For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ಪ್ರವಾಸದ ಬೆನ್ನಲ್ಲೇ ಐರ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದೆ ಭಾರತ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಬಳಿಕ ಒಂದು ತಿಂಗಳ ಕಾಲ ವಿರಾಮದ ಅವಧಿ ಹೊಂದಿದ್ದ ಟೀಮ್ ಇಂಡಿಯಾ ನಂತರ ಒಂದಾದ ಬಳಿಕ ಮತ್ತೊಂದು ಸರಣಿಯನ್ನಾಡಲು ಸಜ್ಜಾಗುತ್ತಿದೆ. ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ಮೂರು ಮಾದರಿಯಲ್ಲಿಯೂ ಸರಣಿಯನ್ನಾಡಲಿರುವ ಟೀಮ್ ಇಂಡಿಯಾ ಆ ಸರಣಿಯ ಬೆನ್ನಲ್ಲೇ ಮತ್ತೊಂದು ಪ್ರವಾಸ ಕೈಗೊಳ್ಳಲಿದೆ. ಐರ್ಲೆಂಡ್ ಪ್ರವಾಸ ಕೈಗೊಂಡು ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ.

ಕೆರಿಬಿಯನ್ ನಾಡಿಗೆ ಪ್ರವಾಸ ಕೈಗೊಂಡು ಟೀಮ್ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಪೈಕಿ ಟೆಸ್ಟ್ ಹಾಗೂ ಏಕದಿನ ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಸ್ಕ್ವಾಡ್ ಘೋಷಣೆಯಾಗಿದ್ದು ಚುಟುಕು ಮಾದರಿಯ ಸರಣಿಗೆ ಮಾತ್ರವೇ ತಂಡ ಪ್ರಕಟವಾಗಬೇಕಿದೆ. ಈ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಭಾರತ ತಂಡ ಐರ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು ಐಸಿಸಿ ಮಾಹಿತರಿಯ ಪ್ರಕಾರ ಆಗಸ್ಟ್ 18ರಂದು ಸರಣಿ ಆರಂಭವಾಗಲಿದ್ದು ಆಗಸ್ಟ್ 23ರಂದು ಕೊನೆಯ ಪಂದ್ಯ ನಡೆಯಲಿದೆ.

India tour to Ireland for 3 T20I matches after West Indies series in August

"12 ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಭಾರತ ತಂಡವನ್ನು ಐರ್ಲೆಂಡ್‌ಗೆ ಸ್ವಾಗತಿಸಲು ನಾವು ಸಂತೋಷವಾಗುತ್ತಿದೆ" ಎಂದು ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಕಾರ್ಯನಿರ್ವಾಹಕ ವಾರೆನ್ ಡ್ಯುಟ್ರೋಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನಾವು 2022ರಲ್ಲಿ ಪ್ರೇಕ್ಷಕರಿಂದ ತುಂಬಿದ್ದ ಎರಡು ಪಂದ್ಯಗಳನ್ನು ಕಂಡಿದ್ದೆವು. ಈ ವರ್ಷ ಮೂರು ಪಂದ್ಯಗಳ ಸರಣಿಯನ್ನು ಆಯೋಜಿಸುತ್ತಿದ್ದು ಇನ್ನೂ ಹೆಚ್ಚಿನ ಅಭಿಮಾನಿಗಳಿಗೆ ಅವಕಾಶ ದೊರೆಯಲಿದೆ. ಈ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಸ್ಮರಣೀಯ ಅನುಭವ ದೊರೆಯಲಿದೆ" ಎಂದು ವಾರೆನ್ ಡ್ಯುಟ್ರೋಮ್ ತಿಳಿಸಿದ್ದಾರೆ.

ಮುಂದುವರಿದು ಅವರು ಈ ಸರಣಿಯಲ್ಲಿ ಭಾಗಿಯಾಗುತ್ತಿರುವುದಕ್ಕೆ ಬಿಸಿಸಿಐಗೆ ಧನ್ಯವಾದ ತಿಳಿಸಿದ್ದಾರೆ. " ಮೊದಲನೆಯದಾಗಿ ಬಿಸಿಸಿಐಗೆ ನಮ್ಮ ಪ್ರಾಮಾಣಿಕ ಧನ್ಯವಾದಗಳು. ಭಾರತೀಯ ತಂಡ ಅವಿರತ ಪ್ರವಾಸದ ಮಧ್ಯೆಯೂ ಐರ್ಲೆಂಡ್ ಸರಣಿಯನ್ನು ಪರಿಗಣಿಸಿ ಅಭಿಮಾನಿಗಳಿಗೆ ಸೂಕ್ತವೆನಿಸುವಂತೆ ಶುಕ್ರವಾರ ಮತ್ತು ಭಾನುವಾರದಂದು ಪಂದ್ಯಗಳನ್ನು ಆಯೋಜಿಸಲು ಒಪ್ಪಿಗೆ ನೀಡಿರುವುದಕ್ಕೆ ಧನ್ಯವಾದಗಳು. ಇದು ಹೆಚ್ಚಿನ ಪ್ರಮಾಣದಲ್ಲಿ ಪ್ರೇಕ್ಷಕರು ಈ ಪಂದ್ಯಗಳಿಗೆ ಸಾಕ್ಷಿಯಾಗಲು ಅವಕಾಶ ನೀಡುತ್ತದೆ" ಎಂದಿದ್ದಾರೆ ಐರ್ಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ.

ಐರ್ಲೆಂಡ್ ವಿರುದ್ಧದ ಈ ಪ್ರವಾಸಕ್ಕೆ ಟೀಮ್ ಇಂಡಿಯಾ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಈ ಪ್ರವಾಸದಲ್ಲಿ ಮತ್ತಷ್ಟು ಯುವ ಆಟಗಾರರಿಗೆ ಅವಕಾಶ ದೊರೆಯುವ ನಿರೀಕ್ಷೆಯಿದ್ದು ಮುಂದಿನ ವರ್ಷದ ಟಿ20 ವಿಶ್ವಕಪ್ ಟೂರ್ನಿಗೆ ಸಂಬಂಧಿಸಿದಂತೆ ಕೆಲ ಪ್ರಯೋಗಗಳನ್ನು ನಡೆಸಲು ಅತ್ಯುತ್ತಮ ಅವಕಾಶವಾಗಲಿದೆ.

Story first published: Tuesday, June 27, 2023, 23:13 [IST]
Other articles published on Jun 27, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+