For Quick Alerts
ALLOW NOTIFICATIONS  
For Daily Alerts
 

IND vs NZ Test: ಕಿವೀಸ್‌ಗೆ 107 ರನ್‌ ಗುರಿ ನೀಡಿದ ಭಾರತ; ರೋಚಕತೆ ಹುಟ್ಟಿಸಿರುವ ಟೆಸ್ಟ್‌

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಮೊದಲ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆಗಿದ್ದು, ರೋಹಿತ್‌ ಶರ್ಮಾ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಫೈಟ್‌ ಬ್ಯಾಕ್‌ ಮಾಡಿದೆ. ಎರಡನೇ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 462 ರನ್‌ ಸೇರಿಸಿ ಆಲೌಟ್ ಆಗಿದೆ. ಈ ಮೂಲಕ ನ್ಯೂಜಿಲೆಂಡ್‌ ಗೆಲುವಿಗೆ 107 ರನ್‌ ಗುರಿ ನೀಡಿದೆ.

ಶನಿವಾರ ಎರಡನೇ ಇನಿಂಗ್ಸ್‌ನ್ನು ಮೂರು ವಿಕೆಟ್‌ಗೆ 231 ರನ್‌ಗಳಿಂದ ಆಟ ಮುಂದುವರಿಸಿದ ಭಾರತ, ನಾಲ್ಕನೇ ದಿನದಾಟದಲ್ಲಿ 462 ರನ್‌ ಸೇರಿಸಿ ಆಲೌಟ್ ಆಯಿತು. ನ್ಯೂಜಿಲೆಂಡ್‌ ಗೆಲುವಿಗೆ ಭಾರತ ಸಾಧಾರಣ ಗುರಿಯನ್ನು ನೀಡಿದೆ.

India Sets 107-Run Target for New Zealand in Thrilling First Test

ಒಂದು ಹಂತದಲ್ಲಿ 231 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸರ್ಫರಾಜ್‌ ಖಾನ್ ಹಾಗೂ ರಿಷಭ್‌ ಪಂತ್ ಜೋಡಿ ಆಧಾರವಾಯಿತು. ಈ ಜೋಡಿಯನ್ನು ಕಟ್ಟಿ ಹಾಕಲು ನ್ಯೂಜಿಲೆಂಡ್ ಬ್ಯಾಟರ್‌ಗಳು ವಿಫಲರಾದರು. ತಮ್ಮ ಸ್ಟ್ರೆಂತ್‌ಗೆ ಅನುಗುಣವಾಗಿ ಬ್ಯಾಟ್ ಮಾಡಿದ ಜೋಡಿ ತಂಡವನ್ನು ಇನ್ನಿಂಗ್ಸ್‌ ಮುನ್ನಡೆಯತ್ತ ನೋಡುವಂತೆ ಮಾಡಿತು. ಸರ್ಫರಾಜ್‌ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಮೋಘ ಬ್ಯಾಟಿಂಗ್ ನಡೆಸಿದರು. 18 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 150 ರನ್‌ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.

54 ರನ್‌ಗಳಿಗೆ ಏಳು ವಿಕೆಟ್‌

ಒಂದು ಹಂತದಲ್ಲಿ ಭಾರತ ಮೂರು ವಿಕೆಟ್‌ ಕಳೆದುಕೊಂಡು 408 ರನ್‌ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ ಈ ವೇಳೆ ಟೀಮ್ ಇಂಡಿಯಾದ ಸರ್ಫರಾಜ್ ಖಾನ್‌ ಔಟ್ ಆದರು. ನ್ಯೂಜಿಲೆಂಡ್‌ ಹೊಸ ಚೆಂಡಿನ ಲಾಭ ಪಡೆದು ಅಬ್ಬರಿಸಿತು. ಈ ವೇಳೆ ಸೆಟ್‌ ಆಗಿದ್ದ ಸರ್ಫರಾಜ್‌ ಖಾನ್‌ ಅವರಿಗೆ ಓರೂಕ್‌ ಪೆವಿಲಿಯನ್ ಹಾದಿ ತೋರಿಸಿದರು.

India Sets 107-Run Target for New Zealand in Thrilling First Test

ಟೀಮ್ ಇಂಡಿಯಾ ಪರ ಈ ಹಂತದಲ್ಲಿ ಒಂದು ಒಳ್ಳೆಯ ಜೊತೆಯಾಟದ ಅವಶ್ಯಕತೆ ಇತ್ತು. ಆದರೆ ಟೀಮ್ ಇಂಡಿಯಾದ ಪರ ಅನುಭವಿ ಆಟಗಾರರು ಜವಾಬ್ದಾರಿ ಮರೆತರು. ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು. ಶತಕದ ಹೊಸ್ತಿಲಲ್ಲಿ ರಿಷಭ್‌ ಪಂತ್‌ ಎಡವಿದರು. ಓರೂಕ್‌ ಅವರ ಎಸೆದ ಚೆಂಡನ್ನು ಡಿಫೆನ್ಸ್‌ ಮಾಡಲು ಹೋಗಿ ಬ್ಯಾಟ್‌ನ ಅಂಚಿಗೆ ತಾಗಿದ ಚೆಂಡು ವಿಕೆಟ್‌ ಕಿತ್ತಿತ್ತು. ರಿಷಭ್‌ ಪಂತ್‌ 99 ರನ್‌ಗಳ ಕ್ಲಾಸಿಕ್‌ ಇನಿಂಗ್ಸ್‌ ಇಲ್ಲಿಗೆ ಕೊನೆ ಆಯಿತು.

ಕೆಎಲ್‌ ರಾಹುಲ್‌ 12

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಕೆಎಲ್‌ ರಾಹುಲ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಹೀರೋ ಆಗಿ ಮಿಂಚುವ ಅವಕಾಶವನ್ನು ರಾಹುಲ್‌ ಕೈ ಚೆಲ್ಲಿದರು. ಕೇವಲ 12 ರನ್‌ ಗಳಿಗೆ ಇವರು ಆಟ ಮುಗಿಸಿದರು. ಸ್ಟಾರ್ ಆಲ್‌ರೌಂಡರ್‌ 15 ರನ್‌ ಬಾರಿಸಿ ಔಟ್ ಆದರು.

India Sets 107-Run Target for New Zealand in Thrilling First Test

ಉಳಿದ ಬ್ಯಾಟರ್‌ಗಳು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಕೆಳ ಕ್ರಮಾಂಕದಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು.

ಕಿವೀಸ್‌ ಪರ ಮ್ಯಾಟ್‌ ಹೆನ್ರಿ ಹಾಗೂ ವಿಲಿಯಂ ಓರೂಕ್‌ ತಲಾ ಮೂರು ವಿಕೆಟ್‌ ಕಬಳಿಸಿ ಭಾರತಕ್ಕೆ ಪೆಟ್ಟು ನೀಡಿದರು.

ಕಿವೀಸ್‌ಗೆ 107 ರನ್‌ ಟಾರ್ಗೆಟ್‌

ನ್ಯೂಜಿಲೆಂಡ್ ತಂಡಕ್ಕೆ ಭಾರತ 107 ರನ್‌ಗಳ ಟಾರ್ಗೆಟ್‌ ನೀಡಿದೆ. ಸಾಮಾನ್ಯವಾಗಿ ನೋಡಿದರೆ ತುಂಬ ಸುಲಭ ಎಂದಂತೆ ಕಾಣುತ್ತದೆ. ಆದರೆ ಪಿಚ್‌ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Saturday, October 19, 2024, 17:48 [IST]
Other articles published on Oct 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+