For Quick Alerts
ALLOW NOTIFICATIONS  
For Daily Alerts
 

ಸಿಡ್ನಿಯಲ್ಲಿ ಸಿಡಿದ ವಿರಾಟ್‌, ರೋಹಿತ್‌ ಜೋಡಿ: ಕ್ಲೀನ್‌ ಸ್ವೀಪ್‌ನಿಂದ ಪಾರಾದ ಟೀಮ್ ಇಂಡಿಯಾ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯವನ್ನು ಗಿಲ್‌ ಪಡೆ 9 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಈ ಮೊದಲು ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದ್ದು, ಮೂರನೇ ಪಂದ್ಯವನ್ನು ಗೆದ್ದು ಪುಟಿದೇಳುವ ಸೂಚನೆ ನೀಡಿದೆ. ಆಸ್ಟ್ರೇಲಿಯಾಕ್ಕೆ ಇದೇ ಕೊನೆಯ ಬಾರಿಗೆ ಕಾಣಿಸಿಕೊಳ್ಳಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳ ದಂಡೇ ಮೈದಾನದತ್ತ ಆಗಮಿಸಿತ್ತು. ಅಭಿಮಾನಿಗಳಿಗೆ ನಿರಾಸೆ ಮಾಡದ ರೋಹಿತ್‌ ಹಾಗೂ ವಿರಾಟ್ ಜೋಡಿ ಕ್ಲಾಸ್‌ ಬ್ಯಾಟಿಂಗ್ ಪ್ರದರ್ಶನ ನೀಡಿ, ಕ್ಲೀನ್‌ ಸ್ವೀಪ್‌ ಭೀತಿಯಿಂದ ಪಾರು ಮಾಡಿತು.

ಆಸ್ಟ್ರೇಲಿಯಾ ನೀಡಿದ್ದ 237 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿತ್ತು. ನಾಯಕ ಶುಭಮನ್‌ ಗಿಲ್‌ ಜೊತೆಗೆ ಇನಿಂಗ್ಸ್ ಆರಂಭಿಸಿದ ಮಾಜಿ ನಾಯಕ ರೋಹಿತ್ ಶರ್ಮಾ, ಆರಂಭದಿಂದಲೂ ಎದುರಾಳಿ ಬೌಲರ್‌ಗಳನ್ನು ಕಾಡುತ್ತಾ ಸಾಗಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆಸೀಸ್ ಆರಂಭದಲ್ಲಿ ವಿಫಲವಾಯಿತು. ಈ ಜೋಡಿ 10.2 ಓವರ್‌ಗಳಲ್ಲಿ 69 ರನ್‌ ಸೇರಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಜೋಶ್‌ ಹ್ಯಾಜಲ್‌ವುಡ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ ಅಲೆಕ್ಸ್ ಕ್ಯಾರಿಗೆ ಕ್ಯಾಚ್‌ ನೀಡಿದರು.

India Triumphs in 3rd ODI by 9 Wickets to Avoid Clean Sweep Rohit and Kohli Shine

69 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದಾಗ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದರು. ಇವರು ಮೈದಾನಕ್ಕೆ ಇಳಿಯುತ್ತಿದ್ದಾಗಲೇ ಶನಿವಾರ ಬಿಗ್ ಇನಿಂಗ್ಸ್‌ ಬರುವ ಸೂಚನೆ ಸಿಕ್ಕಿತ್ತು. ಅದರಂತೆ ವಿರಾಟ್‌ ಹಿಂದಿನ ಪಂದ್ಯದಲ್ಲಿ ತಾವು ಮಾಡಿದ ತಪ್ಪುಗಳನ್ನು ಮೆಟ್ಟಿ ನಿಂತು ರನ್‌ಗಳನ್ನು ಕಲೆ ಹಾಕಿದರು. ಮಾಜಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ವಿರಾಟ್‌ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸುವಲ್ಲಿ ಸಫಲವಾಯಿತು.

ಸ್ಟಾರ್‌ಗಳ ಅಬ್ಬರ

ತಮ್ಮ ಅನುಭವವನ್ನೇ ಬಂಡವಾಳ ಮಾಡಿಕೊಂಡು ಆಡಿದ ವಿರಾಟ್ ಹಾಗೂ ರೋಹಿತ್ ಜೋಡಿ ಆರ್ಭಟಿಸಿತು. ಈ ಜೋಡಿ ಎಡನೇ ವಿಕೆಟ್‌ಗೆ 170 ಎಸೆತಗಳಲ್ಲಿ ಅಜೇಯ 168 ರನ್‌ ಜೊತೆಯಾಟವನ್ನು ನೀಡಿತು. ರೋಹಿತ್ ಶರ್ಮಾ 125 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 121 ರನ್‌ ಸಿಡಿಸಿದರು. ಇದು ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ವೃತ್ತಿ ಜೀವನದ 50ನೇ ಶತಕವಾಗಿದೆ. ಇನ್ನು ವಿರಾಟ್ ಕೊಹ್ಲಿ 81 ಎಸೆತಗಳಲ್ಲಿ ಅಜೇಯ 74 ರನ್‌ ಸಿಡಿಸಿದರು. ಈ ವೇಳೆ 7 ಬೌಂಡರಿ ಸೇರಿವೆ. ಈ ಮೂಲಕ ವಿರಾಟ್ ಸಹ ಹಲವು ದಾಖಲೆ ಬರೆದರು. ಅಂತಿಮವಾಗಿ ಭಾರತ 38.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 237 ರನ್‌ ಸೇರಿಸಿ ಜಯ ಸಾಧಿಸಿತು.

ಟಾಸ್‌ ಗೆದ್ದು ಬ್ಯಾಟ್ ಮಾಡಿದ ಆಸೀಸ್‌

ಆಸ್ಟ್ರೇಲಿಯಾದ ಪರ ನಾಯಕ ಮಿಚೆಲ್‌ ಮಾರ್ಷ್ (41) ಹಾಗೂ ಟ್ರಾವಿಸ್‌ ಹೆಡ್‌ (29) ಜೋಡಿ 61 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಮ್ಯಾಥ್ಯೂ ಶಾರ್ಟ್‌ 30, ಅಲೆಕ್ಸ್‌ ಕ್ಯಾರಿ 24, ಕೂಪರ್‌ 23 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಮ್ಯಾಟ್ ರೆನ್ಶಾ 2 ಬೌಂಡರಿ ನೆರವಿನಿಂದ 56 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಆಸೀಸ್‌ 46.4 ಓವರ್‌ಗಳಲ್ಲಿ 236 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಹರ್ಷಿತ್ ರಾಣಾ 4, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಪಡೆದರು.

Story first published: Saturday, October 25, 2025, 16:13 [IST]
Other articles published on Oct 25, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+