ಅಂಡರ್ 19 ವಿಶ್ವಕಪ್: ನಾಯಕ ಯಶ್ ಧುಲ್ ಸೇರಿ 6 ಭಾರತೀಯ ಆಟಗಾರರಿಗೆ ತಗುಲಿದ ಕೊವಿಡ್

ಕಳೆದೆರಡು ವರ್ಷಗಳಲ್ಲಿ ಹಲವಾರು ಕ್ರಿಕೆಟ್ ಟೂರ್ನಿಗಳಿಗೆ ಅಡ್ಡಿಯನ್ನುಂಟುಮಾಡಿದ್ದ ಕೊರೊನಾ ಸೋಂಕು ಈ ವರ್ಷವೂ ಸಹ ತನ್ನ ಅಡ್ಡಿ ಪಡಿಸುವ ಕಾರ್ಯವನ್ನು ಮುಂದುವರೆಸಿದಂತಿದೆ.
ಸದ್ಯ ಕೆರಿಬಿಯನ್ ನಾಡಿನಲ್ಲಿ ಅಂಡರ್ 19 ಪುರುಷರ ವಿಶ್ವಕಪ್ ಟೂರ್ನಿ 2022ರ ಆವೃತ್ತಿ ನಡೆಯುತ್ತಿದ್ದು, ಟೀಮ್ ಇಂಡಿಯಾ ಅಂಡರ್ 19ನ 6 ಆಟಗಾರರಿಗೆ ಕೊರೊನಾ ಸೋಂಕು ತಗುಲಿದೆ ಎಂದು ವರದಿಯೊಂದು ತಿಳಿಸಿದೆ. ಟೂರ್ನಿಯಲ್ಲಿನ ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅಂಡರ್ 19 ತಂಡದ ವಿರುದ್ಧ ಸೆಣಸಾಡಿದ ಭಾರತ ಅಂಡರ್ 19 ತಂಡ ಗೆಲುವನ್ನು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.
ಹೀಗೆ ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿನ ಮೊದಲನೇ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಭಾರತ ಅಂಡರ್ 19 ತಂಡ ಇಂದು ( ಜನವರಿ 19 ) ಐರ್ಲೆಂಡ್ ಅಂಡರ್ 19 ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದೆ. ಆದರೆ ಈ ಪಂದ್ಯದಲ್ಲಿ ಕಣಕ್ಕಿಳಿದಿರುವ ಟೀಂ ಇಂಡಿಯಾಗೂ, ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾಗೂ ಸಾಕಷ್ಟು ವ್ಯತ್ಯಾಸಗಳಿದ್ದು ತಂಡದ ನಾಯಕ ಮತ್ತು ಉಪನಾಯಕರೇ ತಂಡದಿಂದ ಹೊರಗುಳಿದಿದ್ದಾರೆ.
ಭಾರತ ಅಂಡರ್ 19 ಕ್ರಿಕೆಟ್ ತಂಡದ ನಾಯಕ ಯಶ್ ಧುಲ್ ಹಾಗೂ ಉಪನಾಯಕ ಎಸ್ ಕೆ ರಶೀದ್ ಸೇರಿದಂತೆ ತಂಡದ ಒಟ್ಟು 6 ಆಟಗಾರರಿಗೆ ಕೊರೊನಾ ಸೋಂಕು ತಗುಲಿದ್ದು, ಐರ್ಲೆಂಡ್ ವಿರುದ್ಧದ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗೆ ತಂಡದ ಪ್ರಮುಖ ಆಟಗಾರರೇ ಸೋಂಕಿಗೆ ಒಳಗಾದ ಕಾರಣ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಉಳಿದ 11 ಆಟಗಾರರನ್ನು ಬಳಸಿ ತಂಡ ರಚಿಸಿ ಕಣಕ್ಕಿಳಿದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications