ಟಿ20 ವಿಶ್ವಕಪ್ ಜೆರ್ಸಿ ಅನಾವರಣ: ವಿಶೇಷತೆಗಳು ಏನು?
ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಭಾರತದಲ್ಲಿ ಈ ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ. ಈ ಟೂರ್ನಿಯ ವೇಳಾಪಟ್ಟಿಯನ್ನು ಐಸಿಸಿ ಈ ಮೊದಲೇ ಪ್ರಕಟಿಸಿದೆ. ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಏಕದಿನ ಪಂದ್ಯದ ವೇಳೆ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಹಾಲಿ ಚಾಂಪಿಯನ್ ಟೀಮ್ ಇಂಡಿಯಾದ ಜೆರ್ಸಿಯನ್ನು ಬಿಸಿಸಿಐ ಭಾರತದ ಬ್ಯಾಟಿಂಗ್ ಬಳಿಕ ಅನಾವರಣ ಗೊಳಿಸಲಾಯಿತು.
2026ರ ಟಿ20 ವಿಶ್ವಕಪ್‌ಗೆ ತಯಾರಾದ ಜೆರ್ಸಿ ಕಡು ನೀಲಿ ಪಟ್ಟಿಗಳಿಂದ ಕಂಗೊಳಿಸಿದೆ. ಈ ವೇಳೆ ಕಾಲರ್‌ನಲ್ಲಿ ಭಾರತದ ತ್ರಿವರ್ಣ ಬಣ್ಣ ಕಾಣಿಸಿಕೊಂಡಿದೆ. ಭುಜ ಹಾಗೂ ತೋಳಿನ ಭಾಗದಲ್ಲಿ ಕೇಸರಿ ಬಣ್ಣ ಕಾಣುತ್ತದೆ. ಮುಂಭಾಗದಲ್ಲಿ ತಿಳಿ ಮತ್ತು ಗಾಢ ನೀಲಿ ಪಟ್ಟೆಗಳು ಸ್ಪಷ್ಟವಾಗಿ ಕಂಡುಬರುತ್ತವೆ.

ಜೆರ್ಸಿಯ ಎದೆಯ ಭಾಗದಲ್ಲಿ ಬಿಸಿಸಿಐ ಲಾಂಛನವು ಇದೆ. ಈ ಲಾಂಛನದ ಮೇಲೆ ಎರಡು ಸ್ಟಾರ್‌ಗಳು ಇವೆ. ಇದು ಭಾರತ 2 ಬಾರಿ ಭಾರತ ಟಿ20 ವಿಶ್ವಕಪ್ ಗೆದ್ದಿದೆ ಎಂದು ಬಿಂಬಿಸುತ್ತದೆ. ಭಾರತ ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ಮೊದಲ ಬಾರಿಗೆ ಹಾಗೂ 2024ರಲ್ಲಿ ವೆಸ್ಟ್ ಇಂಡೀಸ್, ಅಮೆರಿಕದಲ್ಲಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ರೋಹಿತ್ ಶರ್ಮಾ ಜೆರ್ಸಿ ಅನಾವರಣಗೊಳಿಸುವ ಸಂದರ್ಭದಲ್ಲಿ ತಿಲಕ್ ವರ್ಮಾ ಉಪಸ್ಥಿತರಿದ್ದರು.
ಭಾರತವು ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಫೆಬ್ರವರಿ 7 ರಂದು ಆರಂಭಿಸಲಿದೆ. ಮುಂಬೈನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ, ಯುಎಸ್‌ಎ ವಿರುದ್ಧ ಆಡಲಿದೆ. ಟೀಮ್ ಇಂಡಿಯಾದ ಎಲ್ಲಾ ಗ್ರೂಪ್ ಹಂತದ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications