ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯದ ಅಂಡರ್-19 ವಿಶ್ವಕಪ್ ಅಭಿಯಾನ ಆರಂಭ

ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಟೂರ್ನಿಯನ್ನು ಜಯದೊಂದಿಗೆ ಆರಂಭಿಸಿದೆ. ನಿನ್ನೆ ಅಂಡರ್-19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಶ್ರೀಲಂಕಾ ತಂಡದ ವಿರುದ್ಧ ಆಡಿತ್ತು ಈ ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದುಕೊಂಡು ನಿರೀಕ್ಷಿತವಾಗಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅದ್ಭುತ ಆಟವನ್ನು ಪ್ರದರ್ಶಿಸಿತು. ನಾಲ್ಕು ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾ ಕಿರಿಯರು ಭರ್ಜರಿ 297ರನ್ ಕಲೆ ಹಾಕಿದರು. ಟೀಮ್ ಇಂಡಿಯಾ ಕಿರಿಯರ ಪರವಾಗಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(59ರನ್ 74ಎಸೆತ) ಮತ್ತು ನಾಯಕ ಪ್ರಿಯಮ್ ಗಾರ್ಗ್ (56ರನ್ 72ಎಸೆತ) ಉತ್ತಮ ಆಟವನ್ನು ಪ್ರದರ್ಶಿಸಿದರು.
ಈ ಇಬ್ಬರ ಬಳಿಕ ಉಪ ನಾಯಕ ದ್ರುವ್ ಜ್ಯುರೆಲ್(52ರನ್ 48ಎಸೆತ) ಮತ್ತು ಆಲ್‌ರೌಂಡರ್ ಸಿದ್ದೇಶ್ ವೀರ್ (44ರನ್ 27ಎಸೆತ) ಸ್ಪೋಟಕ ಆಟವಾಡಿ ಮುನ್ನೂರರ ಗಡಿ ಸಮೀಪಕ್ಕೆ ತಂಡದ ಮೊತ್ತವನ್ನು ತಂದು ನಿಲ್ಲಿಸುವಲ್ಲಿ ಯಶಸ್ವಿಯಾದರು.
ಬಳಿಕ ಟೀಮ್ ಇಂಡಿಯಾದ ಬೌಲರ್‌ಗಳು ಶ್ರೀಲಂಕಾವನ್ನು 45.2 ಓವರ್‌ಗಳಿಗೆ ಕೇವಲ 207 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ವಿಶ್ವಕೊ್ ಅಭಿಯಾನದಲ್ಲಿ ಟೀಮ್ ಇಂಡಿಯಾ ಕಿರಿಯರು ಸುಲಭವಾಗಿ ಗೆದ್ದುಕೊಂಡರು.
ವೇಗಿ ಕಾರ್ತಿಕ್ ತ್ಯಾಗಿ ಅದ್ಭುತ ಬೌಲಿಂಗ್ ನಿನ್ನೆಯ ಪಂದ್ಯದಲ್ಲಿ ಅಭಿಮಾನಿಗಳ ಮನಸೂರೆಗೊಂಡಿತು. ಈಗಾಗಲೆ ಐಪಿಎಕ್ ಹರಾಜಿನಲ್ಲಿ ಕೋಟಿಗೆ ಸೇಲ್ ಆಗಿ ಗಮನ ಸೆಳೆದಿರುವ ಕಾರ್ತಿಕ್ ತ್ಯಾಗಿ 7.2 ಓವರ್‌ಗಳಲ್ಲಿ 27 ರನ್‌ಗೆ 1 ವಿಕೆಟ್ ಪಡೆದು ಮಿಂಚಿದರು. 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಗ್ಗಂಟಾದರು. ಲೆಗ್ ಸ್ಪಿನ್ನರ್ ರವಿ ಬಿಶ್ನೋಯ್ ಮತ್ತು ವೇಗಿ ಆಕಾಶ್ ಸಿಂಗ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications