ಇಂಗ್ಲೆಂಡ್ vs ಭಾರತ 2021: ಟೆಸ್ಟ್ ಸರಣಿಯ ವೇಳಾಪಟ್ಟಿ ವೈರಲ್

ನವದೆಹಲಿ: ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತ ತಂಡ ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. 2021ರ ಈ ಸರಣಿಗೆ ಸಂಬಂಧಿಸಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ವೇಳಾಪಟ್ಟಿ ಬಿಡುಗಡೆ ಮಾಡಿದೆ, ಈ ವೇಳಾಪಟ್ಟಿ ಖಾತರಿ ಮಾಡಿದೆ ಎನ್ನಲಾಗುತ್ತಿದೆ. ಸರಣಿಯ ವೇಳಾಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಆಗಸ್ಟ್ 4ರಂದು ಆರಂಭಗೊಳ್ಳುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಸೆಪ್ಟೆಂಬರ್ 14ರಂದು ಕೊನೆಗೊಳ್ಳಲಿದೆ. 2021ರಲ್ಲಿ ಟೀಮ್ ಇಂಡಿಯಾಕ್ಕೆ ಸಾಲು ಸಾಲು ಸರಣಿಗಳಿವೆ. 2020ರಲ್ಲಿ ಕೊರೊನಾದಿಂದಾಗಿ ಕೆಲ ಸರಣಿಗಳು ರದ್ದಾಗಿದ್ದವು. ಆದರೆ 2021ರಲ್ಲಿ ಕೊಹ್ಲಿ ಪಡೆ ಬ್ಯುಸಿಯಾಗಲಿದೆ.
ಸದ್ಯ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ನವೆಂಬರ್ 27ರಿಂದ ಅಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ, ಮೂರು ಪಂದ್ಯಗಳ ಟಿ20ಐ ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದೇ ಸಮಯಕ್ಕೆ ಅಂದರೆ ನವೆಂಬರ್ 27ರಿಂದ ಡಿಸೆಂಬರ್ 9ರ ವರೆಗೆ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಲಿರುವ ಇಂಗ್ಲೆಂಡ್ ತಂಡ ಅಲ್ಲಿ 3 ಟಿ20ಐ, 3 ಏಕದಿನ ಪಂದ್ಯಗಳನ್ನಾಡಲಿದೆ.
ಭಾರತ vs ಇಂಗ್ಲೆಂಡ್, ಐದು ಪಂದ್ಯಗಳ ಟೆಸ್ಟ್ ಸರಣಿಯ ಸಂಪೂರ್ಣ ವೇಳಾಪಟ್ಟಿ
* ಆಗಸ್ಟ್ 4-8, 1ನೇ ಟೆಸ್ಟ್, ಟ್ರೆಂಟ್ ಬ್ರಿಡ್ಜ್
* 12-16 ಆಗಸ್ಟ್, 2ನೇ ಟೆಸ್ಟ್, ಲಾರ್ಡ್ಸ್
* ಆಗಸ್ಟ್ 25-29, 3ನೇ ಟೆಸ್ಟ್, ಹೆಡಿಂಗ್ಲಿ
* 2-6 ಸೆಪ್ಟೆಂಬರ್, 4ನೇ ಟೆಸ್ಟ್, ಕಿಯಾ ಓವಲ್
* 10-14 ಸೆಪ್ಟೆಂಬರ್, 5ನೇ ಟೆಸ್ಟ್, ಓಲ್ಡ್ ಟ್ರಾಫರ್ಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications