ಭಾರತದಿಂದ ಆಸ್ಟ್ರೇಲಿಯಾ ಪ್ರವಾಸ: 3 ಟಿ20, 4 ಟೆಸ್ಟ್, 3 ಒಡಿಐ ವೇಳಾಪಟ್ಟಿ
ಬೆಂಗಳೂರು, ನವೆಂಬರ್ 09: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ನವೆಂಬರ್ ತಿಂಗಳ ಅಂತ್ಯಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.
ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಪಡೆಯು ಮೊದಲಿಗೆ 3 ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ನಂತರ 4 ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಲಿದೆ.
ನವೆಂಬರ್ 21ರಂದು ಬ್ರಿಸ್ಬೇನ್ ನಲ್ಲಿ ಮೊದಲ ಟಿ20ಐ ನಡೆಯಲಿದೆ. ಡಿಸೆಂಬರ್ 6 ರಿಂದ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್ ಒವಲ್ ನಲ್ಲಿ ಆರಂಭಗೊಳ್ಳಲಿದೆ. ಕೊನೆಯ ಪಂದ್ಯ ಜನವರಿ 03ರಂದು ನಡೆಯಲಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಶ್ರೇಯಾಂಕದಲ್ಲಿರುವ ಟೀಂ ಇಂಡಿಯಾಕ್ಕೆ ಇದು ಮಹತ್ವದ ಸರಣಿಯಾಗಿದೆ. ಜೊತೆಗೆ ವಿಶ್ವಕಪ್ 2019ಕ್ಕೂ ಮುನ್ನ ಏಕದಿನ ಕ್ರಿಕೆಟ್ ತಂಡವನ್ನು ರೂಪಿಸಲು ಇದು ಸೂಕ್ತವಾಗಿದೆ.
ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದೆ ಸತತ ಸೋಲು ಅನುಭವಿಸಿದೆ. ಪಾಕಿಸ್ತಾನ ವಿರುದ್ಧ ಟೆಸ್ಟ್, ಟಿ20 ಸರಣಿ ಹಾಗೂ ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳಲ್ಲಿ ಸತತ ಸೋಲು ಕಂಡಿದೆ.
ಎಂಎಸ್ ಧೋನಿ ಇಲ್ಲದೆ ಟಿ20 ತಂಡ ಪ್ರಯಾಣ ಬೆಳೆಸಲಿದೆ. ಏಕದಿನ ಕ್ರಿಕೆಟ್ ತಂಡದಲ್ಲಿ ಮಧ್ಯಮ ಕ್ರಮಾಂಕ, ಆಲ್ ರೌಂಡರ್ ಆಯ್ಕೆಗಾಗಿ ಈ ಸರಣಿ ಮುಖ್ಯವಾಗಲಿದೆ.

ಟ್ವೆಂಟಿ20ಐ ಸರಣಿ ವೇಳಾಪಟ್ಟಿ
ಚಾನೆಲ್ : ಸೋನಿ/ಇಎಸ್ ಪಿಎನ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಸೋನಿಲಿವ್.ಕಾಂ
ಜಿಲೆಟ್ ಟಿ20 ಸರಣಿ
ನವೆಂಬರ್ 21: ದಿ ಗಬ್ಬಾ ಬ್ರಿಸ್ಬೇನ್ 1.50 PM(IST)
ನವೆಂಬರ್ 23: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) 1.20 PM IST
ನವೆಂಬರ್ 25: ಸಿಡ್ನಿ ಕ್ರಿಕೆಟ್ ಗ್ರೌಂಡ್ (ಎಸ್ ಸಿಜಿ), 1.20 PM IST

ಟಿ20 ಸರಣಿಗೆ ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್, ಉಮೇಶ್ ಯಾದವ್.

ಡೊಮೈನ್ ಟೆಸ್ಟ್ ಸರಣಿ ವೇಳಾಪಟ್ಟಿ
* ಡಿಸೆಂಬರ್ 6-10 : ಅಡಿಲೇಡ್ ಒವಲ್, 5.30 AM (IST)
* ಡಿಸೆಂಬರ್ 14-18 : ಆಪ್ಟಸ್ ಸ್ಟೇಡಿಯಂ, ಪರ್ತ್ 7.50 AM (IST)
* ಡಿಸೆಂಬರ್ 26-30 : ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್(ಎಂಸಿಜಿ). 5.00 AM IST
* ಜನವರಿ 3-7 : ಸಿಡ್ನಿ ಕ್ರಿಕೆಟ್ ಗ್ರೌಂಡ್(ಎಸ್ ಸಿಜಿ), 5.00 AM IST

ಟೆಸ್ಟ್ ಸರಣಿಗೆ ಭಾರತ ತಂಡ
ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಪೃಥ್ವಿ ಶಾ, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರೋಹಿತ್ ಶರ್ಮ, ರಿಷಬ್ ಪಂತ್, ಪಾರ್ಥೀವ್ ಪಟೇಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್.

ಏಕದಿನ ಕ್ರಿಕೆಟ್ (ಎಲ್ಲವೂ ಹಗಲು-ರಾತ್ರಿ ಪಂದ್ಯಗಳು)
ಮೊದಲ ಏಕದಿನ ಪಂದ್ಯ : ಜನವರಿ 12 : ಸಿಡ್ನಿ ಕ್ರಿಕೆಟ್ ಗ್ರೌಂಡ್, 8.50 AM (IST)
* ಎರಡನೇ ಏಕದಿನ ಪಂದ್ಯ: ಜನವರಿ 15 : ಅಡಿಲೇಡ್ ಓವಲ್ : 9.20 AM IST
* ಮೂರನೇ ಏಕದಿನ ಪಂದ್ಯ: ಜನವರಿ 18: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ 7.50 AM IST
ಭಾರತದ ಏಕದಿನ ಕ್ರಿಕೆಟ್ ತಂಡವನ್ನು ಇನ್ನೂ ಪ್ರಕಟಿಸಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications