ಶ್ರೀಲಂಕಾ ಟೆಸ್ಟ್ ಸರಣಿಗೆ ತಂಡ ಪ್ರಕಟ,ಕೆಎಲ್ ರಾಹುಲ್ ಆಯ್ಕೆ
ಮುಂಬೈ, ಜುಲೈ 23: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶ್ರೀಲಂಕಾ ಟೆಸ್ಟ್ ಸರಣಿಗೆ ತೆರಳಲಿರುವ ಟೀಂ ಇಂಡಿಯಾವನ್ನು ಗುರುವಾರ ಪ್ರಕಟಿಸಿದೆ.
ಆಗಸ್ಟ್ 12 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಕರ್ನಾಟಕ ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ಹೆಚ್ಚಿನ ಬದಲಾವಣೆ ಕಂಡು ಬಂದಿಲ್ಲ. ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಹೆಚ್ಚು ಕಮ್ಮಿ ಬಾಂಗ್ಲಾದೇಶ ವಿರುದ್ಧ ಆಡಿದ ತಂಡವನ್ನೇ ಉಳಿಸಿಕೊಂಡಿದ್ದಾರೆ. [ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಟೀಂ ಇಂಡಿಯಾದಿಂದ ಲಂಕಾ ಪ್ರವಾಸ]

ಟೀಂ ಆಯ್ಕೆ ಸಂದರ್ಭದಲ್ಲಿ ಪ್ರಗ್ನಾನ್ ಓಜಾ ಬಗ್ಗೆ ಚರ್ಚೆ ನಡೆಸಲಾಯಿತು. ಅದರೆ, ಶ್ರೀಲಂಕಾ ಪಿಚ್ ಗಳಲ್ಲಿ ಮಿಶ್ರಾ ಅವರು ಸೂಕ್ತ ಎನಿಸಿ ಆವರನ್ನು ಆಯ್ಕೆ ಮಾಡಲಾಗಿದೆ. ವೇಗಿ ಮೊಹಮ್ಮದ್ ಶಮಿ, ಕರಣ್ ಶರ್ಮ ಅವರು ಇನ್ನೂ ಗಾಯದ ಸಮಸ್ಯೆಯಿಂದ ಗುಣಮುಖರಾಗಿಲ್ಲ ಹೀಗಾಗಿ ತಂಡಕ್ಕೆ ಆಯ್ಕೆಯಾಗಿಲ್ಲ ಎಂದು ಸಂದೀಪ್ ಪಾಟೀಲ್ ವಿವರಿಸಿದರು.[ಆಗಸ್ಟ್ -ಸೆಪ್ಟೆಂಬರ್ ನಲ್ಲಿ ಟೀಂ ಇಂಡಿಯಾದಿಂದ ಲಂಕಾ ಪ್ರವಾಸ]
ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ). ಶಿಖರ್ ಧವನ್, ಮುರಳಿ ವಿಜಯ್,ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಹರ್ಭಜನ್ ಸಿಂಗ್, ಅಮಿತ್ ಮಿಶ್ರಾ, ಉಮೇಶ್ ಯಾದವ್, ವರುಣ್ ಅರೋನ್.

ಭಾರತ ತಂಡದ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ:
* ಆಗಸ್ಟ್ 3 (ಸೋಮವಾರ) : ಕೊಲೊಂಬೊಗೆ ಟೀಂ ಇಂಡಿಯಾ ಆಗಮನ.
* ಆಗಸ್ಟ್ 6 ರಿಂದ 8 (ಗುರುವಾರ ದಿಂದ ಶನಿವಾರ) : 3 ದಿನಗಳ ಅಭ್ಯಾಸ ಪಂದ್ಯ (ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕೊಲೊಂಬೊ)
* ಆಗಸ್ಟ್ 12 ರಿಂದ 16 (ಬುಧವಾರ ದಿಂದ ಭಾನುವಾರ) -ಮೊದಲ ಟೆಸ್ಟ್ - ಗಾಲೆ
* ಆಗಸ್ಟ್ 20 ರಿಂದ 24 (ಗುರುವಾರ ದಿಂದ ಸೋಮವಾರ)- 2ನೇ ಟೆಸ್ಟ್ -ಕೊಲಂಬೋ
* ಆಗಸ್ಟ್ 28 ರಿಂದ ಸೆಪ್ಟೆಂಬರ್ 1 (ಶುಕ್ರವಾರ ದಿಂದ ಮಂಗಳವಾರ)- ಮೂರನೇ ಟೆಸ್ಟ್, ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್, ಕೊಲಂಬೋ
* ಸೆಪ್ಟೆಂಬರ್ 2 (ಬುಧವಾರ) ಶ್ರೀಲಂಕಾದಿಂದ ಭಾರತಕ್ಕೆ ವಾಪಸ್
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications