Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಇನ್ನೂ ವಿಶ್ವಕಪ್ ಸೋಲಿನ ನೋವಿನಿಂದ ಹೊರಬಂದಿಲ್ಲ: ಬೌಲಿಂಗ್ ಕೋಚ್ ಭರತ್ ಅರುಣ್

India Still Hurting From World Cup Loss: Bharat Arun

ಟಿ20 ವಿಶ್ವಕಪ್‌ನ ಯಾವಾಗ ನಡೆಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಐಸಿಸಿ ಈ ಬಗ್ಗೆ 10ನೇ ತಾರೀಕಿನಂದುತನ್ನ ನಿರ್ಧಾರವನ್ನು ಪ್ರಕಟಿಸಲಿದೆ. ಈ ಮಧ್ಯೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಟಿ20 ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದೆ ಎಂದಿದ್ದಾರೆ.

2019ರ ಏಕದಿನ ವಿಶ್ವಕಪ್‌ನ ಸೆಮಿ ಫೈನಲ್ ಸೋಲು ಟೀಂ ಇಂಡಿಯಾವನ್ನು ಇನ್ನೂ ಕಾಡುತ್ತಿದೆ. ಟಿ20 ವಿಶ್ವಕಪ್ ನಲ್ಲಿ ಇನ್ನೂ ಉತ್ತಮ ಪ್ರದರ್ಶನ ತೋರಿ ಆ ನೋವನ್ನು ನೀಗಿಸಲು ಪ್ರಯತ್ನಿಸುತ್ತೇವೆ ಎಂದು ಟೀಂ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.

'ಲಾಕ್ ಡೌನ್ ಬಟ್ ನಾಟ್ ಔಟ್' ಕಾರ್ಯಕ್ರಮ ಸರಣಿಯಲ್ಲಿ ಮಾತನಾಡಿದ ಭರತ್ ಅರುಣ್, ವಿಶ್ವಕಪ್ ಸೋಲು ಇನ್ನೂ ಕಾಡುತ್ತಿದೆ. ಬಹುಶಃ ವಿಶ್ವಕಪ್ ಗೆಲ್ಲಲು ಇನ್ನೂ ಉತ್ತಮ ಯೋಜನೆ ಬೇಕಿತ್ತು ಮತ್ತು ಆ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿತ್ತು ಎಂದು ಹೇಳಿದ್ದಾರೆ.

ಕಳೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅದಕ್ಕೆ ಪೂರಕವಾಗಿ ಗ್ರೂಪ್ ಹಂತದಲ್ಲಿ ಅಗ್ರಸ್ಥಾನಿಯಾಗಿತ್ತು. ಆದರೆ ಸೆಮಿ ಫೈನಲ್ ಹಂತದಲ್ಲಿ ಎಡವಿತ್ತು. ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ 18 ರನ್ ಗಳಿಂದ ಸೋತ ಭಾರತದ ವಿಶ್ವಕಪ್ ಅಭಿಯಾನ ಅಂತ್ಯವಾಗಿತ್ತು.

ಕೋವಿಡ್-19 ನಂತರದ ಕ್ರಿಕೆಟ್ ಬಗ್ಗೆ ಮಾತನಾಡಿದ ಭರತ್ ಅರುಣ್, ಅಂತಾರಾಷ್ಟ್ರೀಯ ಪಂದ್ಯವಾಡುವ ಮೊದಲು ಕನಿಷ್ಠ 6-9 ವಾರಗಳ ಅಭ್ಯಾಸ ನಡೆಸುವುದು ಅಗತ್ಯ. ಕೌಶಲ್ಯ, ಫಿಟ್ನೆಸ್ ಗಳ ಕುರಿತು ಕೆಲಸ ಮಾಡಬೇಕು. ಅಂತಾರಾಷ್ಟ್ರೀಯ ಸರಣಿಗಿಂತ ಮೊದಲು ಬಿಸಿಸಿಐ ಕ್ಯಾಂಪ್ ನಡೆಸುವ ವಿಶ್ವಾಸವಿದೆ ಎಂದು ಭರತ್ ಅರುಣ್ ಹೇಳಿದ್ದಾರೆ.

Story first published: Sunday, June 7, 2020, 17:22 [IST]
Other articles published on Jun 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+