IND vs BAN 1st Test: ಟೀಮ್ ಇಂಡಿಯಾಕ್ಕೆ ಎರಡನೇ ದಿನದ ಗೌರವ: 308 ರನ್ ಮುನ್ನಡೆ
ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಅಬ್ಬರಿಸಿದೆ. ಬೌಲಿಂಗ್‌ನಲ್ಲಿ ಶಿಸ್ತು ಬದ್ಧ ದಾಳಿ ನಿರ್ವಹಿಸಿದ ಟೀಮ್ ಇಂಡಿಯಾ ವೇಗಿಗಳು ಬಾಂಗ್ಲಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದ್ದಾರೆ. ಈ ಮೂಲಕ ಭಾರತ ತಂಡ ಮೊದಲ ಟೆಸ್ಟ್‌ನ ಎರಡನೇ ದಿನದ ಗೌರವವನ್ನು ತನ್ನದಾಗಿಸಿಕೊಂಡಿದೆ.
ಶುಕ್ರವಾರ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನ್ನು 6 ವಿಕೆಟ್‌ಗೆ 339 ರನ್‌ಗಳಿಂದ ಆಟ ಮುಂದುವರೆಸಿದ ಭಾರತ 376 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ 149 ರನ್‌ಗಳಿಗೆ ಸರ್ವಪತನ ಕಂಡಿತು. ಎರಡನೇ ದಿನ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ಮೂರು ವಿಕೆಟ್ ನಷ್ಟಕ್ಕೆ 81 ರನ್ ಕಲೆ ಹಾಕಿದೆ.

ಬೃಹತ್ ಮೊತ್ತದತ್ತ ಚಿತ್ತ
ಭಾರತದ ಭರವಸೆಯ ಆಟಗಾರ ಶುಭಮನ್ ಗಿಲ್ (ಅಜೇಯ 33) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (ಅಜೇಯ 12) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಬ್ಬರೂ ಆಟಗಾರರು ಶನಿವಾರ ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟವನ್ನು ಆಡಿ ರನ್‌ಗಳನ್ನು ಹಿಗ್ಗಿಸುವ ಅನಿವಾರ್ಯತೆ ಇದೆ.
ಭಾರತ ಮೊದಲಾವಧಿಯಲ್ಲಿ 376 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಬಾಂಗ್ಲಾ ತಂಡ ಸಹ ಇದೇ ಅವಧಿಯಲ್ಲಿ ಬ್ಯಾಟ್ ಮಾಡಲು ಮುಂದಾಯಿತು. ಆದರೆ ಭಾರತದ ಕರಾರುವಕ್ ದಾಳಿಗೆ ಬಾಂಗ್ಲಾ ನಲುಗಿತು. ಟೀಮ್ ಇಂಡಿಯಾದ ವೇಗಿಗಳು ಬಾಂಗ್ಲಾ ಬ್ಯಾಟರ್‌ಗಳು ನೆಲಕಚ್ಚಿ ನಿಲ್ಲಲು ಅವಕಾಶವನ್ನೇ ನೀಡಲಿಲ್ಲ. ಬಾಂಗ್ಲಾದೇಶದ ಪರ ಮುಷ್ಫೀಕರ್ ರಹೀಮ್ ಹಾಗೂ ಮೆಹದಿ ಹಸನ್ ಮಾತ್ರ 50ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದರು.

ಬಾಂಗ್ಲಾ ಬ್ಯಾಟರ್‌ಗಳ ಫ್ಲಾಪ್ ಶೋ
ಪಾಕಿಸ್ತಾನದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಬಾಂಗ್ಲಾದೇಶದ ಬ್ಯಾಟರ್‌ಗಳ ಬ್ಯಾಟ್ ಶುಕ್ರವಾರ ಮೌನಕ್ಕೆ ಶರಣಾಗಿತ್ತು. ಆಲ್‌ರೌಂಡರ್ ಶಕೀಬ್ ಅಲ್ ಹಸನ್, ಲಿಟನ್ ದಾಸ್, ಮೆಹದಿ ಹಸನ್ ಮಿರ್ಜಾ ಕೊಂಚ ಭಾರತೀಯ ಬೌಲರ್‌ಗಳಿಗೆ ಕಾಟ ನೀಡಿದರು. ಆದರೆ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಎಡವಿದರು.
ಟೀಮ್ ಇಂಡಿಯಾ ಬಾಂಗ್ಲಾದೇಶವನ್ನು 149 ರನ್‌ಗಳಿಗೆ ಆಲೌಟ್ ಮಾಡಿತು. ಟೀಮ್ ಇಂಡಿಯಾ ಪರ ವೇಗಿಗಳು 8 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಉರುಳಿಸಿದರು.
ಪ್ರವಾಸಿ ತಂಡಕ್ಕೆ ಫಾಲೋಆನ್ ನೀಡದೆ ಎರಡನೇ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ನಾಯಕ ರೋಹಿತ್ ಶರ್ಮಾ 2 ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಇವರ ಆಟ 10 ರನ್‌ಗಳಿಗೆ ಕೊನೆಯಾಯಿತು. ವಿರಾಟ್ ಕೊಹ್ಲಿ ಸಹ 17 ರನ್ ಗಳಿಗೆ ಔಟ್ ಆದರು. ಶುಭಮನ್ ಗಿಲ್ ಕೊಂಚ ಭರವಸೆ ಮೂಡಿಸಿದ್ದಾರೆ.
ಬಾಂಗ್ಲಾದೇಶದ ಪರ ಟಸ್ಕಿನ್ ಅಹ್ಮದ್, ನಹೀದ್ ರಾಣಾ, ಮೆಹದಿ ಹಸನ್ ಮಿರ್ಜಾ ತಲಾ ಒಂದು ವಿಕೆಟ್ ಉರುಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications