ಆರ್‌ಸಿಬಿಯಿಂದ ಟೀಂ ಇಂಡಿಯಾಕ್ಕೆ ಯಾರು ಯಾರು ಆಯ್ಕೆ?

ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು ಇಂದು (ಅ. 26) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆದಾರರು ಪ್ರಕಟಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನಲ್ಲಿ ಆಡುತ್ತಿರುವ ಅನೇಕ ಯುವ ಪ್ರತಿಭೆಗಳಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಕಲ್ಪಿಸಲಾಗಿದೆ.
ಟೀಂ ಇಂಡಿಯಾ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರು ಹಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಭಾಗವಾಗಿದ್ದು, ಹಲವು ಏಳು ಬೀಳು ಕಂಡಿದ್ದಾರೆ. ಟೀಂ ಇಂಡಿಯಾ ನಾಯಕರಾಗಿ ಕಂಡ ಯಶಸ್ಸು ಆರ್ ಸಿಬಿ ನಾಯಕರಾಗಿ ಕಾಣದಿದ್ದರೂ ಟಾಪ್ 5 ಐಪಿಎಲ್ ನಾಯಕರ ಪಟ್ಟಿಯಲ್ಲಿದ್ದಾರೆ.
ನಿರೀಕ್ಷೆಯಂತೆ ಕೊಹ್ಲಿ ಅವರು ಟೆಸ್ಟ್, ಟಿ20, ಏಕದಿನ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಜೊತೆಗೆ ಆರ್ ಸಿಬಿ ವೇಗಿ ನವದೀಪ್ ಸೈನಿ ಅವರು ಕೂಡಾ ಮೂರು ಪ್ರಕಾರದ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮಿಕ್ಕಂತೆ ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಾಹಲ್ ಏಕದಿನ ಕ್ರಿಕೆಟ್ ಹಾಗೂ ಟಿ20ಐಗೆ ಆಯ್ಕೆಯಾಗಿದ್ದರೆ, ವಾಷಿಂಗ್ಟನ್ ಸುಂದರ್ ಟಿ20ಐ ಹಾಗೂ ಇದೇ ಮೊದಲ ಬಾರಿಗೆ ಮೊಹಮ್ಮದ್ ಸಿರಾಜ್ ಅವರು ಕೆಂಪು ಚೆಂಡಿನ ಆಟ ಟೆಸ್ಟ್ ಕ್ರಿಕೆಟ್ ಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಭಾರತ ತಂಡದಲ್ಲಿ ಆಡಿದ್ದ ಶಿವಂ ದುಬೆ ಅವರು ಆಯ್ಕೆದಾರರ ಕೃಪೆ ಗಳಿಸುವಲ್ಲಿ ವಿಫಲರಾಗಿದ್ದಾರೆ.
ಟೀಂ ಇಂಡಿಯಾದಲ್ಲಿ ಆರ್ ಸಿಬಿ ಆಟಗಾರರು:
ಕೊಹ್ಲಿ: 3 ಮಾದರಿಗೂ ಆಯ್ಕೆ
ಚಾಹಲ್: 2 ಮಾದರಿಗೆ
ಸೈನಿ: 3 ಮಾದರಿಗೂ ಆಯ್ಕೆ, ಮೊದಲ ಬಾರಿಗೆ ಟೆಸ್ಟ್ ತಂಡಕ್ಕೆ
ಸುಂದರ್: ಒಂದು ಮಾದರಿಗೆ
ಸಿರಾಜ್: ಒಂದು ಮಾದರಿಗೆ
ದುಬೆ: ಆಯ್ಕೆಯಾಗಿಲ್ಲ
ಭಾರತೀಯ ಕ್ರಿಕೆಟ್ ತಂಡವು ಪೂರ್ಣ ಪ್ರಮಾಣದ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದ್ದು, ಇದು ಆರು ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ (3 ಏಕದಿನ + 3 ಟಿ 20 ) ಗಳನ್ನು ಒಳಗೊಂಡಿರುತ್ತದೆ ಮತ್ತು ನಂತರ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಒಳಗೊಂಡಿರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications