Champions Trophy 2025: ಚಾಂಪಿಯನ್ಸ್ ಟ್ರೋಫಿ ಟೀಮ್ ಇಂಡಿಯಾಕ್ಕೆ ಸವಾಲುದಾಯಕ: ಇಲ್ಲಿದೆ ಕಾರಣ
ಮುಂದಿನ ಪಾಕಿಸ್ತಾನ ಬಹು ನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲಿದೆ. ಈ ಟೂರ್ನಿಗೆ ಈಗಾಗಲೇ ಸಿದ್ಧತೆಗಳು ನಡೆದಿವೆ. ಭಾರತ, ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂದು ಹಠ ಹಿಡಿದು, ಗೆದ್ದಿದೆ. ಪಾಕ್‌ನಲ್ಲಿ ಭದ್ರತಾ ಕಾರಣಗಳನ್ನು ನೀಡಿದ ಭಾರತ ಸರ್ಕಾರ ತಮ್ಮ ತಂಡವನ್ನು ನೆರೆ ದೇಶಕ್ಕೆ ಕಳುಹಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಇದಾದ ಮೇಲೆ ಸಭೆಗಳು ಚರ್ಚೆಗಳು ನಡೆದಿದ್ದು, ಈಗ ಇದರ ಬ್ಲ್ಯೂ ಪ್ರಿಂಟ್ ಹೊರ ಬಿದ್ದಿದೆ. ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಪಾಕ್ ಒಪ್ಪಿಗೆ ನೀಡಿದೆ. ಹೀಗಾಗಿ ಭಾರತ ತನ್ನ ಪಂದ್ಯಗಳನ್ನು ಈ ಬಾರಿ ಯುಎಇನಲ್ಲಿ ಆಡಲಿದೆ. ಈ ನಡುವೆ ಭಾರತಕ್ಕೆ ಒಂದು ಟೆನ್ಷನ್ ಆರಂಭವಾಗಿದೆ.
ಭಾರತ 2025ರ ಚಾಂಪಿಯನ್ಸ್ ಟ್ರೋಫಿಯ ಎಲ್ಲ ಪಂದ್ಯಗಳನ್ನು ಸಹ ದುಬೈ ಆಯೋಜಿಸಲಿದೆ. ಒಂದು ವೇಳೆ ಭಾರತ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್‌ಗೆ ಭಾರತ ಪ್ರವೇಶಿಸಿದ್ದೇ ಆದಲ್ಲಿ, ಈ ಪಂದ್ಯಗಳು ಸಹ ನೆರೆಯ ಯುಎಇನಲ್ಲೇ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಈ ಬಾರಿ ದುಬೈನಲ್ಲಿ ನಡೆದರೂ ಸಹ ಟೀಮ್ ಇಂಡಿಯಾಕ್ಕೆ ಸಂಕಷ್ಟ ಒಂದು ಎದುರಾಗಿದೆ. ಈ ಬಾರಿ ಐಸಿಸಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸುವುದು ಸುಲಭದ ಮಾತಲ್ಲ.

ಏಳು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ
ಸುಮಾರು ಏಳು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಮತ್ತೆ ಆಯೋಜಿಸಲಾಗುತ್ತಿದೆ. ಚಾಂಪಿಯನ್ಸ್ ಟ್ರೋಫಿಯನ್ನು 2021 ರಲ್ಲಿ, ಐಸಿಸಿ ಅದನ್ನು ಮತ್ತೆ ಪ್ರಾರಂಭಿಸಲು ನಿರ್ಧರಿಸಿತು. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಏಕದಿನ ಮಾದರಿಯಲ್ಲಿ ಆಡಲಾಗುತ್ತದೆ. ಏಕದಿನ ಪಂದ್ಯಗಳನ್ನು ಭಾರತ ಬಹು ದಿನಗಳಿಂದ ಆಡದೇ ಇರುವುದು ನಿಜಕ್ಕೂ ದೊಡ್ಡ ಸಮಸ್ಯೆಯಾಗಿದೆ. ಏಕದಿನ ಹಾಗೂ ಟಿ20 ಪಂದ್ಯಗಳ ನಡುವೆ ನಿಶ್ಚಿತವಾಗಿ ವ್ಯತ್ಯಾಸಗಳು ಇವೆ. ಏಕದಿನ ಪಂದ್ಯಗಳಿಗೆ ದೀರ್ಘ ಅಭ್ಯಾಸದ ಅವಶ್ಯಕತೆ ಇದೆ. ನೆಟ್ಸ್‌ನಲ್ಲಿ ಎಷ್ಟೇ ಅಭ್ಯಾಸ ಮಾಡಿದರೂ, ಪಂದ್ಯ ಆಡುವಾಗ ಅದರ ಒತ್ತಡ ಬೇರೆಯದ್ದೇ ಆಗಿರುತ್ತದೆ.
ಇಂಗ್ಲೆಂಡ್ ವಿರುದ್ಧ ಸರಣಿ
ಸದ್ಯ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಈ ಸರಣಿ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೊದಲು ಐದು ಟಿ20 ಪಂದ್ಯಗಳ ಸರಣಿ ನಡೆಯಲಿದ್ದು, ಇದಾದ ಬಳಿಕ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈ ಸರಣಿ ಚಾಂಪಿಯನ್ಸ್ ಟ್ರೋಫಿಗೆ ಪೂರಕವಾಗಿ ಇರಲಿದೆ. ಅಂದರೆ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆಸಲು ಟೀಮ್ ಇಂಡಿಯಾಕ್ಕೆ ಕೇವಲ ಮೂರು ಪಂದ್ಯಗಳು ಸಿಗಲಿವೆ. ಚಾಂಪಿಯನ್ಸ್ ಟ್ರೋಫಿ ಮುಂದೆ ಇರುವಾಗ ಬಿಸಿಸಿಐ ಯಾವ ರೀತಿ ಸರಣಿಗಳನ್ನು ಪೂರಕವಾಗಿ ಏಕದಿನ ಸರಣಿ ನಡೆಸಬೇಕಿತ್ತು ಎಂಬುದೇ ಅಭಿಮಾನಿಗಳ ಪ್ರಶ್ನೆ.

ದುಬೈ ಪಿಚ್ ಮರ್ಮ್ ತಿಳಿದಿಲ್ಲ
ಇನ್ನು ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇನ್ನು ಟೀಮ್ ಇಂಡಿಯಾ ಬಹು ದಿನಗಳಿಂದ ಹೋಗಿ ಪಂದ್ಯವನ್ನು ಆಡಿಲ್ಲ. ಹೀಗಾಗಿ ಅಲ್ಲಿನ ಪಿಚ್ ಬಗ್ಗೆ ಅಂದಾಜಿಸುವುದು ಕಷ್ಟ. ಭಾರತಕ್ಕೆ ದುಬೈ ಪಿಚ್ ಲಕ್ಕಿ ಪಿಚ್ ಎಂದೇನು ಇಲ್ಲ. ಆದರೆ ಪಾಕಿಸ್ತಾನ ತಂಡಕ್ಕೆ ದುಬೈ ಪಿಚ್ ಮನೆಯ ಅಂಗಳದಂತೆ ಆಗಿದೆ. ಹೀಗಾಗಿ ಟೀಮ್ ಇಂಡಿಯಾ ಈ ಪಿಚ್‌ನಲ್ಲಿ ಹೆಚ್ಚಿನ ಸಮಸ್ಯೆಯನ್ನು ಎದುರಿಸಲಿದೆ. ಈ ಎಲ್ಲ ಸಮಸ್ಯೆಗಳನ್ನು ಟೀಮ್ ಇಂಡಿಯಾ ಹೇಗೆ ಮೆಟ್ಟಿ ನಿಲ್ಲುತ್ತದೆ ಎಂಬುದನ್ನೇ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications