'ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಯೋಜನೆ ಸಿದ್ಧವಾಗಿದೆ'

ನವದೆಹಲಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾ ಒಂದು ವಾರದ ಕ್ವಾರಂಟೈನ್ ಪಾಲಿಸಲಿದೆ. ಆಂಗ್ಲರ ವಿರುದ್ಧದ ಸರಣಿಗೆ ಭಾರತ ತಂಡ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಂಡದ ಸಿಬ್ಬಂದಿ ಹೇಳಿದ್ದಾರೆ.
'ನಾವು ಆಸ್ಟ್ರೇಲಿಯಾದಲ್ಲಿ ಅಸಾಧಾರಣ ಸಾಧನೆ ಮಾಡಿದ್ದೇವೆ (ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ 2-1ರ ಗೆಲುವು). ಅಲ್ಲಿ ನಾವು ನಮ್ಮ ಯಶಸ್ಸಿನ ಪ್ರತೀ ಕ್ಷಣವನ್ನು ಸವಿದಿದ್ದೇವೆ, ಸಂಭ್ರಮಿಸಿದ್ದೇವೆ. ಆದರೆ ಈಗ ನಾವು ಅದೆಲ್ಲವನ್ನೂ ಮರೆತು ಮುಂದಡಿಯಿಡಬೇಕಿದೆ,' ಎಂದು ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.
ಮಾತು ಮುಂದುವರೆಸಿದ ಭರತ್, 'ಮುಂದೆ ನಾವು ಇಂಗ್ಲೆಂಡ್ ವಿರುದ್ಧದ ಸರಣಿ ಎದುರುಗೊಳ್ಳಲಿದ್ದೇವೆ. ಈ ಸರಣಿಗೆ ನಮ್ಮಲ್ಲಿ ಯೋಜನೆಗಳಿವೆ. ನಮಗೆ ಸಮಯವಿದೆ. ನಾವು ಸರಣಿಗೂ ಮುನ್ನ ಒಂದು ವಾರದ ಕ್ವಾರಂಟೈನ್ ಪಾಲಿಸಲಿದ್ದೇವೆ,' ಎಂದು ವಿವರಿಸಿದ್ದಾರೆ.
ಭಾರತಕ್ಕೆ ಪ್ರವಾಸ ಬರಲಿರುವ ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ, ಐದು ಪಂದ್ಯಗಳ ಟಿ20ಐ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇತ್ತಂಡಗಳ ಪಂದ್ಯಗಳು ಫೆಬ್ರವರಿ 5ರಿಂದ ಟೆಸ್ಟ್ ಸರಣಿಯೊಂದಿಗೆ ಆರಂಭಗೊಳ್ಳಲಿದೆ. ಆರಂಭಿಕ ಟೆಸ್ಟ್ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಫೆಬ್ರವರಿ 5-9ರ ವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications