For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ ಪ್ರವಾಸಕ್ಕೆ ಭಾರತ ಎ ತಂಡ ಪ್ರಕಟ: ಟೆಸ್ಟ್ ಕ್ರಿಕೆಟ್ ಆಕಾಂಕ್ಷಿಗಳಿಗೆ ಭರ್ಜರಿ ಅವಕಾಶ

ನವದೆಹಲಿ, ಅಕ್ಟೋಬರ್ 27: ದೇಶಿ ಕ್ರಿಕೆಟ್, ಅಂಡರ್ 19 ಕ್ರಿಕೆಟ್ ಪಂದ್ಯಗಳಲ್ಲಿ ಮಿಂಚುಹರಿಸಿರುವ ಯುವ ಪ್ರತಿಭೆಗಳು ಟೆಸ್ಟ್ ತಂಡದ ಕದ ತಟ್ಟಲು ಅನುವು ಮಾಡಿಕೊಡುವ ಭರ್ಜರಿ ವೇದಿಕೆ ಸಿದ್ಧವಾಗಿದೆ.

ಭಾರತದ ಎ ತಂಡವು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೆ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ, ರಾಷ್ಟ್ರೀಯ ತಂಡದ ಕದ ತಟ್ಟಲು ಸಿದ್ಧವಾಗುತ್ತಿರುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

ಮುಂಬರುವ ನವೆಂಬರ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅದೇ ಸಮಯಕ್ಕೆ ಎ ತಂಡ ಕೂಡ ನ್ಯೂಜಿಲೆಂಡ್‌ನಲ್ಲಿ ನಾಲ್ಕು ದಿನಗಳ ಸರಣಿಯನ್ನು ಆಡಲಿದೆ.

ಕಳೆದ ಮೂರು ವರ್ಷಗಳಿಂದ ಭಾರತವು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ನೆಲದಲ್ಲಿ ಆಡಿರಲಿಲ್ಲ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಆಡಿದ್ದ ತಂಡ, ಅಲ್ಲಿನ ವೇಗದ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಹೆಣಗಾಡಿತ್ತು.

ಹೀಗಾಗಿ ನ್ಯೂಜಿಲೆಂಡ್‌ನ ಬೌನ್ಸಿ ಪಿಚ್‌ಗಳಲ್ಲಿ ಯುವ ಆಟಗಾರರ ಸಾಮರ್ಥ್ಯದ ಪರೀಕ್ಷೆ ಮಾಡುವುದರಿಂದ ಈ ಪರಿಸ್ಥಿತಿಗಳಲ್ಲಿ ದಿಟ್ಟವಾಗಿ ಆಡಬಲ್ಲ ಆಟಗಾರರು ತಂಡಕ್ಕೆ ದೊರಕಲಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಎ ತಂಡವು 3 ನಾಲ್ಕು ದಿನದ ಪಂದ್ಯಗಳನ್ನು ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಮೂರು ತಂಡಗಳನ್ನು ಪ್ರಕಟಿಸಲಾಗಿದೆ.

ವೇಗದ ಪಿಚ್‌ ಸವಾಲು

ವೇಗದ ಪಿಚ್‌ ಸವಾಲು

ಮೊದಲ ಪಂದ್ಯವು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನಡೆಯುವುದರಿಂದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕೆಲವು ಆಟಗಾರರು ಕೂಡ ಇದರಲ್ಲಿ ಆಡಲಿದ್ದಾರೆ. ಬಳಿಕ ಅವರು ನೆರೆಯ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಫಾರ್ಮ್ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಮುಖ ಆಟಗಾರರು ಅಲ್ಲಿನ ವಾತಾವರಣ ಮತ್ತು ಪಿಚ್‌ಗೆ ಹೊಂದಿಕೊಳ್ಳಲಿ ಎಂಬ ಉದ್ದೇಶದಿಂದ ಈ ಅವಕಾಶ ಕಲ್ಪಿಸಲಾಗಿದೆ.

ವಿಂಡೀಸ್, ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟ, ಧೋನಿ ಔಟ್!

ರಹಾನೆ ನೇತೃತ್ವ

ರಹಾನೆ ನೇತೃತ್ವ

ನಾಲ್ಕು ದಿನಗಳ ಆಟದ ಮೊದಲ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ಮುರಳಿ ವಿಜಯ್, ಪೃಥ್ವಿ ಶಾ, ಪಾರ್ಥಿವ್ ಪಟೇಲ್, ರೋಹಿತ್ ಶರ್ಮಾ, ಹನುಮ ವಿಹಾರಿ ಕೂಡ ಇದರಲ್ಲಿ ಆಡಲಿದ್ದಾರೆ.

ವಿಂಡೀಸ್ ಸರಣಿಯ ಕೊನೆಯ ಮೂರು ಪಂದ್ಯ: ತಂಡಕ್ಕೆ ಮರಳಿದ ಭುವಿ, ಬೂಮ್ರಾ

ಕರುಣ್ ನಾಯರ್ ನಾಯಕ

ಕರುಣ್ ನಾಯರ್ ನಾಯಕ

ನಂತರದ ಎರಡು ಪಂದ್ಯಗಳಿಗೆ ಕನ್ನಡಿಗ ಕರುಣ್ ನಾಯರ್ ನಾಯಕರಾಗಿರಲಿದ್ದಾರೆ. ಕರ್ನಾಟಕದ ಮಯಾಂಕ್ ಅಗರವಾಲ್, ಆರ್. ಸಮರ್ಥ್ ಮತ್ತು ಕೆ. ಗೌತಮ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಯುವ ವಿಕೆಟ್ ಕೀಪರ್‌ಗಳಾದ ಇಶಾನ್ ಕಿಶನ್ ಮತ್ತು ಶ್ರೀಕರ್ ಭರತ್, ಸ್ಪಿನ್ನರ್ ಶಜಬಾಜ್ ನದೀಮ್, ವೇಗಿಗಳಾದ ರಜನೀಶ್ ಗುರ್ಬಾನಿ, ನವದೀಪ್ ಸೈನಿ, ದೀಪಕ್ ಚಾಹರ್, ಮೊಹಮದ್ ಸಿರಾಜ್ ಅವರಂತಹ ಆಟಗಾರರಿಗೆ ಉತ್ತಮ ಪರೀಕ್ಷೆಯಾಗಲಿದೆ.

ಏಕದಿನಕ್ಕೆ ಪಾಂಡೆ ನಾಯಕ

ಏಕದಿನಕ್ಕೆ ಪಾಂಡೆ ನಾಯಕ

ಬಳಿಕ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ಎದುರಿಸುತ್ತಿರುವ ಪಾಂಡೆಗೆ ಈ ಸರಣಿ ಬಹುದೊಡ್ಡ ಅವಕಾಶವಾಗಿದೆ.

ಗಾಯದ ಕಾರಣ ಆಸ್ಟ್ರೇಲಿಯಾದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯದ ಹಾರ್ದಿಕ್ ಪಾಂಡ್ಯ, ನ್ಯೂಜಿಲೆಂಡ್‌ನ ಏಕದಿನ ಸರಣಿಯಲ್ಲಿ ಎ ತಂಡದಲ್ಲಿ ಆಡಲಿದ್ದಾರೆ.

ಮೊದಲ ಪಂದ್ಯಕ್ಕೆ ತಂಡ

ಮೊದಲ ಪಂದ್ಯಕ್ಕೆ ತಂಡ

ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಪೃಥ್ವಿ ಶಾ, ಮಯಾಂಕ್ ಅಗರವಾಲ್, ಹನುಮ ವಿಹಾರಿ, ರೋಹಿತ್ ಶರ್ಮಾ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಕೆ.ಎಸ್. ಭರತ್ (ವಿಕೆಟ್ ಕೀಪರ್), ಕೆ. ಗೌತಮ್, ಶಹಬಾಜ್ ನದೀಮ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ದೀಪಕ್ ಚಾಹರ್, ರಜನೀಶ್ ಗುರ್ಬಾನಿ, ವಿಜಯ್ ಶಂಕರ್.

2&3ನೇ ನಾಲ್ಕು ದಿನದ ಪಂದ್ಯಕ್ಕೆ

2&3ನೇ ನಾಲ್ಕು ದಿನದ ಪಂದ್ಯಕ್ಕೆ

ಕರುಣ್ ನಾಯರ್ (ನಾಯಕ), ಮಯಂಕ್ ಅಗರವಾಲ್, ಅಭಿಮನ್ಯು ಈಶ್ವರನ್, ಆರ್. ಸಮರ್ಥ್, ಅಂಕಿತ್ ಭಾವ್ನೆ, ಶುಭ್‌ಮನ್ ಗಿಲ್, ವಿಜಯ್ ಶಂಕರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆ. ಗೌತಮ್, ಶಹಬಾಜ್ ನದೀಮ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ದೀಪಕ್ ಚಾಹರ್, ರಜನೀಶ್ ಗುರ್ಬಾನಿ.

ಮೂರು ಏಕದಿನ ಸರಣಿ

ಮೂರು ಏಕದಿನ ಸರಣಿ

ಮನೀಶ್ ಪಾಂಡೆ (ನಾಯಕ), ಮಯಾಂಕ್ ಅಗರವಾಲ್, ಅನ್ಮೋಲ್ ಪ್ರೀತ್ ಸಿಂಗ್, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಅಂಕಿತ್ ಭಾವ್ನೆ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕೃಣಾಲ್ ಪಾಂಡ್ಯ, ಸಿದ್ಧಾರ್ಥ್ ಕೌಲ್, ದೀಪಕ್ ಚಾಹರ್, ಖಲೀಲ್ ಅಹ್ಮದ್.

Story first published: Saturday, October 27, 2018, 12:53 [IST]
Other articles published on Oct 27, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+