ಇಂಗ್ಲೆಂಡ್ ವಿರುದ್ದದ ಪ್ರವಾಸಕ್ಕೆ ಭಾರತ ಅಂಡರ್ 19 ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಸದ್ಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ಆಯುಷ ಮಾತ್ರೆ ಅವರಿಗೆ ಸ್ಥಾನ ನೀಡಲಾಗಿದ್ದು, ಇವರಿಗೆ ನಾಯಕತ್ವ ನೀಡಿದೆ. ಇನ್ನು ಐಪಿಎಲ್‌ನಲ್ಲಿ ಶತಕ ಬಾರಿಸಿ ಅಬ್ಬರಿಸಿರುವ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸುರ್ಯವಂಶಿ ಅವರಿಗೂ ಅಂಡರ್ 19 ತಂಡದಲ್ಲಿ ಸ್ಥಾನ ನೀಡಲಾಗಿದೆ.
ಬಿಸಿಸಿಐ ಗುರುವಾರ ಅಂಡರ್ 19 ತಂಡವನ್ನು ಪ್ರಕಟ ಮಾಡಿದ್ದು, ಈ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಅವಕಾಶವನ್ನು ಟೀಮ್ ಇಂಡಿಯಾದ ಕಿರಿಯರ ತಂಡದಲ್ಲಿ ಅವಕಾಶ ನೀಡಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಅವಕಾಶವನ್ನು ಪಡೆದ ಆಯುಷ್ ಮಾತ್ರೆ ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ಇನ್ನು ಇವರು ಈಗಾಗಲೇ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 6 ಪಂದ್ಯಗಳಲ್ಲಿ 34ರ ಸರಾಸರಿಯಲ್ಲಿ 206 ರನ್ ಸಿಡಿಸಿದ್ದಾರೆ. ಈ ವೇಳೆ ಆರ್‌ಸಿಬಿ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿ 94 ರನ್ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ ಇವರು ರಣಜಿ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 8 ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ 33ರ ಸರಾಸರಿಯಲ್ಲಿ 471 ರನ್ ಸಿಡಿಸಿದ್ದಾರೆ. 2 ಶತಕ, 1 ಅರ್ಧಶತಕ ಸಿಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಸಹ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿದ್ದಾರೆ. ಇವರು ಐಪಿಎಲ್‌ನಲ್ಲಿ 252 ರನ್ ಸಿಡಿಸಿದ್ದಾರೆ. ಇವರ ಸ್ಥಿರ ಪ್ರದರ್ಶನದ ಫಲಾವಗಿ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮುಲ್ಯರಾಜ್‌ಸಿಂಗ್ ಚಾವ್ಡಾ, ರಾಹುಲ್ ಕುಮಾರ್, ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್ ಎಸ್ ಅಂಬರೀಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಪಟೇಲ್, ಹೆನಿಲ್ ರಾವ್ ಪಟೇಲ್, ಯುಧಾಜಿವ್ ಪಟೇಲ್ ಆದಿತ್ಯ ರಾಣಾ, ಅನ್ಮೋಲ್ಜಿತ್ ಸಿಂಗ್.

ಮೀಸಲು ಆಟಗಾರರು- ನಮನ್ ಪುಷ್ಪಕ್, ಡಿ ದೀಪೇಶ್, ವೇದಾಂತ್ ತ್ರಿವೇದಿ, ವಿಕಲ್ಪ್ ತಿವಾರಿ, ಅಲಂಕೃತ್ ರಾಪೋಲ್ (ವಿಕೆಟ್ ಕೀಪರ್).
ಜೂನ್ 24ರಂದು ಅಭ್ಯಾಸ ಪಂದ್ಯ
ಜೂ. 27, ಮೊದಲ ಏಕದಿನ ಪಂದ್ಯ
ಜೂ. 30, ಎರಡನೇ ಏಕದಿನ ಪಂದ್ಯ
ಜು.2, ಮೂರನೇ ಏಕದಿನ ಪಂದ್ಯ
ಜು.5, ನಾಲ್ಕನೇ ಏಕದಿನ ಪಂದ್ಯ
ಜು.7, ಐದನೇ ಏಕದಿನ ಪಂದ್ಯ
ಜು. 12 ರಿಂದ 15, ಮೊದಲ ನಾಲ್ಕು ದಿನಗಳ ಪಂದ್ಯ
ಜು. 20 ರಿಂದ 23, ಎರಡನೇ ನಾಲ್ಕು ದಿನಗಳ ಪಂದ್ಯ