IND U-19 vs SA U-19: ವೈಭವ್ ಸೂರ್ಯವಂಶಿ 10 ಸಿಕ್ಸರ್; ಭಾರತಕ್ಕೆ 8 ವಿಕೆಟ್ ಜಯ
ಬೆನೋನಿ: ಭರವಸೆಯ ಬೌಲರ್ ಕಿಶನ್ ಸಿಂಗ್ (46ಕ್ಕೆ 4) ಬಿಗುವಿನ ದಾಳಿ ಹಾಗೂ ನಾಯಕ ವೈಭವ್ ಸೂರ್ಯವಂಶಿ ಬಾರಿಸಿದ ಅರ್ಧಶತಕದ ಬಲದಿಂದ ಅಂಡರ್ 19 ಭಾರತ ತಂಡ 2ನೇ ಏಕದಿನ ಪಂದ್ಯದಲ್ಲಿ ಅಂಡರ್ 19 ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‌ಗಳಿಂದ ಮಣಿಸಿತು.
ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಅಂಡರ್ 19 ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡಿತು. ಆತಿಥೇಯ ತಂಡದ ಟಾಪ್ ಆರ್ಡರ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕರಾದ ಜೋರಿಚ್ ವ್ಯಾನ್ ಶಾಲ್ಕ್ವಿಕ್ (10), ಅದ್ನಾನ್ ಲಗಾಡಿಯನ್ (25), ಮುಹಮ್ಮದ್ ಬುಲ್ಬುಲಿಯಾ (14), ಅರ್ಮಾನ್ ಮನಕ್ (16) ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ವೇಳೆ ತಂಡ 96 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 5ನೇ ವಿಕೆಟ್‌ಗೆ ಜೇಸನ್ ರೋಲ್ಸ್, ಡೇನಿಯಲ್ ಬೋಸ್ಮನ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ 5ನೇ ವಿಕೆಟ್‌ಗೆ 97 ರನ್ ಸೇರಿಸಿತು. ಈ ವೇಳೆ ಡೇನಿಯಲ್ ಬೋಸ್ಮನ್ 31 ರನ್ ಸೇರಿಸಿದರು.

ಭರವಸೆಯ ಆಟಗಾರ ಜೇಸನ್ ರೋಲ್ಸ್ ಸೊಗಸಾದ ಆಟದ ಪ್ರದರ್ಶನವನ್ನು ನೀಡಿದರು. ಇವರು 113 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 114 ರನ್ ಸಿಡಿಸಿದರು. ಅಂತಿಮವಾಗಿ 49.3 ಓವರ್‌ಗಳಲ್ಲಿ 245 ರನ್ ಸೇರಿಸಿ ಆಲೌಟ್ ಆಯಿತು. ಭಾರತದ ಪರ ಕಿಶನ್ ಸಿಂಗ್ 8.3 ಓವರ್‌ಗಳಲ್ಲಿ 46 ರನ್‌ಗೆ 4 ವಿಕೆಟ್ ಪಡೆದು ಬೀಗಿದರು. ಆರ್ ಎಸ್ ಅಂಬರೀಷ್ 2 ವಿಕೆಟ್ ಉರುಳಿಸಿದರು.
ವೈಭವ್ ಸೂರ್ಯವಂಶಿ ಭರ್ಜರಿ ಅರ್ಧಶತಕ
ಗುರಿಯನ್ನು ಬೆನ್ನಟ್ಟಿದ ಆರನ್ ಜಾರ್ಜ್ ಹಾಗೂ ನಾಯಕ ವೈಭವ್ ಸೂರ್ಯವಂಶಿ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಭಾರತಕ್ಕೆ ಮೊದಲ ವಿಕೆಟ್‌ಗೆ 6.1 ಓವರ್‌ಗಳಲ್ಲಿ 67 ರನ್ ಸೇರಿಸಿತು. ಈ ವೇಳೆ ಆರನ್ ಜಾರ್ಜ್ 20 ರನ್ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ನಾಯಕ ಹಾಗೂ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ತಮ್ಮ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದರು. ಇವರು 24 ಎಸೆತಗಳಲ್ಲಿ 1 ಬೌಂಡರಿ, 10 ಸಿಕ್ಸರ್ ಸಹಾಯದಿಂದ 68 ರನ್ ಸಿಡಿಸಿ ಔಟ್ ಆದರು. ವೇದಾಂತ್ ತ್ರಿವೇದಿ ಹಾಗೂ ಅಭಿಜ್ಞಾನ್ ಕುಂದು ಜೋಡಿ ಮೂರನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಪರಿಣಾಮ ಡಕ್ ವರ್ತ್ ಲೂಯಿಸ್ ನಿಯಮದಂತೆ ಭಾರತಕ್ಕೆ 27 ಓವರ್‌ಗಳಲ್ಲಿ 174 ರನ್ ಗುರಿ ನೀಡಲಾಯಿತು. ಈ ಗುರಿಯನ್ನು ಭಾರತ ತಂಡ 23.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಮುಟ್ಟಿ ಬೀಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications