U-19 women T20 World Cup: ಸೆಮಿಫೈನಲ್‌ನಲ್ಲಿ ಭಾರತ, ಇಂಗ್ಲೆಂಡ್ ಕಾದಾಟ
ಪುಣೆಯಲ್ಲಿ ಇಂದು ಭಾರತ ಹಾಗೂ ಇಂಗ್ಲೆಂಡ್ ಪುರುಷರ ತಂಡಗಳ ನಡುವೆ ನಾಲ್ಕನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾ ಮಹಿಳಾ ತಂಡ ಅಂಡರ್ 19 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮಹಿಳಾ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಅಮೋಘ ಪ್ರದರ್ಶನವನ್ನು ನೀಡಿರುವ ಟೀಮ್ ಇಂಡಿಯಾ ಪ್ರಶಸ್ತಿಯ ಹುಡುಕಾಟದಲ್ಲಿದೆ. ಇಂಗ್ಲೆಂಡ್ ಸರ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಫೈನಲ್‌ಗೆ ಏರುವ ಕನಸು ಕಾಣುತ್ತಿದೆ.
ಭಾರತ ಸೂಪರ್ ಸಿಕ್ಸ್ ಹಂತದಲ್ಲಿ "ಎ" ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಭಾರತ ಈ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಇಂಗ್ಲೆಂಡ್ "ಬಿ" ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆಡಿದ 4 ಪಂದ್ಯಗಳಲ್ಲಿ 2 ಜಯ ದಾಖಲಿಸಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು, ರೋಚಕತೆ ಮನೆ ಮಾಡಿದೆ. ಈಗಾಗಲೇ ಏಷ್ಯಾ ಕಪ್ ಎತ್ತಿರುವ ಅಂಡರ್ 19 ತಂಡ ಮತ್ತೊಂದು ಕಪ್ ಗೆಲುವಿನ ಕನಸು ಹೊಂದಿದೆ.

ಸಂಘಟಿತ ಆಟವೇ ಬಲ
ಟೀಮ್ ಇಂಡಿಯಾದ ಪರ ಗಂಗಾಡಿ ತ್ರಿಷಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಟೂರ್ನಿಯಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 76ರ ಸರಾಸರಿಯಲ್ಲಿ 230 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ. ಇನ್ನು ಇನ್ನೋಬ್ಬ ಆಟಗಾರ್ತಿ ಜಿ.ಕಮಲಿನಿ ಅವರ ಮೇಲೂ ಎಲ್ಲರ ಚಿತ್ತ ನೆಟ್ಟಿದೆ. ಇವರು ಸಹ ತಂಡದ ಬ್ಯಾಟಿಂಗ್ ವಿಭಾಗಕ್ಕೆ ನೆರವಾಗಬಲ್ಲ ಪ್ಲೇಯರ್. ಸನಿಕಾ ಚಲ್ಕೆ ಸಹ ಸ್ಥಿರವಾಗಿ ರನ್ ಕಲೆ ಹಾಕುತ್ತಿದ್ದು ಭರವಸೆ ಮೂಡಿಸಿದ್ದಾರೆ.
ಟೀಮ್ ಇಂಡಿಯಾದ ಬೌಲಿಂಗ್ ವಿಭಾಗವೂ ಬಲಾಢ್ಯವಾಗಿದೆ. ವೈಷ್ಣವಿ ಶರ್ಮಾ 4 ಪಂದ್ಯಗಳನ್ನು ಆಡಿ 12 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ವೈಷ್ಣವಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್. ಇನ್ನು ಇದೇ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಯುಷಿ ಶುಕ್ಲಾ ಸಹ 10 ವಿಕೆಟ್ ಕಬಳಿಸಿದ್ದು, ಭರವಸೆ ಮೂಡಿಸಿದ್ದಾರೆ. ಉಳಿದ ಬೌಲರ್‌ಗಳು ತಮ್ಮ ಶಿಸ್ತು ಬದ್ಧ ದಾಳಿಯನ್ನು ನಡೆಸಿದರೆ, ಗೆಲುವು ಸಾಧ್ಯ.
ಡೇವಿನಾ ಪೆರಿನ್ ಒತ್ತಡ
ಇಂಗ್ಲೆಂಡ್ ತಂಡದ ಭರವಸೆಯ ಆಟಗಾರ್ತಿ ಡೇವಿನಾ ಪೆರಿನ್ ಸಹ ಟೂರ್ನಿಯಲ್ಲಿ ಸ್ಥಿರವಾಗಿ ರನ್ ಕಲೆ ಹಾಕುತ್ತಿದ್ದಾರೆ. ಇವರಿಗೆ ಉಳಿದ ಬ್ಯಾಟರ್‌ಗಳು ಉತ್ತಮ ಸಾಥ್ ನೀಡಿದರೆ ದೊಡ್ಡ ಮೊತ್ತ ಕಲೆ ಹಾಕುವ ಕನಸು ಕಾಣಬಹುದು. ಇಂಗ್ಲೆಂಡ್ ತಂಡದಲ್ಲೂ ಭರವಸೆಯ ಯುವ ಬೌಲರ್‌ಗಳಿದ್ದು ಯಾರು ಮಹತ್ವದ ಪಂದ್ಯದಲ್ಲಿ ಮಿಂಚುತ್ತಾರೆ ಎಂಬ ಬಗ್ಗೆ ಕುತೂಹಲ ಹೆಚ್ಚಿದೆ.
ಟೀಮ್ ಇಂಡಿಯಾ ಈ ಪಂದ್ಯವನ್ನು ಗೆದ್ದು ತನ್ನ ಆತ್ಮವಿಶ್ವಾಸವನ್ನು ಇಮ್ಮಡಿಮಾಡಿಕೊಂಡು, ಫೈನಲ್ ಪಂದ್ಯಕ್ಕೆ ಪ್ರವೇಶಿಸುವ ವಿಶ್ವಾಸದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications