ನಿದಹಾಸ್ ಟ್ರೋಫಿ ಫೈನಲ್ ಪ್ರವೇಶಿಸುವ ತವಕದಲ್ಲಿ ಭಾರತ

Posted By:
India v/s Bangladesh t20 match updates

ಕೊಲಂಬೊ, ಮಾರ್ಚ್ 14; ಶ್ರೀಲಂಕಾನಲ್ಲಿ ನಡೆಯುತ್ತಿರುವ ನಿದಹಾಸ್ ಟಿ20 ಸರಣಿಯಲ್ಲಿ ಇಂದು ಭಾರತವು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಸರಣಿಯಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂದು ಸಂಜೆ 7 ಕ್ಕೆ ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸಿದಲ್ಲಿ ಟೂರ್ನಿಯ ಫೈನಲ್‌ ಹಂತಕ್ಕೆ ಭಾರತ ಪ್ರವೇಶಿಸಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸೋತಿತ್ತು, ಆದರೆ ಆ ನಂತರ ಬಾಂಗ್ಲಾದೇಶ ವಿರುದ್ಧ ಹಾಗೂ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸ ಮರಳಿ ಸಂಪಾದಿಸಿ ಈಗ ಉತ್ತಮ ಲಯದಲ್ಲಿದೆ.

ಬಂಗ್ಲಾದೇಶವು ಈಗಾಗಲೇ ಭಾರತ ತಂಡದ ವಿರುದ್ಧ ಒಂದು ಪಂದ್ಯ ಸೋತಿದ್ದು ಇಂದು ಮುಯ್ಯಿ ತೀರಿಸಿಕೊಳ್ಳುವ ಜಿದ್ದಿನೊಂದಿಗೆ ಕಣ್ಣಕ್ಕಿಳಿಯಲಿದೆ. ಶ್ರೀಲಂಕಾ ವಿರುದ್ಧ ಕಳೆದ ಪಂದ್ಯದಲ್ಲಿ ಬಂಗ್ಲಾ ಸಾಧಿಸಿದ ವಿರೋಚಿತ ಗೆಲವುವು ಅದರ ಆತ್ಮವಿಶ್ವಾಸ ಹೆಚ್ಚಿಸಿದೆ.

ಭಾರತವು ಕಳೆದ ಪಂದ್ಯದಲ್ಲಿ ಆಡಿದ ಆಟಗರಾರರೊಂದಿಗೆ ಕಣಕ್ಕಿಳುವ ಸಾಧ್ಯತೆ ಹೆಚ್ಚಿದ್ದು,ಪ್ರಸ್ತುತ ಕಳಪೆ ಪಾರ್ಮ್‌ನಲ್ಲಿರುವ ನಾಯಕ ರೋಹಿತ್ ಶರ್ಮಾ ಅವರು ಫಾರ್ಮ್‌ಗೆ ಮರಳು ಹರಸಾಹಸ ಪಡುತ್ತಿದ್ದಾರೆ. ಇನ್ನುಳಿದಂತೆ ಎಲ್ಲ ಆಟಗಾರರು ಸಮತೋಲಿತ ಆಟ ಪ್ರದರ್ಶಿಸುತ್ತಿದ್ದು, ಇಂದಿನ ಪಂದ್ಯ ಗೆದ್ದು ಫೈನಲ್ ಪ್ರವೇಶಿಸಲು ಕಾತರರಾಗಿದ್ದಾರೆ.

ಅಕಸ್ಮಾತ್ ಬಾಂಗ್ಲಾ ವಿರುದ್ಧ ಈ ಪಂದ್ಯದಲ್ಲಿ ಭಾರತ ಸೋತರೂ ಸಹ ಫೈನಲ್ ಪ್ರವೇಶಿಸುವ ಅವಕಾಶ ಇರುತ್ತದೆ. ಆಗ ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ನಡೆವ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಸೋಲಬೇಕಾಗುತ್ತದೆ.

Story first published: Wednesday, March 14, 2018, 18:39 [IST]
Other articles published on Mar 14, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ