ಪೃಥ್ವಿ ಶಾ ಸರಣಿಯಿಂದ ಹೊರಕ್ಕೆ: ಪಾಂಡ್ಯ, ಮಯಾಂಕ್ ಮರಳಿ ತಂಡಕ್ಕೆ

ನವದೆಹಲಿ, ಡಿಸೆಂಬರ್ 17: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೆಯ ಪಂದ್ಯದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಭಾರತ ತಂಡಕ್ಕೆ ಕೆಟ್ಟ ಹಾಗೂ ಒಳ್ಳೆಯ ಸುದ್ದಿಗಳೆರಡೂ ಒಟ್ಟಿಗೆ ಬಂದಿವೆ.
ಆಸ್ಟ್ರೇಲಿಯಾ ಇಲೆವೆನ್ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಪೃಥ್ವಿ ಶಾ, ಈಗ ಸರಣಿಯಿಂದಲೇ ಹೊರಗೆ ಉಳಿಯುವಂತಾಗಿದೆ. ಆರಂಭಿಕ ಆಟಗಾರರಾದ ಮುರಳಿ ವಿಜಯ್ ಮತ್ತು ಕೆಎಲ್ ರಾಹುಲ್ ಇಬ್ಬರೂ ವೈಫಲ್ಯ ಕಾಣುತ್ತಿರುವ ವೇಳೆ, ಪೃಥ್ವಿ ಶಾ ಗಾಯಾಳುವಾಗಿ ಹೊರಗೆ ಹೋಗುತ್ತಿರುವುದು ತಂಡಕ್ಕೆ ಮತ್ತೊಂದು ಆಘಾತ ನೀಡಿದೆ.
ಅವರ ಸ್ಥಾನಕ್ಕೆ ದೀರ್ಘಕಾಲದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಮಾಡುವ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಮಯಾಂಕ್ ಅಗರವಾಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತಕ್ಕೆ ಸಮಾಧಾನಕರ ಸಂಗತಿಯೆಂದರೆ ಇಂಗ್ಲೆಂಡ್ ಸರಣಿಯಲ್ಲಿ ಗಾಯಗೊಂಡಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿದ್ದು, ಕೊನೆಯ ಎರಡು ಟೆಸ್ಟ್‌ಗಳಿಗೆ ತಂಡಕ್ಕೆ ಮರಳಿದ್ದಾರೆ.
ಮುಂಬೈ ವಿರುದ್ಧದ ರಣಜಿ ಪಂದ್ಯದಲ್ಲಿ ತವರಿನ ಬರೋಡಾ ತಂಡದಲ್ಲಿ ಆಡಿದ್ದ ಪಾಂಡ್ಯ, ತಾವು ಸಂಪೂರ್ಣರಾಗಿ ಗುಣಮುಖರಾಗಿರುವ ಸಂದೇಶ ರವಾನಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಅರ್ಧ ಶತಕ ಬಾರಿಸಿದ್ದಲ್ಲದೆ, ಒಟ್ಟು ಏಳು ವಿಕೆಟ್ ಪಡೆದುಕೊಂಡಿದ್ದರು.
ಅಭ್ಯಾಸ ಪಂದ್ಯದ ವೇಳೆ ಕ್ಯಾಚ್ ಹಿಡಿಯುವ ವೇಳೆ ಪೃಥ್ವಿ ಶಾ ಕಾಲಿಗೆ ಗಾಯ ಮಾಡಿಕೊಂಡಿದ್ದರು. ಮೊದಲ ಎರಡು ಟೆಸ್ಟ್‌ಗಳಲ್ಲಿಯೂ ಅವರು ಆಡಿರಲಿಲ್ಲ. ಮೆಲ್ಬರ್ನ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ವೇಳೆಗೆ 19ರ ಹರೆಯದ ಪೃಥ್ವಿ ಶಾ ಚೇತರಿಸಿಕೊಳ್ಳುವ ನಿರೀಕ್ಷೆಯಿತ್ತು.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ಮಯಾಂಕ್ ಅಗರವಾಲ್, ಪಾದಾರ್ಪಣೆ ಮಾಡುವ ಅದೃಷ್ಟ ಪಡೆದುಕೊಂಡಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ಅವರನ್ನು ಪರಿಗಣಿಸಿರಲಿಲ್ಲ. ಪೃಥ್ವಿ ಶಾ ಗಾಯಗೊಂಡಿರುವುದರಿಂದ ಅವರ ಬದಲಿಗೆ ಮಯಾಂಕ್ ಸ್ಥಾನ ಪಡೆದಿದ್ದಾರೆ.
ಅತ್ತ ಮುರಳಿ ವಿಜಯ್ ಮತ್ತು ರಾಹುಲ್ ಇಬ್ಬರೂ ಸತತ ವೈಫಲ್ಯ ಅನುಭವಿಸುತ್ತಿರುವುದರಿಂದ ಮಯಾಂಕ್ ಮೂರನೇ ಟೆಸ್ಟ್‌ನಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications