Asia Cup T20: BCCI ಆಯ್ಕೆ ಸಮಿತಿಯ ಚಿಂತೆ ಹೆಚ್ಚಿಸಿರುವ 6 ಆಟಗಾರರು
ಭಾರತದ ಆಟಗಾರರು ಸದ್ಯ ವಿಶ್ರಾಂತಿ ಮೂಡ್‌ನಲ್ಲಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ಆಟಗಾರರು ಸದ್ಯ ಕುಟುಂಬದ ಜೊತೆ ಕಾಲವನ್ನು ಕಳೆಯುತ್ತಿದ್ದಾರೆ. ಈ ವೇಳೆ ಎಲ್ಲರ ಕಣ್ಣುಗಳು ಏಷ್ಯಾ ಕಪ್‌ಗಾಗಿ ಪ್ರಕಟಿಸಲಿರುವ ಟೀಮ್ ಇಂಡಿಯಾದ ಮೇಲೆ ನೆಟ್ಟಿರಲಿವೆ. ಟೀಮ್ ಇಂಡಿಯಾವನ್ನು ಈ ಸರಣಿಗೆ ಸೆಪ್ಟಂಬರ್ 19 ರಂದು ಪ್ರಕಟಿಸುವ ಸಾಧ್ಯತೆ ಇದೆ. ಈ ವೆಳೆ ಬಿಸಿಸಿಐ ಆಯ್ಕೆ ಸಮಿತಿಯ ಮುಂದೆ ದೊಡ್ಡ ಪ್ರಶ್ನೆಯೊಂದು ಉದ್ಭವಿಸಿದೆ. ಯಾರಿಗೆ ಮಣೆ ಹಾಕಬೇಕು?
ಟೀಮ್ ಇಂಡಿಯಾದಲ್ಲಿ ಪ್ರತಿಭಾನ್ವಿತ ಆಟಗಾರರಿಗೆ ಏನು ಕಮ್ಮಿ ಇಲ್ಲ. ಈಗ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಈ ಸ್ಥಾನದ ಮೇಲೆ ಹಲವು ಸ್ಟಾರ್ ಆಟಗಾರರು ಕಣ್ಣು ನೆಟ್ಟಿದ್ದಾರೆ. ಒಂದು ಸ್ಥಾನದ ಮೇಲೆ ಇಬ್ಬರು ಆಟಗಾರರು ಪೈಪೋಟಿಯನ್ನು ನೀಡುತ್ತಿದ್ದಾರೆ. ಇಂತಹ ಸಮಯದಲ್ಲಿ ಆಯ್ಕೆದಾರರಿಗೂ ಯಾರಿಗೆ ಮಣೆ ಹಾಕಬೇಕು ಎಂಬ ಪ್ರಶ್ನೆ ಉದ್ಭವಿಸಿದೆ. ಯಾರಿಗೆ ತಂಡದಲ್ಲಿ ಇಟ್ಟುಕೊಂಡರೆ ಹೆಚ್ಚು ಲಾಭ ಎಂಬ ಲೆಕ್ಕಾಚಾರವನ್ನು ಆರಂಭಿಸಿದೆ.

ಟೀಮ್ ಇಂಡಿಯಾದಲ್ಲಿ ಕಳೆದ ಒಂದು ವರ್ಷದಿಂದಲೂ ಯುವ ಆಟಗಾರರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ಟಿ20 ಸರಣಿಗೆ ಕಂ ಬ್ಯಾಕ್ ಮಾಡಲು ಆರು ಆಟಗಾರರು ಸಿದ್ಧರಾಗಿದ್ದಾರೆ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿಯ ಮುಂದೆ ದೊಡ್ಡ ಸವಾಲು ಎದುರಾಗಿದೆ. ಯಾರನ್ನು ಆಯ್ಕೆ ಮಾಡಬೇಕು. ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಹಾಗಿದ್ದರೆ ಆ ಆರು ಆಟಗಾರರು ಯಾರು ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಇಂಗ್ಲೆಂಡ್‌ನಲ್ಲಿ ಸ್ಟಾರ್ಸ್ ಫೈರ್
ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಪರ ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ಟೂರ್ನಿಯಲ್ಲಿ 754 ರನ್ ಬಾರಿಸಿ ಅಬ್ಬರಿಸಿದ್ದರು. ಅಲ್ಲದೆ ಇವರು ತಂಡವನ್ನು ಮುನ್ನಡೆಸಿ ಸೈ ಎನಿಸಿಕೊಂಡಿದ್ದರು. ಅಲ್ಲದೆ ಇವರು ಏಷ್ಯಾ ಕಪ್‌ಗೆ ಪ್ರಕಟವಾಗುವ ತಂಡಕ್ಕೆ ತಾವು ಆಯ್ಕೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಇವರ ಈ ನಿರ್ಧಾರ ತಂಡದ ಚಿಂತೆಯನ್ನು ದ್ವಿಗುಣಗೊಳಿಸಿದೆ. ಇನ್ನು ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸಹ ಇಂಗ್ಲೆಂಡ್ ನೆಲದಲ್ಲಿ ರನ್ ಮಹಲ್ ಕಟ್ಟಿದರು. ಅಲ್ಲದೆ ಮೊಹಮ್ಮದ್ ಸಿರಾಜ್ ಟೂರ್ನಿಯಲ್ಲಿ ಅಧಿಕ ವಿಕೆಟ್‌ಗಳನ್ನು ಪಡೆದು ಅಬ್ಬರಿಸಿದ್ದರು. ಈ ಮೂವರರನ್ನು ಆಯ್ಕೆ ಮಾಡುವುದು ಸಹ ಬಿಸಿಸಿಐ ಆಯ್ಕೆ ಸಮಿತಿಯ ಚಿಂತೆಯನ್ನು ಹೆಚ್ಚಿಸಿದೆ.
ಮೂವರು ಆಟಗಾರರ ಟೆನ್ಷನ್
ಭಾರತದ ತಂಡದ ಪರ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ಅವರು ಸಹ ಟಿ20 ತಂಡವನ್ನು ಸೇರುವ ಕನಸಿನಲ್ಲಿದ್ದಾರೆ. ಅಲ್ಲದೆ ಇವರು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಇವರು ಭಾರತ ತಂಡಕ್ಕೆ ಸೇರುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇವರಲ್ಲದೆ ತಿಲಕ್ ವರ್ಮಾ ಸಹ ಇತ್ತೀಚಿಗೆ ಸಿಕ್ಕ ಅವಕಾಶಗಳೆನಲ್ಲಾ ಬಳಸಿಕೊಂಡು ಅಮೋಘ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದರು. ಇವರಿಗೆ ಕೈ ಬಿಡುವ ಬಗ್ಗೆಯೂ ಆಯ್ಕೆ ಸಮಿತಿ ಯೋಚನೆ ನಡೆಸುತ್ತಿಲ್ಲ. ಆದರೆ ಇವರಿಗೆ ಸ್ಥಾನ ನೀಡಿದರೆ ಎಲ್ಲಿ ಆಡಿಸಬೇಕು ಎಂಬುದೇ ಆಯ್ಕೆ ಸಮಿತಿಯ ಮುಂದಿನ ದೊಡ್ಡ ಪ್ರಶ್ನೆಯಾಗಿದೆ.
ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಶಿವಂ ದುಬೆ ಸಹ ಬಿಸಿಸಿಐ ಆಯ್ಕೆ ಸಮಿತಿಯ ಚಿಂತೆಯನ್ನು ಹೆಚ್ಚಿಸಿರುವ ಪ್ಲೇಯರ್. ಇವರು ಸಹ ಸಿಕ್ಕ ಅವಕಾಶಗಳಲ್ಲಿ ಮಿಂಚಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications