಂಡದಲ್ಲಿ ಕೆಲ ಅನಿವಾರ್ಯ ಬದಲಾವಣೆಗಳು ನಡೆಯಲಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಜೊತೆಗೆ ಮೊಹಮ್ಮದ್ ಶಮಿ ಕೂಡ ಗಾಯಗೊಂಡಿರುವ ಕಾರಣ ಬಾಕ್ಸಿಂಗ್ ಡೇ ಟೆಸ್ಟ್ ತಂಡದಲ್ಲಿ ಬದಲಾವಣೆಗಳು ನಡೆಯಲಿದೆ. ಹಾಗಾದರೆ ತಂಡದಲ್ಲಿನ ಪ್ರಮುಖ ಬದಲಾವಣೆಗಳು ಹೇಗಿರಲಿದೆ? ಮುಂದೆ ಓದಿ..

ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶ

ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶ

ಟೀಮ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಸುದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ರಾಹುಲ್‌ಗೆ ಅವಕಾಶ ನೀಡಿರಲಿಲ್ಲ.

ಸಿರಾಜ್ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಕಾಲ ಸನ್ನಿಹಿತ

ಸಿರಾಜ್ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಕಾಲ ಸನ್ನಿಹಿತ

ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಗಾಯಗೊಂಡು ಸರಣಿಯಿಂದ ಹೊರಬಿದ್ದಾರೆ. ಹೀಗಾಗಿ ಡಿಸೆಂಬರ್ 28ರಿಂದ ಆರಂಭವಾಗುವ 2ನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಶುಭ್ಮನ್ ಗಿಲ್ ಟೆಸ್ಟ್‌ಗೆ ಪದಾರ್ಪಣೆ?

ಶುಭ್ಮನ್ ಗಿಲ್ ಟೆಸ್ಟ್‌ಗೆ ಪದಾರ್ಪಣೆ?

ಇನ್ನು ಟೀಮ್ ಇಂಡಿಯಾದ ಆರಂಬಿಕನಾಗಿ ಪೃಥ್ವಿ ಶಾ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಪೃಥ್ವಿ ಶಾ ಅವರಿಗೆ ತಂಡದಲ್ಲಿ ಮತ್ತೆ ಅವಕಾಶ ನೀಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಪೃಥ್ವಿ ಶಾ ಬದಲಿಗೆ ಉತ್ತಮ ಫಾರ್ಮ್‌ನಲ್ಲಿರುವ ಶುಭ್ಮನ್ ಗಿಲ್‌ಗೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಈ ಮೂಲಕ ಗಿಲ್ ಮೊದಲ ಬಾರಿಗೆ ಟೆಸ್ಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯುವ ಸಾಧ್ಯತೆಯಿದೆ.

ವೃದ್ಧಿಮಾನ್ ಸಾಹ ಬದಲಿಗೆ ರಿಷಭ್ ಪಂತ್

ವೃದ್ಧಿಮಾನ್ ಸಾಹ ಬದಲಿಗೆ ರಿಷಭ್ ಪಂತ್

ಟೀಮ್ ಇಂಡಿಯಾದ ಅನುಭವಿ ಆಟಗಾರ ವೃದ್ಧಿಮಾನ್ ಸಾಹ ಕೂಡ ಮುಂದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನವನ್ನು ಪಡೆಯುವುದು ಅನುಮಾನವೆನಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ 2018/19ರ ಸರಣಿಯಲ್ಲಿ ರಿಷಭ್ ಪಂತ್ ಆಡಿದ ಅನುಭವ ಹೊಂದಿದ್ದು ಅಂದು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಪಂತ್‌ಗೆ ಅವಕಾಶ ನೀಡುವ ಸಾಧ್ಯತೆಯ ಬಗ್ಗೆ ಮೊದಲ ಪಂದ್ಯಕ್ಕೂ ಮುನ್ನವೇ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಎರಡನೇ ಟೆಸ್ಟ್‌ನಲ್ಲಿ ಪಂತ್ ಆಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

Story first published: Sunday, December 20, 2020, 13:36 [IST]
Other articles published on Dec 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+