ಭಾರತ vs ಆಸ್ಟ್ರೇಲಿಯಾ: ಮೆಲ್ಬರ್ನ್ ಅಂಗಳದ ಪಿಚ್ ವರದಿ ಹಾಗೂ ಹವಾಮಾನ ವರದಿ

ಅಡಿಲೇಡ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿಯಾಗಿ 8 ವಿಕೆಟ್‌ಗಳಿಂದ ಗೆದ್ದುಕೊಂಡು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭರ್ಜರಿಯಾಗಿ ಆರಂಭವನ್ನು ಪಡೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಪಡೆದ ಮುನ್ನಡೆಯ ಹೊರತಾಗಿಯೂ ಆಘಾತಕಾರಿ ಸೋಲು ಕಂಡ ಭಾರತ ಮೆಲ್ಬರ್ನ್ ಅಂಗಳದಲ್ಲಿ ಹೊಸದಾಗಿ ಆರಂಬವನ್ನು ಪಡೆಯುವ ನಿರೀಕ್ಷೆಯಲ್ಲಿದೆ. 2018-19ರಲ್ಲಿ ಮೆಲ್ಬರ್ನ್ ಅಂಗಳದಲ್ಲಿ ಕಂಡ ಗೆಲುವು ಟೀಮ್ ಇಂಡಿಯಾ ಪಾಲಿಗೆ ಹುರುಪನ್ನು ನೀಡಲಿದೆ.
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ಸತತ 31ನೇ ವರ್ಷದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಕಳೆದ ವರ್ಷದ ಬಾಕ್ಸಿಂಗ್ ಡೇ ದಿನದಂದು ಆರಂಭವಾದ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾಗೆ ಎದುರಾಳಿಯಗಿತ್ತು. ಈ ಪಂದ್ಯವನ್ನು ಆಸ್ಟ್ರೇಲಿಯಾ ಭರ್ಜರಿ 247 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. 2018ರಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ಎದುರಾಳಿಯಾಗಿದ್ದು ಆ ಪಂದ್ಯವನ್ನು ಭಾರತ 137 ರನ್‌ಗಳಿಂದ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ 319 ಎಸೆತಗಳಿಂದ 106 ರನ್ ಗಳಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಪಂದ್ಯದ ಪಿಚ್ ವರದಿ ಹಾಗೂ ಹವಾಮಾನ ವರದಿಯನ್ನು ನೋಡೋಣ..

ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್
ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳಿಗೆ ಸಮಾನವಾಗಿ ಬೆಂಬಲವನ್ನು ನೀಡುವ ಪಿಚ್‌ಅನ್ನು ಹೊಂದಿದೆ. ಮೆಲ್ಬರ್ನ್ ಅಂಗಳದಲ್ಲಿ ಈ ಹಿಂದೆ ನಡೆದ ಎರಡು ಪಂದ್ಯಗಳಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 400+ ರನ್ ಕಲೆ ಹಾಕಿದೆ. ಹೀಗಾಗಿ ಉತ್ತಮ ರನ್ ಮೊದಲ ಇನ್ನಿಂಗ್ಸ್‌ನಲ್ಲಿ ಹರಿದು ಬರುವ ನಿರೀಕ್ಷೆಯಿದೆ.

ಬೌಲರ್‌ಗಳಿಗೂ ಒಳ್ಳೆಯ ಅವಕಾಶ
ಎರಡು ಮತ್ತು ಮೂರನೇ ದಿನದ ಆಟದ ನಂತರ ವೇಗದ ಬೌಲರ್‌ಗಳು ಪರಿಣಾಮಕಾರಿಯಾಗುವ ಸಾಧ್ಯತೆಯಿದೆ. ಪಂದ್ಯದ ಅಂತಿಮ ಹಂತದಲ್ಲಿ ಪಿಚ್ ಸ್ಪಿನ್ನರ್‌ಗಳಿಗೂ ಪೂರಕವಾಗುವ ಸಾಧ್ಯತೆಯಿದೆ. ಈ ಹಿಂದೆ ಮೆಲ್ಬರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಟ್ರೇವೊಸ್ ಹೆಡ್ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಭಾರತದ ವಿರುದ್ಧ ಅಡಿಲೇಡ್‌ನಲ್ಲಿ ಕಳಪೆ ಆಟವನ್ನು ನೀಡಿದ ಬಳಿಕ ಮೆಲ್ಬರ್ನ್‌ನಲ್ಲಿ ಪತ್ತೆ ಫಾರ್ಮ್ ಕಂಡುಕೊಳ್ಳುವ ತುಡಿತದಲ್ಲಿದ್ದಾರೆ.

ಮೆಲ್ಬರ್ನ್ ಹವಾಮಾನ ವರದಿ
ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ಹಾಗೂ ಮೂರನೇ ದಿನ ಪಂದ್ಯಕ್ಕೆ ಪೂರಕವಾದ ವಾತಾವರಣವಿರಲಿದೆ. ಆದರೆ ಪಂದ್ಯದ ಎರಡನೇ ದಿನವಾದ ಭಾನವಾರ ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ. ಆದರೆ ಇದು ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಟೆಸ್ಟ್ ಸರಣಿಯ ಐದು ದಿನವೂ ಕೂಡ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದರ ಜೊತೆಗೆ ಗಾಳಿಯಲ್ಲಿ ಶೇಕಡಾ 55ರಷ್ಟು ಆರ್ದ್ರತೆಯಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications