For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಕಿರಿಯರ ತಂಡ

India under 19 team won the odi series against srilanka

ಮೊರಟುವಾ, ಆಗಸ್ಟ್ 10: ಶ್ರೀಲಂಕಾದಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಕಿರಿಯರ ತಂಡ ಕೈವಶ ಮಾಡಿಕೊಂಡಿದೆ.

ಎರಡು ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದ್ದ ಭಾರತದ ಅಂಡರ್ 19 ತಂಡದ ಪಡೆ, ಏಕದಿನ ಸರಣಿಯಲ್ಲಿಯೂ ಪಾರಮ್ಯ ಮೆರೆದು 3-2 ಅಂತರದಿಂದ ಜಯಿಸಿತು.

ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಕಿರಿಯರ ತಂಡ, ಉಳಿದ ಮೂರೂ ಪಂದ್ಯಗಳಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿತು. ತಂಡಕ್ಕೆ ನಿಶಾನ್ ಮಧುಷ್ಕಾ ಮತ್ತು ನುವನಿದು ಫೆರ್ನಾಂಡೊ ಆಸರೆಯಾದರು. ಈ ಇಬ್ಬರನ್ನು ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಗಮನಾರ್ಹ ಪ್ರದರ್ಶನ ಕಂಡುಬರಲಿಲ್ಲ.

213 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಭಾರತ, 42.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಜೇಯ ಶತಕ ಬಾರಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಅಂಡರ್ 19: 212/9 (50) ನಿಶಾನ್ ಮಧುಷ್ಕಾ 95, ನುವನಿದು ಫೆರ್ನಾಂಡೊ 56, ಪಸಿಂದು ಸೂರಿಯಬಂಡಾರ 20, ಮೋಹಿತ್ ಜಂಗ್ರಾ 30/2, ಸಮೀರ್ ಚೌಧರಿ 20/1, ಅಜಯ್ ದೇವ್ ಗೌಡ್ 29/1

ಭಾರತ ಅಂಡರ್ 19: 214/2 (42.2) ಯಶಸ್ವಿ ಜೈಸ್ವಾಲ್ 114*, ದೇವದತ್ ಪಡಿಕ್ಕಲ್ 38, ಪವನ್ ಶಾ 36, ಲಕ್ಷಿತ ಮನಸಿಂಘೆ 37/1, ಅವಿಷ್ಕಾ ಲಕ್ಷನ್ 38/1.

ಫಲಿತಾಂಶ: ಭಾರತಕ್ಕೆ ಎಂಟು ವಿಕೆಟ್‌ಗಳ ಜಯ ಮತ್ತು 3-2ರಿಂದ ಏಕದಿನ ಸರಣಿ

Story first published: Saturday, August 11, 2018, 10:37 [IST]
Other articles published on Aug 11, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+