IND vs BAN:ಚೆನ್ನೈನಲ್ಲಿ 280 ರನ್‌ಗಳಿಂದ ಗೆದ್ದ ಭಾರತ: ದಾಖಲೆಯ ಪುಟಕ್ಕೆ ರೋಹಿತ್ ಪಡೆ ಎಂಟ್ರಿ
ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 280 ರನ್‌ಗಳಿದ ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಮಣಿಸಿ, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾನುವಾರ 4 ವಿಕೆಟ್‌ಗೆ 158 ರನ್‌ಗಳಿಂದ ಆಟವನ್ನು ಮುಂದುವರೆಸಿದ ಬಾಂಗ್ಲಾ ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳನ್ನು ಕಲೆ ಹಾಕಿ ಸೋಲು ಕಂಡಿತು. ಈ ಮೂಲಕ ಭಾರತ ತವರಿನಲ್ಲಿ ತನ್ನ ಅಮೋಘ ಆಟವನ್ನು ಮುಂದುವರೆಸಿದೆ. ಈ ಮೂಲಕ ಟೀಮ್ ಇಂಡಿಯಾ ಸೋಲಿಗಿಂತ, ಗೆಲುವಿನ ಸಂಖ್ಯೆ ಹೆಚ್ಚಾಗಿದೆ.

ಬಾಂಗ್ಲಾ ನಾಯಕ ಏಕಾಂಗಿ ಹೋರಾಟ
ಬಾಂಗ್ಲಾದೇಶದ ಪರ ನಾಯಕ ನಜ್ಮುಲ್ ಹೊಸೈನ್ ಶಾಂತೋ ಏಕಾಂಗಿ ಹೋರಾಟವನ್ನು ನಡೆಸಿದರು. ಇವರು 127 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಾಯದಿಂದ 82 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಉಳಿದಂತೆ ಬಾಂಗ್ಲಾ ತಂಡದ ಯಾವೊಬ್ಬ ಬ್ಯಾಟರ್ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಲಿಟನ್ ದಾಸ್, ಮೆಹದಿ ಹಸನ್ ಮಿರ್ಜಾ, ಟಸ್ಕಿನ್ ಅಹ್ಮದ್ ಸಿಂಗಲ್ ಡಿಜಿಟನ್‌ಲ್ಲಿ ಆಟ ಮುಗಿಸಿದರು.
ಎರಡನೇ ಇನಿಂಗ್ಸ್‌ನಲ್ಲಿ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದರು. ಅಶ್ವಿನ್ 21 ಓವರ್‌ಗಳಲ್ಲಿ 88 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇನ್ನೊಬ್ಬ ಸ್ಪಿನ್ ಬೌಲರ್ ರವೀಂದ್ರ ಜಡೇಜಾ 58 ರನ್ ನೀಡಿ ಮೂರು ವಿಕೆಟ್ ಪಡೆದರು.
ಇದೇ ಮೊದಲು
ಭಾರತ ಕ್ರಿಕೆಟ್ ತಂಡ 92 ವರ್ಷಗಳಲ್ಲಿ ಮೊದಲ ಬಾರಿಗೆ ಹಿಂದೆಂದೂ ಮಾಡದ ಸಾಧನೆ ಮಾಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ದಾಖಲಿಸಿದ 179ನೇ ಜಯವಾಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾ 178 ಗೆಲುವು ಹಾಗೂ 178 ಸೋಲು ಕಂಡಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡ ಸೋಲುಗಳ ಸಂಖ್ಯೆಗಿಂತ ಗೆಲುವಿನ ಸಂಖ್ಯೆ ಹೆಚ್ಚಿರುವುದು ಇದೇ ಮೊದಲು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications