ಕೇಪ್ ಟೌನ್, ಡಿಸೆಂಬರ್ 30 : ಭಾರತದ ವಿರುದ್ಧ ಜನವರಿ 5ರಿಂದ ಆರಂಭಗೊಳ್ಳಲಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ನಾಯಕ ಫಾಪ್ ಡು ಪ್ಲೆಸಿಸ್ ಹಾಗೂ ಅನುಭವಿ ವೇಗಿ ಡೇಲ್ ಸ್ಟೇನ್ ತಂಡಕ್ಕೆ ಮರಳಿದ್ದಾರೆ. ಇನ್ನು ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ವೇಗಿ ಕ್ರಿಸ್ ಮೋರಿಸ್ 15ರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾಗೆ ಆನೆ ಬಲಬಂತಾಗಿದೆ.

ದಕ್ಷಿಣ ಆಫ್ರಿಕಾ ಹಾಗೂ ಭಾರತ 3 ಟೆಸ್ಟ್, 6 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿವೆ. ಜನವರಿ 5ರಿಂದ ಕೇಪ್ ಟೌನ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಒಟ್ಟು ಮೂರು ಟೆಸ್ಟ್ ಪಂದ್ಯಗಳ ಸರಣಿ ಫೆಬ್ರವರಿ 24ಕ್ಕೆ ಮುಕ್ತಾಯವಾಗಲಿದೆ.
ಜಿಂಬಾಬ್ವೆ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಪಂದ್ಯವನ್ನು ಎರಡು ದಿನಗಳಲ್ಲಿಯೇ ಗೆದ್ದುಕೊಂಡು ಜಯದ ಲಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಮಣಿಸಲು ಆತ್ಮವಿಶ್ವಾದಲ್ಲಿದೆ.
ತಂಡ ಇಂತಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ಹಾಶಿಮ್ ಆಮ್ಲಾ, ತೆಂಬಾ ಬಬುವುಮಾ, ಕ್ವಿಂಟನ್ ಡಿ ಕಾಕ್, ತೆವುನಿಸ್ ಡೆ ಬ್ರುಯನ್, ಎ.ಬಿ ಡಿವಿಲಿಯರ್ಸ್, ಡೀನ್ ಎಲ್ಗರ್, ಕೇಶವ್ ಮಹಾರಾಜ್, ಮಾರ್ಕ್‌ರಮ್, ಮೋರ್ನೆ ಮಾರ್ಕೆಲ್, ಕ್ರಿಸ್ ಮೋರಿಸ್, ಅಂಡಿಲ್ಲೆ ಪೆಹುಲ್ಕ್ ವಾವೊ, ವೆರ್ನಾನ್ ಫಿಲಾಂಡರ್, ಕಗಿಸೊ ರಬಾಡ, ಡೇಲ್ ಸ್ಟೇಯ್ನ್.