ಭಾರತ vs ಆಸಿಸ್ ಟೆಸ್ಟ್ ಸರಣಿ: ಆಸ್ಟ್ರೇಲಿಯಾ ತಲುಪಿದ ರೋಹಿತ್ ಶರ್ಮಾ

ಫಿಟ್‌ನೆಸ್ ಕಾರಣದಿಂದಾಗಿ ಸೀಮಿತ ಓವರ್‌ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ ಈಗ ಆಸ್ಟ್ರೇಲಿಯಾವನ್ನು ತಲುಪಿದ್ದಾರೆ. ರೋಹಿತ್ ಶರ್ಮಾ ಮುಂದಿನ ಎರಡು ವಾರಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿರಲಿದ್ದು ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ರೋಹಿತ್ ಶರ್ಮಾ ತಾವು ಆಸ್ಟ್ರೇಲಿಯಾ ತಲುಪಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಪ್ರಯಾಣಿಸಿದ ವಿಮಾನದಲ್ಲಿ ತೆಗೆದ ಸೆಲ್ಫಿ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಡಿಸೆಂಬರ್ 16ರಂದು ಆಸ್ಟ್ರೇಲಿಯಾವನ್ನು ತಲುಪಿದ್ದರೂ ಆಸಿಸ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ. ಕೊರೊನಾ ವೈರಸ್‌ನ ಕಾರಣದಿಂದಾಗಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಶರ್ಮಾ ಪೂರೈಸಬೇಕಿದ್ದು ಅದಾದ ಬಳಿಕವೇ ತಂಡವನ್ನು ಸೇರಿಕೊಲ್ಳುವ ಅವಕಾಶವಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳು ಡಿಸೆಂಬರ್ 17 ಹಾಗೂ ಡಿಸೆಂಬರ್ 26ರಂದು ಆರಂಭವಾಗಲಿದೆ. ಈ ವೇಳೆಯಲ್ಲಿ ರೋಹಿತ್ ಶರ್ಮಾ ಇನ್ನೂ ಕ್ವಾರಂಟೈನ್ ಅವಧಿಯಲ್ಲೇ ಇರಲಿದ್ದು ಪಂದ್ಯದಲ್ಲಿ ಕಣಕ್ಕಿಳಿಯುವುದು ಸಾಧ್ಯವಿಲ್ಲ. ಈ ಸಂದರ್ಭವನ್ನು ಅವರು ಮೂರನೇ ಪಂದ್ಯಕ್ಕಾಗಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ ಅಡಿಲೇಡ್‌ನಲ್ಲಿ ನಡೆಯಲಿದೆ. ಈ ಪಂದ್ಯ ಅಹರ್ನಿಶಿಯಾಗಿ ನಡೆಯಲಿದ್ದು ಭಾರತದ ಮೊಟ್ಟ ಮೊದಲ ವಿದೇಶಿ ಪಿಂಕ್ ಬಾಲ್ ಪಂದ್ಯ ಇದಾಗಿದೆ. ಹೀಗಾಗಿ ಈ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಮೂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications