For Quick Alerts
ALLOW NOTIFICATIONS  
For Daily Alerts
 

IND vs NZ Test: ತಪ್ಪಿದ ಮಳೆ ಕಾಟ, ರನ್‌ಗಳಿಸಲು ಟೀಮ್ ಇಂಡಿಯಾ ಪರದಾಟ.. ಮೊದಲ ದಿನ ಪ್ರವಾಸಿಗರ ಆರ್ಭಟ

ಟೀಮ್ ಇಂಡಿಯಾದ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್.. ಚಿನ್ನಸ್ವಾಮಿಯಲ್ಲಿ ರೋಹಿತ್‌ ಪಡೆ ರನ್ ಕಲೆ ಹಾಕಲು ಪರದಾಟ.. ನ್ಯೂಜಿಲೆಂಡ್‌ ಬೌಲರ್‌ಗಳ ವೇಗವನ್ನು ಅರಿಯುವಲ್ಲಿ ವಿಫಲವಾಗಿದ್ದು.. ಜೊತೆಯಾಟಗಳು ಬಾರದೆ ಇರುವುದು.. ಮೊದಲ ಇನಿಂಗ್ಸ್‌ನಲ್ಲಿ ಬೌಲರ್‌ಗಳು ಕಿವೀಸ್‌ ತಂಡದ ಬ್ಯಾಟರ್‌ಗಳ ಮೇಲೆ ಒತ್ತಡ ಹಾಕುವಲ್ಲಿ ಹಿಂದೆ ಬಿದ್ದಿರುವುದು ಇದುವೇ, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್, ಮೊದಲ ದಿನದ ಪಂದ್ಯದ ಹೈಲೈಟ್ಸ್‌..

ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ಮೊದಲ ಇನಿಂಗ್ಸ್‌ನಲ್ಲಿ ರೋಹಿತ್ ಪಡೆ ಜಸ್ಟ್‌ 46 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್‌ ದಿನದಾಟದ ಮುಕ್ತಾಯಕ್ಕೆ 3 ವಿಕೆಟ್‌ಗೆ 180 ರನ್‌ ಸೇರಿಸಿದೆ. ಅಲ್ಲದೆ ಮೊದಲ ಇನಿಂಗ್ಸ್‌ನಲ್ಲಿ 134 ರನ್‌ಗಳ ಮುನ್ನಡೆ ಸಾಧಿಸಿದೆ.

India Struggles with Batting as New Zealand Dominates Day 1 of Bangalore Test

ಟಾಪ್‌ ಆರ್ಡರ್ ಫೇಲ್‌

ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಸರ್ಫರಾಜ್‌ ಖಾನ್‌ ತಾವು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.

ಐದು ಬ್ಯಾಟರ್‌ಗಳಿಂದ ಸೊನ್ನೆ ಸಾಧನೆ

ಟೀಮ್ ಇಂಡಿಯಾದ ಅನುಭವಿ ಐದು ಬ್ಯಾಟರ್‌ಗಳು ಗುರುವಾರ ಸೊನ್ನೆ ಸುತ್ತಿದರು. ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್, ಕೆ.ಎಲ್ ರಾಹುಲ್, ಆಲ್‌ರೌಂಡರ್‌ಗಳಾದ ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌ ಅವರು ತಂಡದ ಮೊತ್ತಕ್ಕೆ ಯಾವುದೇ ರನ್‌ ಸೇರಿಸಲಿಲ್ಲ.

ಬಾರದ ಜೊತೆಯಾಟಗಳು

ಟೀಮ್ ಇಂಡಿಯಾ ಪರ ರಿಷಭ್ ಪಂತ್ ಹಾಗೂ ಯಶಸ್ವಿ ಜೈಸ್ವಾಲ್‌ ನಾಲ್ಕನೇ ವಿಕೆಟ್‌ಗೆ 21 ರನ್‌ ಸೇರಿಸಿದ್ದು ಬಿಟ್ಟರೆ ಉಳಿದ ಯಾವ ಜೋಡಿ ದೊಡ್ಡ ಮೊತ್ತವನ್ನು ಕಲೆ ಹಾಕಲಿಲ್ಲ. ಇಷ್ಟೇ ಏಕೆ ಜೊತೆಯಾಟದಲ್ಲೂ ಡಬಲ್‌ ಡಿಜಿಟ್ ಸಾಧನೆ ಮಾಡಲಿಲ್ಲ. ಟೀಮ್ ಇಂಡಿಯಾದ ಪರ ಯಶಸ್ವಿ ಜೈಸ್ವಾಲ್‌ 13, ರಿಷಭ್‌ ಪಂತ್‌ 20 ರನ್ ಮಾತ್ರ ಡಬಲ್‌ ಡಿಜಿಟ್‌ ಮುಟ್ಟಿದ್ದಾರೆ. ಪಂದ್ಯದ ಯಾವುದೇ ಹಂತದಲ್ಲಿ ಚೇತರಿಕೆ ಕಾಣದೆ ಟೀಮ್ ಇಂಡಿಯಾ ವೈಫಲ್ಯ ಅನುಭವಿಸಿತು.

ಮೂರು ವೇಗಿಗಳ ದರ್ಬಾರ್

ನ್ಯೂಜಿಲೆಂಡ್ ತಂಡದ ಪರ ಮೊದಲ ಟೆಸ್ಟ್‌ನಲ್ಲಿ ಮೂವರು ವೇಗಿಗಳು ಆಡುವ ಅವಕಾಶವನ್ನು ಪಡೆದರು. ಅನುಭವಿ ಟೀಮ್ ಸೌಥಿ 1 ವಿಕೆಟ್‌ ಪಡೆದರೆ, ಮ್ಯಾಟ್ ಹೆನ್ರಿ ಐದು ವಿಕೆಟ್ ಸಾಧನೆ ಮಾಡಿದರು. ವಿಲಿಯಂ ಓರೂರ್ಕ್ 4 ವಿಕೆಟ್‌ ಪಡೆದು ಬೀಗಿದರು.

ಅರ್ಧಶತಕದ ಜೊತೆಯಾಟ

ನ್ಯೂಜಿಲೆಂಡ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ ಮೊದಲ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ಮೂಡಿಬಂತು. ನಾಯಕ ಟಾಮ್‌ ಲಾಥಮ್‌ 15 ರನ್‌ಗಳಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ವಿಲ್‌ ಯಂಗ್‌ 33 ರನ್‌ಗಳಿಗೆ ಆಟ ಮುಗಿಸಿದರು. ಅನುಭವಿ ಡ್ವೇನ್‌ ಕಾನ್ವೆ ಶತಕದ ಅಂಚಿನಲ್ಲಿ ಔಟ್ ಆದರು. ಇವರು 105 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್‌ ಸೇರಿದಂತೆ 91 ರನ್‌ ಸಿಡಿಸಿ ಅಶ್ವಿನ್‌ಗೆ ಬಲಿಯಾದರು.

ಟೀಮ್ ಇಂಡಿಯಾದ ಪರ ಸ್ಪಿನ್ ಬೌಲರ್‌ಗಳಾದ ಕುಲ್‌ದೀಪ್‌ ಯಾದವ್, ಅಶ್ವಿನ್, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್‌ ಪಡೆದರು.

Story first published: Thursday, October 17, 2024, 17:39 [IST]
Other articles published on Oct 17, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+