Asian Champions Trophy Hockey: ಇಂದು ಭಾರತ, ದಕ್ಷಿಣ ಕೊರಿಯಾ ಸೆಮಿಫೈನಲ್ ಫೈಟ್: ಲೈವ್ ನೋಡುವುದು ಹೇಗೆ?
ಪ್ರಸಕ್ತ ವರ್ಷ ಭರ್ಜರಿ ಫಾರ್ಮ್‌ನಲ್ಲಿರುವ ಭಾರತ ಹಾಕಿ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಸ್ಥಿರ ಪ್ರದರ್ಶನ ಮುಂದುವರೆಸಿದೆ. ಲೀಗ್ ಹಂತದ ಪಂದ್ಯದಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ಭಾರತ, ಸೆಮಿಫೈನಲ್ ಪಂದ್ಯದಲ್ಲಿ ಇಂದು ದಕ್ಷಿಣ ಕೊರಿಯಾ ವಿರುದ್ಧ ಕಾದಾಟ ನಡೆಸಲಿದೆ. ಈ ಟೂರ್ನಿಯ ಪ್ರಶಸ್ತಿ ಗೆಲ್ಲಲು ಟೀಮ್ ಇಂಡಿಯಾ ಎರಡು ಹೆಜ್ಜೆ ಹಿಂದೆ ನಿಂತಿದೆ.
ಟೀಮ್ ಇಂಡಿಯಾ ಲೀಗ್ ಹಂತದ ಎಲ್ಲಾ 5 ಪಂದ್ಯಗಳಲ್ಲಿ ಏಕಪಕ್ಷೀಯ ಪ್ರದರ್ಶನ ನೀಡಿತ್ತು. ಆತಿಥೇಯ ಚೀನಾ ವಿರುದ್ಧ 3-0, ಮಲೇಷ್ಯಾ ವಿರುದ್ಧ 5-1 ಮತ್ತು 8-1 ಅಂತರದಿಂದ ಜಯ ಸಾಧಿಸಿತು. ನಂತರ ದಕ್ಷಿಣ ಕೊರಿಯಾ ವಿರುದ್ಧ 3-1 ರಿಂದ ಮತ್ತು ಪಾಕಿಸ್ತಾನದ ವಿರುದ್ಧ 2-1 ರಿಂದ ಜಯ ಸಾಧಿಸಿರುವ ಟೀಮ್ ಇಂಡಿಯಾ ಅಜೇಯ ಓಟವನ್ನು ಮುಂದುವರೆಸಿದೆ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಸಿಂಗ್ ಪಡೆ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ತಂಡವು ಲೀಗ್ ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯವನ್ನು 3-1 ರಿಂದ ಗೆದ್ದು ಬೀಗಿತ್ತು. ಸೆಮಿಫೈನಲ್ಸ್ ಪಂದ್ಯದಲ್ಲೂ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನವನ್ನು ನೀಡಿ ಫೈನಲ್‌ಗೆ ಪ್ರವೇಶಿಸುವ ಕನಸು ಕಾಣುತ್ತಿದೆ.
ಗರಿಷ್ಠ ಗೋಲ್ ಬಾರಿಸಿದ್ದು ಯಾರು?
ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಟೀಮ್ ಇಂಡಿಯಾದ ಆಟದಲ್ಲಿ ಕಂಡು ಬಂದ ದೊಡ್ಡ ಬದಲಾವಣೆ ಅಂದರೆ, ಫೀಲ್ಡ್‌ಗೋಲುಗಳು ಸಂಖ್ಯೆ ಏರಿಕೆ ಆಗಿದ್ದು. ಈ ಟೂರ್ನಿಯಲ್ಲಿ ಇಲ್ಲಿಯವರೆಗೂ ತಮ್ಮ ಪ್ರದರ್ಶನದಿಂದ ಎಲ್ಲರ ಮನಗೆದ್ದಿರುವ ಯುವ ಆಟಗಾರರಿಗೂ ತಂಡದಲ್ಲಿ ಅವಕಾಶ ಸಿಕ್ಕಿದೆ. ಭಾರತ ಈ ಟೂರ್ನಿಯಲ್ಲಿ ಸದ್ಯ 14 ಫೀಲ್ಡ್ ಗೋಲುಗಳನ್ನು ಬಾರಿಸಿದೆ. ಹರ್ಮನ್ ಪ್ರೀತ್ ಸಿಂಗ್ 5 ಗೋಲು ಬಾರಿಸಿ ಮಿಂಚಿದ್ದಾರೆ.
ಈ ಪಂದ್ಯದ ನೇರ ಪ್ರಸಾರ ನೋಡುವುದು ಎಲ್ಲಿ?
ಭಾರತ ಮತ್ತು ದಕ್ಷಿಣ ಕೊರಿಯಾ ನಡುವಿನ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯವು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.
ಪಂದ್ಯ ಯಾವಾಗ ನಡೆಯಲಿದೆ?
ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಈ ಸೆಮಿಫೈನಲ್ ಪಂದ್ಯ ಸೋಮವಾರ, ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
ಭಾರತ ಈಗಾಗಲೇ ಈ ಟೂರ್ನಿಯನ್ನು ನಾಲ್ಕು ಬಾರಿ ಗೆದ್ದಿದೆ. 2011, 2016, 2018, 2023ರಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಐದನೇ ಬಾರಿಗೆ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications