Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತಕ್ಕೆ ಪ್ರಮುಖ ಸಲಹೆ ಕೊಟ್ಟ ಕಿವೀಸ್ ಮಾಜಿ ಕೋಚ್!

India should consider Mayank Agarwal as opener for WTC final, suggests Mike Hesson

ನವದೆಹಲಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಸುದೀರ್ಘ ಕಾಲ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಮೈಕ್ ಹೆಸನ್ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾಕ್ಕೆ ಒಂದು ಪ್ರಮುಖ ಸಲಹೆ ನೀಡಿದ್ದಾರೆ. ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಆರಂಭಿಕರಾಗಿ ಆಡಿಸಬೇಕು ಎಂದು ಹೆಸನ್ ಹೇಳಿದ್ದಾರೆ.

ಪಿಟಿಐಗೆ ಸಂದರ್ಶನ ನೀಡಿದ ಮೈಕ್ ಹೆಸನ್, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ವೇಳೆ ಭಾರತ ತಂಡದಲ್ಲಿ ಶುಬ್ಮನ್‌ ಗಿಲ್ ಮತ್ತು ರೋಹಿತ್ ಶರ್ಮಾ ಕಾಂಬಿನೇಶನ್ ಉಳಿಸಿಕೊಳ್ಳುವ ಬದಲು ಮಯಾಂಕ್ ಅಗರ್ವಾಲ್‌ ಅವರನ್ನು ಆರಂಭಿಕರಾಗಿ ಕಳುಹಿಸಿ ಎಂದಿದ್ದಾರೆ.

ಕೋವಿಡ್-19 ಕಾರಣ ಕಡಿಮೆ ಅಭ್ಯಾಸ ನಡೆಸಿರುವ ಭಾರತೀಯ ಟೆಸ್ಟ್‌ ತಂಡ ಜೂನ್ 18-22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ರೋಸ್‌ ಬೌಲ್ ಸ್ಟೇಡಿಯಂನಲ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಸವಾಲು ಸ್ವೀಕರಿಸಲಿದೆ. ನ್ಯೂಜಿಲೆಂಡ್ ಈಗಾಗಲೇ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿ ಆಡುತ್ತ ಒಳ್ಳೆಯ ಅಭ್ಯಾಸದಲ್ಲೂ ತೊಡಗಿದೆ.

'ತಂಡ ಆಯ್ಕೆ ಸಮಿತಿ ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಅವರನ್ನು ಆರಂಭಿಕರಾಗಿ ಬಹುಶಃ ಕಳುಹಿಸುತ್ತದೆ. ಆದರೆ ಮಯಾಂಕ್ ಅಗರ್ವಾಲ್ ಅವರನ್ನು ಪರಿಗಣಿಸಬೇಕು ಎಂದು ನನಗನ್ನಿಸುತ್ತದೆ. ಯಾಕೆಂದರೆ ಅವರಿಗೆ ನ್ಯೂಜಿಲೆಂಡ್ ಅನ್ನು ನ್ಯೂಜಿಲೆಂಡ್‌ನಲ್ಲಿ ಎದುರಿಸಿದ ಅನುಭವವಿದೆ,' ಎಂದು ಹೆಸನ್ ಹೇಳಿದ್ದಾರೆ.

ನ್ಯೂಜಿಲೆಂಡ್‌ಗೆ ಹೋಲಿಸಿ ಭಾರತದ ತಯಾರಿಯ ಬಗ್ಗೆ ಮಾತನಾಡಿದ ಹೆಸನ್, 'ಪಂದ್ಯದ ಅಭ್ಯಾಸ ಯಾವತ್ತಿಗೂ ಉಪಕಾರಿ. ನಿಮಗ್ಗೊತ್ತಾ, ಪ್ರತೀ ಮೈದಾನವೂ ಭಿನ್ನವಾಗಿರುತ್ತವೆ, ಕಠಿಣವಾಗಿರುತ್ತವೆ,' ಎಂದಿದ್ದಾರೆ. ಮೈಕ್ ಹೆಸನ್ ಸದ್ಯ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮುಖ್ಯ ಕೋಚ್ ಆಗಿದ್ದಾರೆ.

Story first published: Wednesday, June 9, 2021, 18:57 [IST]
Other articles published on Jun 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+