Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SL 1st ODI: ಭಾರತ-ಶ್ರೀಲಂಕಾ ಪಂದ್ಯ ಟೈ; ಸೂಪರ್ ಓವರ್ ನಡೆಯಲಿಲ್ಲ ಏಕೆ?

ಆಗಸ್ಟ್‌ 3 ಶನಿವಾರ, ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ ಟಿ20 ಸರಣಿಯಲ್ಲಿ ಶ್ರೀಲಂಕಾವನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಇದೀಗ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಆದರೆ ಏಕದಿನ ಸರಣಿಯಲ್ಲಿ ಕಮ್‌ ಬ್ಯಾಕ್‌ ಮಾಡಿರುವ ಶ್ರೀಲಂಕಾ ತಂಡವು ಭಾರತಕ್ಕೆ ಪೈಪೋಟಿ ನೀಡಿದೆ. ಶ್ರೀಲಂಕಾ ವಿರುದ್ಧ ನಿನ್ನೆ (ಆಗಸ್ಟ್‌ 2) ನಡೆದ ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ತವಕದಲ್ಲಿದ್ದ ಭಾರತ ಕೊನೆ ಕ್ಷಣದಲ್ಲಿ ಎಡುವಟ್ಟು ಮಾಡಿಕೊಂಡಿದೆ.

India-Sri Lanka match tied why there no super over

ಹೀಗಾಗಿ ಶ್ರೀಲಂಕಾ ಎದುರು ಗೆಲ್ಲುವ ಪಂದವನ್ನು ಟೀಮ್‌ ಟೈ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಸೂಪರ್ ಓವರ್ ನಿರೀಕ್ಷೆಯಲ್ಲಿದ್ದರು. ಆದರೆ ಸೂಪರ್ ಓವರ್ ಪಂದ್ಯ ನಡೆಯಲಿಲ್ಲ. ಇದಕ್ಕೆ ಐಸಿಸಿ ನಿಯಮಗಳು ಕುರಿತು ಇಲ್ಲಿದೆ ಮಾಹಿತಿ.

ಪಂದದಲ್ಲಿ ಆಗಿದ್ದೇನು?

ಮೊದಲು ಟಾಸ್‌ ಗೆದ್ದು ಶ್ರೀಲಂಕಾ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆತಿಥೇಯ ತಂಡದ ಪರ ಪಾತುಮ್ ನಿಸ್ಸಂಕ (56) ಮತ್ತು ದುನಿತ್ ವೆಳ್ಳಾಲಗೆ (67*) ಅರ್ಧಶತಕಗಳನ್ನು ಬಾರಿಸುವ 230 ರನ್‌ ಟಾರ್ಗೆಟ್‌ ಅನ್ನು ಪ್ರವಾಸಿ ಭಾರತಕ್ಕೆ ನೀಡಿದರು.

ಈ ಸಂದರ್ಭದಲ್ಲಿ ಟೀಮ್‌ ಇಂಡಿಯಾಗೆ ಗೆಲುವಿನ ಹಾದಿ ಸುಲಭ ಎನಿಸಿತು. ರೋಹಿತ್ ಶರ್ಮಾ ಕೂಡ ಆರಂಭದಲ್ಲಿ ಅರ್ಧಶತಕ ಹೊಡೆಯುವ ಮೂಲಕ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ರೋಹಿತ್‌ ಶರ್ಮ 47 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 58 ರನ್ ಗಳಿಸಿ ಔಟಾದರು.

ಇದಾದ ಬಳಿಕ ಶುಭಮನ್‌ ಗಿಲ್‌ (16) ವಿರಾಟ್ ಕೊಹ್ಲಿ (24) ಮತ್ತು ಶ್ರೇಯಸ್ ಅಯ್ಯರ್ 23 ರನ್ ಗಳಿಸಿ ಬೇಗ ವಿಕೆಟ್‌ ಕಳೆದುಕೊಂಡರು. ಕೊನೆಗೆ ಕೆಎಲ್‌ ರಾಹುಲ್ ಮತ್ತು ಅಕ್ಸರ್ ಪಟೇಲ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ಮಾಡಿದರು.

ಆದರೆ ಈ ಇಬ್ಬರೂ ಔಟಾದ ಬಳಿಕ ಮತ್ತೊಮ್ಮೆ ಟೀಮ್‌ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು. ಕ್ರೀಸ್ ಗೆ ಬಂದ ಶಿವಂ ದುಬೆ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಪಂದ್ಯಕ್ಕೆ ಮೆರಗು ನೀಡಿದರು.

ದುರದೃಷ್ಟಕರ 48ನೇ ಓವರ್ ನಲ್ಲಿ ಭಾರತ ಗೆಲುವಿಗೆ ಕೇವಲ 1 ರನ್ ಬೇಕಿತ್ತು. ಆದರೆ ನಾಯಕ ಅಸಲಂಕಾ ಎರಡು ಎಸೆತಗಳಲ್ಲಿ 2 ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ಕೊಟ್ಟರು. ಪರಿಣಾಮ ಟೀಮ್‌ ಇಂಡಿಯಾ 230 ರನ್‌ಗೆ ಆಲೌಟ್ ಆಗಿ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿತ್ತು.

ಸೂಪರ್ ಓವರ್ ಪಂದ್ಯ ಏಕೆ ನಡೆಯಲಿಲ್ಲ?

ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ಟೈ ಆದ ನಂತರ ಎಲ್ಲರೂ ಸೂಪರ್ ಓವರ್ ನಿರೀಕ್ಷೆಯಲ್ಲಿದ್ದರು, ಆದರೆ ಅದು ಆಗಲಿಲ್ಲ.

ಐಸಿಸಿ ನಿಯಮಗಳ ಪ್ರಕಾರ, ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ (ಯಾವುದೇ ಎರಡು ದೇಶಗಳ ನಡುವಿನ ಸರಣಿ) ಸೂಪರ್ ಓವರ್ ಇರುವುದಿಲ್ಲ. ಏಕದಿನ ಮಾದರಿ ಐಸಿಸಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಮಾತ್ರ ಸೂಪರ್ ಓವರ್ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಟಿ20 ಕ್ರಿಕೆಟ್‌ ನಿಯಮಗಳ ಬಗ್ಗೆ ನೋಡುವುದಾದರೆ, ಈ ಮಾದರಿಯಲ್ಲಿ ಯಾವುದೇ ಪಂದ್ಯ ಟೈ ಆದರೂ, ಸೂಪರ್ ಓವರ್ ನಡೆಸಲಾಗುವುದು.

Story first published: Saturday, August 3, 2024, 8:05 [IST]
Other articles published on Aug 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+