Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೋಲು ಕೊಟ್ಟು ಬಾರಿಸಿಕೊಂಡ ಬಾರ್ಮಿ ಆರ್ಮಿ: ಕೊಹ್ಲಿಯನ್ನು ಆಡಿಕೊಂಡವರ ಪಾಡು ಅಯ್ಯೋ ಪಾಪ!!!

ಭಾನುವಾರ ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಲಕ್ನೋದಲ್ಲಿ ಮುಖಾಮುಖಿಯಾಗಿದ್ದು ಕುತೂಹಲಕಾರಿ ಪಂದ್ಯಕ್ಕೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಬ್ಯಾಟಿಂಗ್‌ಗೆ ಸವಾಲಾಗಿದ್ದ ಪಿಚ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ಗೆ ಸಾಧಾರಣ ಮೊತ್ತದ ಗುರಿ ನಿಗದಿಪಡಿಸಿತ್ತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

49ನೇ ಶತಕದ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಭಾರೀ ನಿರಾಸೆಯಾಗಿದೆ. ಆದರೆ ಇದೇ ವಿಚಾರವನ್ನು ಇಂಗ್ಲೆಂಡ್ ತಂಡದ ಅಭಿಮಾನಿಗಳ ಗುಂಪಾದ 'ಬಾರ್ಮಿ ಆರ್ಮಿ' ಮೀಮ್ ಮೂಲಕ ಕಾಳೆಳೆದಿತ್ತು.

India v England: Here is how Barmy Army troll on Virat Kohli back fired

ಆದರೆ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್‌ಗಳಾದ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಕೂಡ ಶೂನ್ಯಕ್ಕೆ ಔಟ್‌ ಆಗುವ ಆದ ಕಾರಣ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗುಂಪಾದ ಭಾರತ್ ಆರ್ಮಿ ಕೂಡ ಅದೇ ಮಾದರಿಯಲ್ಲಿ ಕಟುವಾಗಿ ಪ್ರತ್ಯುತ್ತರ ನೀಡಿದೆ. ಇನ್ನು ಮತ್ತೊಂದೆಡೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಇಂಗ್ಲೆಂಡ್ ತಂಡ ಶೀಘ್ರವಾಗಿ ತವರಿಗೆ ಮರಳಲು ಇರುವ ವಿಮಾನದ ದಾರಿಯನ್ನು ಸೂಚಿಸಿ ಟಾಂಗ್ ಕೊಟ್ಟಿದ್ದಾರೆ.

ಬಾರ್ಮಿ ಆರ್ಮಿ ಎಕ್ಸ್‌ನಲ್ಲಿ ಕೊಳದಲ್ಲಿ ವಿರಾಟ್ ಕೊಹ್ಲಿಯ ಮುಖವನ್ನು ಹೊಂದಿರುವ ಬಾತುಕೋಳಿ(ಡಕ್)ಯ ಮಾರ್ಫ್ ಮಾಡಿದ ಫೋಟೋವನ್ನು ಹಾಸ್ಯದ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಆದರ ನಂತರ ಭಾರತ್ ಆರ್ಮಿ ಅದೇ ಫೋಟೋಗೆ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಅವರ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಂಡಿದೆ.

ಇನ್ನು ಬಾರ್ಮಿ ಆರ್ಮಿಯ ಎಕ್ಸ್‌ ಪೋಸ್ಟ್‌ಗೆ ಪಾರ್ಥಿವ್ ಪಟೇಲ್ ಪ್ರತಿಕ್ರಿಯೆ ಸಾಕಷ್ಟು ವೈರಲ್ ಆಗುತ್ತಿದೆ. "ನವೆಂಬರ್ 12... ಅತ್ಯಂತ ವೇಗವಾಗಿ ಲಂಡನ್‌ಗೆ ಮರಳುವ ದಾರಿ.. ಏರ್ ಇಂಡಿಯಾ ನಿಮ್ಮನ್ನು ಕೇರ್ ಮಾಡಲಿದೆ" ಎಂದು ಪೋಸ್ಟ್ ಮಾಡಿದ್ದಾರೆ.

Story first published: Sunday, October 29, 2023, 21:16 [IST]
Other articles published on Oct 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+