ಭಾರತ vs ಆಸ್ಟ್ರೇಲಿಯಾ: NCAನಲ್ಲಿ ತರಬೇತಿ ಆರಂಭಿಸಿದ ಇಶಾಂತ್ ಶರ್ಮಾ

ಟೀಮ್ ಇಂಡಿಯಾದ ಅನುಭವಿ ವೇಗಿ ಇಶಾಂತ್ ಶರ್ಮಾ ಬೆಂಗಳೂರಿನ ನ್ಯಾಶನರ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಯನ್ನು ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಳ್ಗೊಳ್ಳಲಿರುವ ಇಶಾಂತ್ ಶರ್ಮಾ ಫಿಟ್‌ನೆಸ್ ಮರಳಿ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
ಇಶಾಂತ್ ಶರ್ಮಾ ಕಳೆದ ಐಪಿಎಲ್ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ ಬಳಿಕ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಶಾಂತ್ ಶರ್ಮಾ ಒಂದೇ ಪಂದ್ಯಕ್ಕೆ ಸೀಮಿತವಾಗಿದ್ದರು. ಹೀಗಾಗಿ ವಿಶ್ರಾಂತಿ ಪಡೆದು ಮತ್ತೆ ಫಿಟ್‌ನೆಸ್ ಗಳಿಸಲು ಶ್ರಮಿಸುತ್ತಿದ್ದಾರೆ.
ಡಿಸೆಂಬರ್ 17ರಿಂದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಅಹರ್ನಿಶಿಯಾಗಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ತಮ್ಮ ಫಿಟ್‌ನೆಸ್ ಸಾಬೀತುಪಡಿಸಬೇಕಿದೆ. ಹಾಗಾಗಿ ಇಶಾಂತ್ ಶರ್ಮಾ ತಮ್ಮ ಅಭ್ಯಾಸವನ್ನು ಎನ್‌ಸಿಎನಲ್ಲಿ ನಡೆಸುತ್ತಿದ್ದಾರೆ.
ಇಎಸ್‌ಪಿಎನ್ ಕ್ರಿಕ್ ಇನ್‌ಫೋ ಟ್ವಿಟ್ಟರ್ ಖಾತೆಯಲ್ಲಿ ಇಶಾಂತ್ ಶರ್ಮಾ ಎನ್‌ಸಿಎನಲಲಿ ಅಭ್ಯಾಸವನ್ನು ನಡೆಸುತ್ತಿರುವ ವಿಡಿಯೀವೊಂದನ್ನು ಹಂಚಿಕೊಂಚಿಕೊಳ್ಳಲಾಗಿದೆ. ಇದನ್ನು ಎನ್‌ಸಿಎ ನಿರ್ದೇಶಕ ರಾಹುಲ್ ದ್ರಾವಿಡ್ ಹಾಗೂ ಮುಖ್ಯಾ ಆಯ್ಕೆಗಾರ ಸುನಿಲ್ ಜೋಶಿ ವೀಕ್ಷಿಸುತ್ತಿದ್ದಾರೆ.
ಇಶಾಂತ್ ಶರ್ಮಾ ಎನ್‌ಸಿಎನಲ್ಲಿ ಒಂದು ವಿಕೆಟ್ ಇರಿಸಿಕೊಂಡು ಬೌಲಿಂಗ್ ನಡೆಸುತ್ತಿದ್ದಾರೆ. ಎನ್‌ಸಿಎ ಕೋಚಿಂಗ್ ಸ್ಟಾಫ್ ಪರಾಸ್ ಎಂಹಬ್ರೇ, ಮನ್ಸೂರ್ ಖಾನ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದಾರೆ. ಬಿಸಿಸಿಐ ಅಧ್ಯಕ್ಷ ಸವರವ್ ಗಂಗೂಲಿ ಇತ್ತೀಚಿನ ಸಂದರ್ಶನದಲ್ಲಿ ಅಡಿಲೇಡ್‌ನಲ್ಲಿನ ಪಿಂಕ್ ಬಾಲ್ ಟೆಸ್ಟ್‌ಗೂ ಮುನ್ನ ಇಶಾಂತ್ ಶರ್ಮಾ ಸಂಪೂರ್ಣ ಫಿಟ್ ಆಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications