IND vs NZ Test: ತವರಿನಲ್ಲಿ ರೋಹಿತ್ ಪಡೆಯ ಗರ್ವಭಂಗ: ನ್ಯೂಜಿಲೆಂಡ್ ಇತಿಹಾಸ
ತವರಿನಲ್ಲಿ 19ನೇ ಸರಣಿ ಗೆಲುವಿನ ನಗೆ ಬೀರುವ ಟೀಮ್ ಇಂಡಿಯಾದ ಆಸೆಗೆ ಪೆಟ್ಟು ಬಿದ್ದಿದೆ. ಭಾರತದಲ್ಲಿ ಮೊದಲ ಟೆಸ್ಟ್ ಸೋಲಿನ ಬಳಿಕ ಪುಟಿದೇಳುವ ಆತ್ಮವಿಶ್ವಾಸ ನುಚ್ಚುನೂರಾಗಿದೆ. ರೋಹಿತ್ ಪಡೆ ತೋಡಿದ ಸ್ಪಿನ್ ಖೆಡ್ಡಾಗೆ ತಾನೆ ಬಿದ್ದಿದೆ. ಈ ಮೂಲಕ ಕಿವೀಸ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದೆ.
ಶನಿವಾರ ಮೂರನೇ ದಿನದಾಟವನ್ನು ಮುಂದುವರಿಸಿದ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 198 ರನ್‌ಗಳಿಂದ ಆಟ ಮುಂದುವರಿಸಿ 255 ರನ್‌ಗಳಿಗೆ ಆಲೌಟ್ ಆಯಿತು. 359 ರನ್‌ಗಳ ಕಠಿಣ ಸವಾಲನ್ನು ಬೆನ್ನಟ್ಟಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಸರ್ವಪತನ ಹೊಂದಿತು. 2012ರಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸೋಲು ಕಂಡಿತ್ತು.

ಆರನೇ ವಿಕೆಟ್‌ಗೆ ಟಾಮ್ ಬ್ಲಂಡೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಸೊಗಸಾದ ಜೊತೆಯಾಟವನ್ನು ನೀಡಿತು. ಈ ಜೋಡಿ 89 ಎಸೆತಗಳಲ್ಲಿ 48 ರನ್ ಸೇರಿಸಿ ಅಬ್ಬರಿಸಿತು. ಟಾಮ್ ಬ್ಲಂಡೆಲ್ 3 ಬೌಂಡರಿ ಸೇರಿದಂತೆ 41 ರನ್ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಗ್ಲೇನ್ ಫಿಲಿಪ್ಸ್ ಅಜೇಯ 48 ರನ್ ಬಾರಿಸಿದರು. ಈ ಮನಮೋಹಕ ಇನಿಂಗ್ಸ್‌ನಲ್ಲಿ 4 ಬೌಂಡರಿ, 2 ಸಿಕ್ಸರ್ ಸೇರಿವೆ.
ಭಾರತದ ಸ್ಪಿನ್ ಬೌಲರ್‌ಗಳು ಕಿವೀಸ್ ತಂಡದ ಬ್ಯಾಟರ್‌ಗಳಿಗೆ ಕಾಟ ನೀಡಿತು. ವಾಶಿಂಗ್ಟನ್ ಸುಂದರ್ 4, ರವೀಂದ್ರ ಜಡೇಜಾ 3, ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದು ಅಬ್ಬರಿಸಿದರು.
ಸ್ಪಿನ್ ಆಡಲು ಕಂಗಾಲು
ಟೀಮ್ ಇಂಡಿಯಾದ ಅಪ್ರೋಚ್ ಚೇಂಜ್ ಆಗಿದೆ ಎಂದು ಹೇಳುವ ತಂಡ, ಭಾರತದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ವಿಫಲರಾದರು. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು.

ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಕೊಂಚ ಕಿವೀಸ್ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಆಡುವಾಗ ಟೀಮ್ ಇಂಡಿಯಾ ಗೆಲ್ಲಬಹುದು ಎಂದು ಎಲ್ಲರೇ ಭಾವಿಸಿದ್ದರು. ಆದರೆ ಇವರಿಬ್ಬರ ಜೊತೆಯಾಟ 59 ಓವರ್‌ಗಳಲ್ಲಿ 62 ರನ್ ಸೇರಿಸಿತು. ಈ ಹಂತದಲ್ಲಿ ಮಿಚೆಲ್ ಸ್ಯಾಂಟ್ನರ್ ಎಸೆದ ಚೆಂಡನ್ನು ಅರಿಯುವಲ್ಲಿ ವಿಫಲರಾಗಿ ಗಿಲ್, ಸ್ಲಿಪ್‌ನಲ್ಲಿದ್ದ ಮಿಚೆಲ್‌ಗೆ ಕ್ಯಾಚ್ ನೀಡಿದರು.
ಆರಂಭಿಕ ಯಶಸ್ವಿ ಜೈಸ್ವಾಲ್ 65 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಒತ್ತಡ ಮೆಟ್ಟಿ ನಿಂತು ಆಡುವಲ್ಲಿ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ವಿಫಲರಾದರು. ವಿರಾಟ್ 40 ಎಸೆತಗಳನ್ನು ಎದುರಿಸಿ ಸೆಟಲ್ ಆಗಿರುವ ಭರವಸೆ ಮೂಡಿಸಿದರೂ, 17 ರನ್‌ಗಳಿಗೆ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ 21, ರವಿಚಂದ್ರನ್ ಅಶ್ವಿನ್ 18, ಜಸ್ಪ್ರಿತ್ ಬುಮ್ರಾ ಅಜೇಯ 10 ರನ್ ಬಾರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಕೆಲ ಹೊತ್ತು ಕ್ರೀಸ್‌ನಲ್ಲಿ ನಿಂತು ಬ್ಯಾಟ್ ಮಾಡಿದರು. ಇವರು 42 ರನ್ ಬಾರಿಸಿ ಸೋಲಿನಲ್ಲಿ ಅಂತರವನ್ನು ಕಡಿಮೆ ಮಾಡಿದರು.
ಸ್ಪಿನ್ನರ್‌ಗಳ ಆರ್ಭಟ
ನ್ಯೂಜಿಲೆಂಡ್ ತಂಡದ ಮಿಚೆಲ್ ಸ್ಯಾಂಟ್ನರ್ 6, ಅಜಾಜ್ ಪಟೇಲ್ 2, ಗ್ಲೇನ್ ಫಿಲಿಪ್ಸ್ 1 ವಿಕೆಟ್ ಪಡೆದು ಅಬ್ಬರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications