ಭಾರತ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ ಹಿರಿಯ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಶುಭಮನ್ ಗಿಲ್ ಮುಂದಾಳತ್ವದ ತಂಡ ಇಂಗ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಇದೇ 20 ರಂದು ಆಡಲಿದೆ. ಇದೇ ವೇಳೆ ಭಾರತ ಕಿರಿಯರ ತಂಡ ಸಹ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಆಯುಷ್ ಮಾತ್ರೆ ಮುಂದಾಳತ್ವದ ತಂಡ ಜೂನ್ 24 ರಂದು ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ ಫೈಟ್ ನಡೆಸಲಿದೆ. ಇದೇ ವೇಳೆ ತಂಡದ ಭಾಗವಾಗಿದ್ದ ಇಬ್ಬರು ಆಟಗಾರರು ಗಾಯಕ್ಕೆ ತುತ್ತಾಗಿದ್ದರಿಂದ ಅವರಿಗೆ ಬಿಸಿಸಿಐ ಬದಲಿ ಆಟಗಾರರನ್ನು ಘೋಷಣೆ ಮಾಡಿದೆ.
ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದ ಆದಿತ್ಯ ರಾಣಾ ಮತ್ತು ಖಿಲನ್ ಪಟೇಲ್ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಬಿಸಿಸಿಐ ಇವರಿಬ್ಬರಿಗೂ ಬದಲಿ ಆಟಗಾರರನ್ನು ಘೋಷಣೆ ಮಾಡಿದೆ. ಜೂನಿಯರ್ ಕ್ರಿಕೆಟ್ ಸಮಿತಿಯು ಮುಂಬರುವ ಭಾರತ ಅಂಡರ್ -19 ಇಂಗ್ಲೆಂಡ್ ಪ್ರವಾಸಕ್ಕಾಗಿ ಆದಿತ್ಯ ರಾಣಾ ಮತ್ತು ಖಿಲನ್ ಪಟೇಲ್ ಬದಲಿಗೆ ಡಿ ದೀಪೇಶ್ ಮತ್ತು ನಮನ್ ಪುಷ್ಪಕ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಇಬ್ಬರೂ ಆಟಗಾರರನ್ನು ಬಿಸಿಸಿಐ ಈ ಮೊದಲೇ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಇಟ್ಟಿತ್ತು.

ಇಬ್ಬರು ಯುವ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಆದಿತ್ಯ ಬೆನ್ನಿನ ಸಮಸ್ಯೆಯನ್ನು ಎದುರಿಸಿದರೆ, ಖಿಲನ್ ಅವರ ಬಲಗಾಲಿನಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ಬಿಸಿಸಿಐ ಇಬ್ಬರು ಬದಲಿ ಆಟಗಾರರನ್ನು ಘೋಷಣೆ ಮಾಡಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ಅಂಡರ್ 19 ತಂಡವನ್ನು ಬಿಸಿಸಿಐ ಮೇ 22 ರಂದು ಘೋಷಿಸಿತ್ತು. ಐಪಿಎಲ್ ಹಾಗೂ ದೇಶೀಯ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ ಆಯುಷ್ ಮಾತ್ರೆಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಇನ್ನು ಐಪಿಎಲ್‌ನಲ್ಲಿ ವೇಗದ ಶತಕ ಬಾರಿಸಿ ಸಂಚಲನ ಮೂಡಿಸಿದ್ದ ವೈಭವ್ ಸುರ್ಯವಂಶಿ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ತಂಡದಲ್ಲಿ ಭಾರೀ ಸಂಚಲನವನ್ನು ಮೂಡಿಸಿರುವ ಪ್ರಣವ್ ರಾಘವೇಂದ್ರ ಸೇರಿದ್ದಾರೆ. ಇವರು ಬೆಂಗಳೂರಿನಲ್ಲಿರುವ ಎನ್‌ಸಿಎ ಶಿಭಿರದಲ್ಲಿ ಗಂಟೆಗೆ 147 ಕಿಲೋ ಮೀಟರ್‌ನಲ್ಲಿ ಬೌಲಿಂಗ್ ಮಾಡಿ ಚರ್ಚೆಗೆ ಗ್ರಾಸವಾಗಿದ್ದರು. ಇಂಗ್ಲೆಂಡ್‌ನ ಮಾಜಿ ತಾರೆ ಆಂಡ್ರ್ಯೂ ಫ್ಲಿಂಟಾಫ್ ಅವರ ಮಗ ರಾಕಿ ಫ್ಲಿಂಟಾಫ್ ಸೇರಿದ್ದಾರೆ.
ಅಂಡರ್ 19 ಭಾರತ ತಂಡ: ಆಯುಷ್ ಮ್ಹಾತ್ರೆ (ನಾಯಕ), ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲ್ಯರಾಜ್‌ಸಿಂಗ್ ಚಾವ್ಡಾ, ರಾಹುಲ್ ಕುಮಾರ್, ಅಭಿಗ್ಯಾನ್ ಕುಂದು (ಉಪನಾಯಕ ಮತ್ತು ವಿಕೆಟ್ ಕೀಪರ್), ಹರ್ವಂಶ್ ಸಿಂಗ್ (ವಿಕೆಟ್ ಕೀಪರ್), ಆರ್‌ಎಸ್ ಆಂಬ್ರಿಸ್, ಕಾನಿಷ್ಕ್ ಚೌಹಾನ್, ಹೆನಿಲ್ ಪಟೇಲ್, ಯುಧಾಜಿತ್ ರಾಘವ್, ಪ್ರಣಜಿತ್ ಗುಹಾಮ್, ಪ್ರಣಜಿತ್ ಎನ್‌ಹ್ಯಾಮ್, ಯುಧಾಜಿತ್ ಎನ್. ಡಿ ದೀಪೇಶ್, ನಮನ್ ಪುಷ್ಪಕ್.