ಭಾರತದಲ್ಲಿ ನಡೆಯಲಿರುವ ವಿಶ್ವಕಪ್ 2025 ದಿನಾಂಕ, ಸ್ಥಳ ಪ್ರಕಟ: ಬೆಂಗಳೂರಿಗೆ ದೊಡ್ಡ ಪಂದ್ಯಗಳ ಆತಿಥ್ಯ
12 ವರ್ಷಗಳ ಬಳಿಕ ಭಾರತದಲ್ಲಿ ಮಹಿಳಾ ವಿಶ್ವಕಪ್ ಆಯೋಜಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ದೊಡ್ಡ ಸುದ್ದಿಯನ್ನು ನೀಡಿದೆ. ಐಸಿಸಿ 2025ರ ಮಹಿಳಾ ವಿಶ್ವಕಪ್ ಸ್ಥಳ ಹಾಗೂ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಈ ಟೂರ್ನಿ ಸೆಪ್ಟಂಬರ್ 30 ರಿಂದ ಆರಂಭವಾಗಲಿದ್ದು, ನವೆಂಬರ್ 2ರ ವರೆಗೆ ನಡೆಯಲಿದೆ. ಈ ಟೂರ್ನಿಗಾಗಿ ಬೆಂಗಳೂರು, ಗುವಾಹಟಿ, ಇಂದೋರ್, ವಿಶಾಖಪಟ್ಟಣ ಮತ್ತು ಕೊಲಂಬೊಗಳನ್ನು ಫೈನಲ್ ಮಾಡಲಾಗಿದೆ. 13 ನೇ ಮಹಿಳಾ ವಿಶ್ವಕಪ್ ಮೇಲೆ ಎಲ್ಲರ ಚಿತ್ತ ನೆಟ್ಟಿವೆ.
ಈ ಮೆಗಾ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ 8 ದೇಶಗಳು ಭಾಗವಹಿಸುತ್ತಿವೆ. ಕಳೆದ ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಹಿಳಾ ತಂಡ, ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕೆ ಇಳಿಯಲಿದೆ. ಆಸ್ಟ್ರೇಲಿಯಾ ಏಳು ಬಾರಿ ಪ್ರಶಸ್ತಿಯನ್ನು ಜಯಿಸಿದ್ದು ಅತ್ಯಂತ ಯಶಸ್ವಿ ತಂಡವಾಗಿದೆ.

ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಆಡಲಿದೆ. ಈ ಪಂದ್ಯದಲ್ಲಿ ಭಾರತ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸುವ ತಂಡದೊಂದಿಗೆ ಕಾದಾಟ ನಡೆಸಲಿದೆ. ಈ ಟೂರ್ನಿಗೆ ಗುವಾಹಟಿಯ ಎಸಿಎ ಕ್ರೀಡಾಂಗಣ, ಇಂದೋರ್‌ನ ಹೋಳ್ಕರ್ ಕ್ರೀಡಾಂಗಣ ಮತ್ತು ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಈ ಪಂದ್ಯಾವಳಿಯು ರೌಂಡ್-ರಾಬಿನ್ ಆಧಾರದ ಮೇಲೆ ನಡೆಯಲಿದೆ, ಇದರಲ್ಲಿ ಒಟ್ಟು 28 ಲೀಗ್ ಹಂತದ ಪಂದ್ಯಗಳು ನಡೆಯುತ್ತವೆ. ಇದರ ನಂತರ, 2 ಸೆಮಿಫೈನಲ್ ಮತ್ತು ಫೈನಲ್ ನಡೆಯಲಿದೆ.
ಇತ್ತೀಚಿಗೆ ಪಾಕಿಸ್ತಾನದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಗೆ ಭಾರತ ಪ್ರವಾಸ ಬೆಳೆಸಿರಲಿಲ್ಲ. ಈ ಬಗ್ಗೆ ದೊಡ್ಡ ವಿವಾದವೇ ಹುಟ್ಟಿಕೊಂಡಿತ್ತು. ಆಗ ಪಿಸಿಬಿ, ಐಸಿಸಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿತು. ಈ ವೇಳೆ ತೆಗೆದುಕೊಂಡ ತೀರ್ಮಾನದಂತೆ ಭಾರತದಲ್ಲಿ ನಡೆಯಲಿರುವ ಯಾವುದೇ ಐಸಿಸಿ ಟೂರ್ನಿಗೆ ಪಾಕ್ ಪ್ರವಾಸ ಬೆಳೆಸುವುದಿಲ್ಲ ಎಂದು ತಿಳಿಸಿತ್ತು. ಅಲ್ಲದೆ ಪಾಕ್ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡುವುದಾಗಿ ತೀರ್ಮಾನಿಸಲಾಗಿತ್ತು. ಅಂತೆಯೇ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಭಾಗವಹಿಸಲು ಪಾಕ್ ಮಹಿಳಾ ತಂಡ ಭಾರತಕ್ಕೆ ಬರುತ್ತಿಲ್ಲ. ಬದಲಿಗೆ ಪಾಕ್ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದ ಕೋಲಂಬೋದಲ್ಲಿ ಆಡಲಿದೆ.
ಸೆಮಿಫೈನಲ್, ಫೈನಲ್ ಯಾವಾಗ?
ಒಂದು ವೇಳೆ ಪಾಕಿಸ್ತಾನ ಮಹಿಳಾ ತಂಡ ಸೆಮಿಫೈನಲ್, ಫೈನಲ್ ತಲುಪಿದರೆ ಆ ತಂಡ ತನ್ನ ಎಲ್ಲ ಪಂದ್ಯಗಳನ್ನು ಕೊಲೊಂಬೋದಲ್ಲಿ ಆಡಲಿದೆ. ಇಲ್ಲದೇ ಇದ್ದರೆ ಮೊದಲ ಸೆಮಿಫೈನಲ್ ಪಂದ್ಯ ಅಕ್ಟೋಬರ್ 29 ರಂದು ಗುವಾಹಟಿಯಲ್ಲಿ, ಎರಡನೇ ಸೆಮಿಫೈನಲ್ ಪಂದ್ಯ ಅಕ್ಟೋಬರ್ 30 ರಂದು ಬೆಂಗಳೂರಿನಲ್ಲಿ ಆಡಲಿದೆ. ಇನ್ನು ಫೈನಲ್ ಪಂದ್ಯಕ್ಕೂ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳ ಆತಿಥ್ಯ ವಹಿಸಲಿದೆ. ಒಂದು ವೇಳೆ ಪಾಕಿಸ್ತಾನ ಫೈನಲ್ ಪ್ರವೇಶಿಸಿದರೆ ಕೊಲೊಂಬೊದಲ್ಲಿ ಪಂದ್ಯ ನಡೆಯಲಿದೆ.
ಐಸಿಸಿ ಮಹಿಳಾ ವಿಶ್ವಕಪ್ 2025 ಜೊತೆಗೆ, ಮುಂದಿನ ವರ್ಷ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರ ಆತಿಥೇಯ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಮಹಿಳಾ ಟಿ20 ವಿಶ್ವಕಪ್ 2026 ಜೂನ್ 12 ರಂದು ಆರಂಭವಾಗಿ ಜುಲೈ 5ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications