For Quick Alerts
ALLOW NOTIFICATIONS  
For Daily Alerts
 

IND vs AUS: ಟ್ರಾವಿಸ್ ಹೆಡ್ ಬಗ್ಗೆ ಎಚ್ಚರಿಕೆವಹಿಸಲೇಬೇಕು ಭಾರತ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಇಲ್ಲಿಯವರೆಗೆ ಅದ್ಭುತವಾಗಿದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಆಡಿದ ಎಲ್ಲಾ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಈಗ ಟೀಮ್ ಇಂಡಿಯಾ ನಾಳೆ ಅಂದರೆ ಮಾರ್ಚ್ 4 ರಂದು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಸ್ಪೋಟ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತೊಮ್ಮೆ ಟೀಮ್ ಇಂಡಿಯಾವನ್ನು ಕಾಡುವ ಸಾಧ್ಯತೆಯಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಅನೇಕ ಮೀಮ್ಸ್‌ಗಳು ಟ್ರಾವಿಸ್ ಹೆಡ್ ಟೀಮ್ ಇಂಡಿಯಾಗೆ ಕಾಟ ನೀಡಬಹುದು ಎಂಬುದನ್ನು ತೋರಿಸುತ್ತಿದೆ. ಈ ವರ್ಷ ಆರಂಭದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಸಮಯದಲ್ಲಿ ಟ್ರಾವಿಸ್ ಹೆಡ್ ಟೀಮ್ ಇಂಡಿಯಾದಿಂದ ಗೆಲುವನ್ನು ಕಸಿದುಕೊಂಡಿದ್ದರು.

India should be wary of Travis Head in semi-final against Australia in Champions Trophy 2025

ಟ್ರಾವಿಸ್ ಹೆಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಭಾರತವು 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಸ್ಪರ್ಧೆಯಿಂದ ಹೊರಗುಳಿದಿತ್ತು. ಈಗ ಟ್ರಾವಿಸ್ ಹೆಡ್ 2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ಮತ್ತೊಮ್ಮೆ ಭಾರತದ ಕನಸನ್ನು ನುಚ್ಚುನೂರಾಗಿಸಲು ಸಿದ್ಧರಾಗಿದ್ದಾರೆ.

ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಉತ್ತಮ ಫಾರ್ಮ್‌ನಲ್ಲಿರುವುದು ಭಾರತಕ್ಕೆ ಕಳವಳಕಾರಿ ವಿಷಯ. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 59 ರನ್ ಗಳನ್ನು ಬಾರಿಸಿದ್ದರು. ಇತ್ತೀಚಿನ ದಿನಗಳಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ.

ಟ್ರಾವಿಸ್ ಹೆಡ್ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಮತ್ತು 2023ರ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಭಾರತದ ವಿರುದ್ಧ ಪಂದ್ಯ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಭಾರತ ಚಾಂಪಿಯನ್ ಆಗುವುದನ್ನು ತಪ್ಪಿಸಿದ್ದಾರೆ. ಆದ್ದರಿಂದ, ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ಟ್ರಾವಿಸ್ ಹೆಡ್‌ನ ಸವಾಲಿನ ಬಗ್ಗೆ ಎಚ್ಚರದಿಂದಿರಬೇಕಾಗಿದೆ.

ಭಾರತ ವಿರುದ್ಧ ಟ್ರಾವಿಸ್ ಹೆಡ್ 9 ಏಕದಿನ ಪಂದ್ಯಗಳಲ್ಲಿ 101.76 ಸ್ಟ್ರೈಕ್ ರೇಟ್‌ನಲ್ಲಿ 345 ರನ್ ಗಳಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಹೆಡ್ 15 ಪಂದ್ಯಗಳಲ್ಲಿ 1163 ರನ್ ಗಳಿಸಿದ್ದರೆ, ಟಿ20ಯಲ್ಲಿ 8 ಪಂದ್ಯಗಳಿಂದ 225 ರನ್ ಗಳಿಸಿದ್ದಾರೆ. 2023 ರ ವಿಶ್ವಕಪ್ ಫೈನಲ್‌ನಲ್ಲಿ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 137 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಇದು ಭಾರತದ ಟ್ರೋಫಿಯನ್ನು ಎತ್ತುವ ಕನಸನ್ನು ಭಗ್ನಗೊಳಿಸಿತು. ಈ ಪಂದ್ಯದ ಸೋಲನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ, 2025 ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಕಟ್ಟಿ ಹಾಕುವುದು ಭಾರತ ತಂಡಕ್ಕೆ ಮುಖ್ಯವಾದ ಕೆಲಸವಾಗಿದೆ.

ಭಾರತದ ಕನಸುಗಳಿಗೆ ಹೆಡ್ ಅಡ್ಡಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ರ ಫೈನಲ್‌ನಲ್ಲಿ ಟ್ರಾವಿಸ್ ಹೆಡ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಬೌನ್ಸಿ ಓವಲ್ ಪಿಚ್‌ನಲ್ಲಿ ಟ್ರಾವಿಸ್ ಹೆಡ್ 174 ಎಸೆತಗಳಲ್ಲಿ 163 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾದ ಪ್ರಶಸ್ತಿ ಗೆಲುವಿಗೆ ಅಡಿಪಾಯ ಹಾಕಿದ್ದರು. ಇದಲ್ಲದೆ, ಆಸ್ಟ್ರೇಲಿಯಾ 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಿಂದ ಗೆಲ್ಲುವ ಮೂಲಕ ಭಾರತದ ಡಬ್ಲ್ಯೂಟಿಸಿ ಫೈನಲ್ ಕನಸನ್ನು ಛಿದ್ರಗೊಳಿಸಿತು. ಇದರಲ್ಲಿ ಟ್ರಾವಿಸ್ ಹೆಡ್ ಪ್ರಮುಖ ಪಾತ್ರ ವಹಿಸಿದ್ದರು.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಟ್ರಾವಿಸ್ ಹೆಡ್ ಸತತ ಶತಕಗಳನ್ನು ಬಾರಿಸಿದ್ದರು. ಅವರು ಕ್ರಮವಾಗಿ 140 ಮತ್ತು 152 ರನ್‌ಗಳನ್ನು ಕಲೆ ಹಾಕಿದ್ದರು. ಇದರೊಂದಿಗೆ ಅವರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಟ್ರಾವಿಸ್ ಹೆಡ್ 9 ಇನ್ನಿಂಗ್ಸ್‌ಗಳಲ್ಲಿ 56 ಸರಾಸರಿಯಲ್ಲಿ 448 ರನ್ ಗಳಿಸಿದರು.

Story first published: Monday, March 3, 2025, 17:51 [IST]
Other articles published on Mar 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+